ಜೀವವೈವಿಧ್ಯ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯ

ಕಲಬುರಗಿಯ ಶರಣಬಸವೇಶ್ವರ ವಿಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಹಿರಿಯ ಪರಿಸರ ವಿಾನಿ ಡಾ. ಟಿ.ವಿ. ರಾಮಚಂದ್ರ ಉದ್ಘಾಟಿಸಿದರು. ಡಾ.ಬಿ.ರಾಮಕೃಷ್ಣ ರೆಡ್ಡಿ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಕರುಣಾ ಇಂಗನ್​, ಪವನ ಮೋಹನರಾವ ಇತರರಿದ್ದರು
ಕಲಬುರಗಿಯ ಶರಣಬಸವೇಶ್ವರ ವಿಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಹಿರಿಯ ಪರಿಸರ ವಿಾನಿ ಡಾ. ಟಿ.ವಿ. ರಾಮಚಂದ್ರ ಉದ್ಘಾಟಿಸಿದರು. ಡಾ.ಬಿ.ರಾಮಕೃಷ್ಣ ರೆಡ್ಡಿ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಕರುಣಾ ಇಂಗನ್​, ಪವನ ಮೋಹನರಾವ ಇತರರಿದ್ದರು
Published on: 

ಕಲಬುರಗಿ: ಯೋಜಿತವಲ್ಲದ ನಗರೀಕರಣ, ಮರಗಳ ನಾಶ ಮತ್ತು ಪರಿಸರ ಮಾಲಿನ್ಯದಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದು, ಪರಿಸರ ಸಂರಕ್ಷ‘ಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹಿರಿಯ ಪರಿಸರ ವಿಾನಿ ಡಾ. ಟಿ.ವಿ. ರಾಮಚಂದ್ರ ಹೇಳಿದರು.

ಶರಣಬಸವೇಶ್ವರ ವಿಾನ ಕಾಲೇಜಿನ ಪ್ರಾಣಿವಿಜ್ಞಾನ ವಿಭಾಗದಿಂದ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಫರ್ನ್ಸ್​ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜೀವವೈವಿಧ್ಯ ದಾಖಲೀಕರಣ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ತಂತ್ರಾನ ಕುರಿತ ಎರಡು ದಿನಗಳ ಪ್ರಾಯೋಗಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಜೀವವೈವಿಧ್ಯದ ಸಮೀಕ್ಷೆ, ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಗುರುತಿಸುವಿಕೆ ಹಾಗೂ ವೈಜ್ಞಾನಿಕ ದಾಖಲೀಕರಣದಲ್ಲಿ ಆಧುನಿಕ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಭೌಗೋಳಿಕ ಮಾಹಿತಿ ವ್ಯವಸ್ಥೆಯ ಮೂಲಕ ಜೀವಿಗಳ ವಿತರಣೆಯ ನೆ ತಯಾರಿಸಿ, ನೈಸರ್ಗಿಕ ಸಂಪನ್ಮೂಲಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಬಹುದು ಎಂದರು.

ಪಶ್ಚಿಮ ಟ್ಟಗಳ ಅರಣ್ಯಗಳು ಮಳೆನೀರಿನ ಸಂಗ್ರಹಣೆ, ಅಂತರ್ಜಲ ಮರುಪೂರಣ ಮತ್ತು ಜಲಚಕ್ರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಅರಣ್ಯ ಹಾಗೂ ಪರಿಸರ ವ್ಯವಸ್ಥೆಯ ಸಂರಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಬಿ.ರಾಮಕೃಷ್ಣ ರೆಡ್ಡಿ, ವಿಭಾಗದ ಮುಖ್ಯಸ್ಥೆ ಡಾ. ಬಸವರಾಜೇಶ್ವರಿ ಇಂದೂರ, ಸಹಾಯಕ ಪ್ರಾಧ್ಯಾಪಕಿ ಡಾ. ಕರುಣಾ ಇಂಗನ್​, ಸಂಯೋಜಕ ಪವನ ಮೋಹನರಾವ, ಸಂಪನ್ಮೂಲ ವ್ಯಕ್ತಿಗಳಾದ ವ್ರಿಜುಲಾಲ್​ ಎಂ.ವಿ., ಭುವನ್​ ಆರ್ಯ, ಟಿ. ಮೊಂಡಲ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net