ಇದು ನನ್ನದಲ್ಲ ಶಿಕ್ಷಕರ ವಿಶ್ವಾಸದ ಗೆಲುವು

ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಚುನಾಯಿತರಾದ ಶಶೀಲ್​ ನಮೋಶಿ ಅವರನ್ನು ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಕಲಬುರಗಿ ಪಿಡಿಎ ಕಾಲೇಜಿನಲ್ಲಿ ಗುರುವಾರ ಸತ್ಕರಿಸಲಾಯಿತು. ರಾಜಾ ಭೀಮಳ್ಳಿ, ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪುರೆ, ಅನೀಲಕುಮಾರ ಮರಗೋಳ, ನಾಗಣ್ಣ ಘಂಟಿ ಇತರರಿದ್ದರು.
ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಚುನಾಯಿತರಾದ ಶಶೀಲ್​ ನಮೋಶಿ ಅವರನ್ನು ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಕಲಬುರಗಿ ಪಿಡಿಎ ಕಾಲೇಜಿನಲ್ಲಿ ಗುರುವಾರ ಸತ್ಕರಿಸಲಾಯಿತು. ರಾಜಾ ಭೀಮಳ್ಳಿ, ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪುರೆ, ಅನೀಲಕುಮಾರ ಮರಗೋಳ, ನಾಗಣ್ಣ ಘಂಟಿ ಇತರರಿದ್ದರು.
Published on: 

ಕಲಬುರಗಿ: ಇದು ನನ್ನ ವೈಯಕ್ತಿಕ ಗೆಲುವಲ್ಲ, ಕಲ್ಯಾಣ ಕರ್ನಾಟಕದ ಸಮಸ್ತ ಶಿಕ್ಷಕರು ನನ್ನ ಮೇಲೆ ಇರಿಸಿರುವ ವಿಶ್ವಾಸ, ಪ್ರೀತಿ ಮತ್ತು ಅಭಿಮಾನಕ್ಕೆ ಸಂದ ಗೆಲುವು. ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು, ನ್ಯಾಯಯುತ ಬೇಡಿಕೆಗೆ ಧ್ವನಿಯಾಗುವುದರ ಜತೆ ಅವರ ಹಿತಾಸಕ್ತಿ ಕಾಪಾಡುವುದೇ ನನ್ನ ಮೊದಲ ಆದ್ಯತೆ ಎಂದು ವಿಧಾನ ಪರಿಷತ್​ ನೂತನ ಸದಸ್ಯ ಶಶೀಲ್​ ಜಿ.ನಮೋಶಿ ಭಾವುಕರಾಗಿ ಹೇಳಿದರು.

ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಸ್ಯಾಕ್​ ಸಭಾಂಗಣದಲ್ಲಿ ಸಂಸ್ಥೆ ಗುರುವಾರ ಆಯೋಜಿಸಿದ್ದೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಅನೇಕ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಶಿಕ್ಷಕರ ಕಷ್ಟ ಆಲಿಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಸಂಸ್ಥೆ ಉಪಾಧ್ಯ ರಾಜಾ ಭೀಮಳ್ಳಿ, ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಜಯ್​ ಮಾಕಲ್​, ಎಂಆರ್​ಎಂ ಸಿ ಡಾ.ಆರುಂಧತಿ ಪಾಟೀಲ್​, ವಿ.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹೇಶ ಗಂವ್ಹಾರ ಮಾತನಾಡಿದರು.

ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪುರೆ, ಅನೀಲಕುಮಾರ ಮರಗೋಳ, ನಾಗಣ್ಣ ಘಂಟಿ, ನಿಶಾಂತ ಎಲಿ, ಡಾ.ಎಸ್​.ಆರ್​. ಹೊಟ್ಟಿ, ಆಡಳಿತಾಧಿಕಾರಿ ಡಾ.ಎಸ್​.ಎಲ್​. ಹಿರೇಮಠ ಇತರರಿದ್ದರು. ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಪ್ರಾಸ್ತವಿಕ ಮಾತನಾಡಿದರು. ಡಾ.ಶರಣಬಸಪ್ಪ ಕಮ್ಮಾರ ಪ್ರಾರ್ಥಿಸಿದರು. ಉಮಾ ರೇವೂರ ನಿರೂಪಣೆ ಮಾಡಿದರು.

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿ, ಶಿಕ್ಷಕರ ಗೌರವ ಮತ್ತು ಅವರ ವೃತ್ತಿಪರ ಸಮಸ್ಯೆ ಪರಿಹಾರಕ್ಕೆ ಮುಂದೆಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮ ಮೇಲೆ ವಿಶ್ವಾಸವಿರಿಸಿ 5ನೇ ಬಾರಿ ಬೆಂಬಲಿಸಿ ಗೆಲ್ಲಿಸಿದ ಎಲ್ಲ ಶಿಕ್ಷಕ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು.
> ಶಶೀಲ್​ ನಮೋಶಿ ವಿಧಾನ ಪರಿಷತ್​ ಸದಸ್ಯ