

ಸೇಡಂ: ನಮ್ಮ ನೆಲವನ್ನು ಕೇಂದ್ರ ಸ್ಥಾನ ಮಾಡಿಕೊಂಡು ಆಳ್ವಿಕೆ ನಡೆಸಿದ ರಾಷ್ಟ್ರಕೂಟ ಇತಿಹಾಸ ಬಹುದೊಡ್ಡದಾಗಿದ್ದು, ಇಂದಿನ ನೀಲಹಳ್ಳಿಯೇ ಅಂದಿನ ಸಂದರ್ಭದಲ್ಲಿ ನಾಣ್ಯ ತಯಾರು ಮಾಡುವ ಟಂಕ ಶಾಲೆ(ಖಜಾನೆ)ಯಾಗಿತ್ತು ಎಂದು ಸಂಶೋಧಕ ಮುಡಬಿ ಗುಂಡೇರಾವ ಹೇಳಿದರು.
ನೀಲಹಳ್ಳಿಯಲ್ಲಿ ದಸರಾ ಉತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸ, ಸಾಂಸತಿಕ ಸಂಭ್ರಮದಲ್ಲಿ ಮಾತನಾಡಿ, 8 ಮತ್ತು 9ನೇ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಇಡೀ ದೇಶಕ್ಕೆ ಆರ್ಥಿಕ ಚಟುವಟಿಕೆಗಳಿಗೆ ನಾಣ್ಯಗಳನ್ನು ಪೂರೈಸಿದ ಕೀರ್ತಿ ನೀಲಹಳ್ಳಿ ಮತ್ತು ಕೊಂಕನಳ್ಳಿಗೆ ಸಲ್ಲುತ್ತದೆ. ರಾಷ್ಟ್ರಕೂಟರ ದೊರೆ ಅಮೋವರ್ಷ ನೃಪತುಂಗ ಚಕ್ರವರ್ತಿಯು ಕೊಲ್ಹಾಪುರ ಮಹಾಲ್ಮಯ ಆರಾಧಕನಾಗಿದ್ದನು. ಾಮ ನಿವಾರಣೆಗೆ ತನ್ನ ಕಿರುಬೆರಳನ್ನು ಶಕ್ತಿ ದೇವತೆಗೆ ನೈವೇದ್ಯವಾಗಿ ಅರ್ಪಿಸಿರುವ ಟನೆ ನಿಜಕ್ಕೂ ರೋಚಕವಾಗಿದೆ ಎಂದರು.
ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಅಶೋಕ ಸಾಹು, ವೀರೇಶ ಶೆಟ್ಟಿ, ದೇವಿಂದ್ರಪ್ಪ ಪಂಚಾಳ, ಜಹಾಂಗೀರ, ಉದಯಕುಮಾರ, ತಿಪ್ಪಣ್ಣ, ಮಾರುತಿ ಇತರರಿದ್ದರು.