

ಅಫಜಲಪುರ: ದೇವಲಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಹಳ್ಳಿಗಳಲ್ಲಿ ಕೃಷಿ ಉಪಕರಣಗಳನ್ನು ಕಳವು ಮಾಡುವ ಮೂಲಕ ರೈತರು ಹಾಗೂ ಪೊಲೀಸರಿಗೆ ತಲೆನೋವಾಗಿದ್ದ ಮೂವರು ಆರೋಪಿಗಳನ್ನು ಆರಕ್ಷಕರು ಗುರುವಾರ ಬಂಧಿಸಿದ್ದಾರೆ.
ದೇಸಾಯಿ ಕಲ್ಲೂರ ಗ್ರಾಮದ ಲ್ಮಣ ಗುರಪ್ಪ, ಮಲ್ಲಪ್ಪ ಶಿವಗುಳೆಪ್ಪ ಬಂಧಿತರು. ತೆಲ್ಲೂರ, ೂಳನೂರ, ಸಿರಸಗಿ, ಬಂದರವಾಡ, ಸಾಗನೂರ, ಚಿಣಮಗೇರಾ, ಹೂವಿನಹಳ್ಳಿ, ದೇವಲಗಾಣಗಾಪುರ, ಹಾವನೂರ, ಗೊಬ್ಬೂರ (ಬಿ) ಗ್ರಾಮಗಳ ರೈತರ ಹೊಲಗಳಲ್ಲಿನ ಪಂಪ್ಸೆಟ್ಗಳ ಕೇಬಲ್ ಹಾಗೂ ಸ್ಟಾರ್ಟರ್ಗಳು ಕಳ್ಳತನವಾಗಿರುವ ಬಗ್ಗೆ ದೇವಲಗಾಣಗಾಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಎಸ್ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ ಮೇಣ್ಣನವರ್, ಡಿವೈಎಸ್ಪಿ ತಮ್ಮಾರಾಯ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸಂಗೀತಾ ಶಿಂಧೆ, ಶ್ರೀದೇವಿ ಕಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಗುರುವಾರ ಆರೋಪಿಗಳನ್ನು ಬಂಧಿಸಿದೆ. 54 ಸಾವಿರ ರೂ. ಮೌಲ್ಯದ ಕೇಬಲ್ ವೈರ್ ಹಾಗೂ ಸ್ಟಾರ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಳಿಕ ಠಾಣೆ ಆವರಣದಲ್ಲಿ 36 ರೈತರಿಗೆ ಕೇಬಲ್ ಹಾಗೂ ಸ್ಟಾರ್ಟರ್ಗಳನ್ನು ಮರಳಿ ಹಸ್ತಾಂತರಿಸಲಾಯಿತು. ಸಿಬ್ಬಂದಿ ಮಕ್ತುಮ್ ಪಟೇಲ್, ಶಿವಯ್ಯ, ಆನಂದ, ಯಲ್ಲಪ್ಪ, ಅಣ್ಣಪ್ಪ, ವಿಠ್ಠಲ್, ಚಂದ್ರಶಾ, ಸಂಗಣ್ಣ, ಬಲರಾಮ, ಸಂತೋಷ, ಕಾಶಿನಾಥ, ಭಾಗಣ್ಣ ಇತರರಿದ್ದರು.