ಮಹಾನ್​ ಪವಾಡ ಪುರುಷ ಮರುಳಸಿದ್ಧ ಶ್ರೀ

ಪುಣ್ಯಸ್ಮರಣೆ ನಿಮಿತ್ತ ಮಾಡಿಯಾಳದ ಪ್ರಮುಖ ಬೀದಿಗಳಲ್ಲಿ ಶ್ರೀ ವಪ್ಪತೇಶ್ವರ ಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಪುಣ್ಯಸ್ಮರಣೆ ನಿಮಿತ್ತ ಮಾಡಿಯಾಳದ ಪ್ರಮುಖ ಬೀದಿಗಳಲ್ಲಿ ಶ್ರೀ ವಪ್ಪತೇಶ್ವರ ಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
Published on: 

ಆಳಂದ: ಶ್ರೀ ಮರುಳಸಿದ್ಧ ಸ್ವಾಮಿಗಳು ಮಹಾನ್​ ಪವಾಡ ಪುರುಷರಾಗಿದ್ದು, ರಾಜಕೀಯದಲ್ಲಿ ಉತ್ತಮ ಹೆಸರು ಗಳಿಸುವುದರ ಜತೆಗೆ ಒಳ್ಳೆಯ ಹುದ್ದೆಯಲ್ಲಿರುತ್ತೀಯ ಎಂದು ನನಗೆ ಭವಿಷ್ಯ ಹೇಳಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಸ್ಮರಿಸಿದರು.

ಮಾಡಿಯಾಳದ ಶ್ರೀ ವಪ್ಪತ್ತೇಶ್ವರ ವಿರಕ್ತ ಮಠದಲ್ಲಿ ಶ್ರೀ ವಪ್ಪತೇಶ್ವರ ಸ್ವಾಮಿಗಳ 50ನೇ ಪುಣ್ಯಸ್ಮರಣೆ ಹಾಗೂ ಸ್ವರ್ಣ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಕುಟುಂಬದ ಎಲ್ಲರ ಜಾತಕವನ್ನು ಶ್ರೀಗಳೇ ಬರೆದಿದ್ದಾರೆ. ಗುರುಗಳ ಪಂಚಾಂಗ ವಾಣಿಯಂತೆ ನಾನು ಮೂರು ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಗೆದ್ದಿದ್ದೇನೆ ಎಂದರು.

ನಂದಗಾಂವ್​ದ ಶ್ರೀ ರಾಜಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನೆ&ಮಠ, ಮಂದಿರ.. ಯಾವುದೇ ಆಗಿರಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಠದ ಎದುರುಗಡೆ ನಾಲಿ ನೀರು ಹರಿದು ಹೋಗುತ್ತಿದ್ದು, ಕೊಳಚೆ ನೀರನ್ನು ದಾಟಿ ಶ್ರೀಮಠಕ್ಕೆ ಬರುವ ಸ್ಥಿತಿ ಇದೆ. ಮಾಡಿಯಾಳ ಭಕ್ತರು ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಪೀಠಾಧಿಪತಿ ಶ್ರೀ ವಪ್ಪತ್ತೇಶ್ವರ ಮರಳಸಿದ್ಧ ಸ್ವಾಮೀಜಿ ಅಧ್ಯತೆ ವಹಿಸಿದ್ದರು.

ಶ್ರೀ ಪ್ರಭುರಾಯ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್​, ಪ್ರಮುಖರಾದ ಶರಣಗೌಡ ಪಾಟೀಲ್​, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ಸಂಕೇತ ಕಲಶೆಟ್ಟಿ, ಸಿದ್ದರಾಮ ಶಿರವಾಳ, ಚನ್ನು ಬಿರಾದಾರ, ಬಸವರಾಜ ಕಲಶೆಟ್ಟಿ, ಸಂಗಮನಾಥ ಉಪ್ಪಿನ್​, ಗುರುಬಸಯ್ಯ ಸ್ವಾಮಿ, ನಾಗಯ್ಯ ಸ್ವಾಮಿ, ಅಮರನಾಥ ಕಲಶೆಟ್ಟಿ, ಸಿದ್ದಾರೂಡ ಕಂಬಾರ, ಗಂಗಾಧರ ಕಲಶೆಟ್ಟಿ, ಸುಭಾಷ ಪಾಟೀಲ್​, ಮಾದೇವ ಉಪ್ಪಿನ್​, ಗುರುಲಿಂಗಯ್ಯ ಸ್ವಾಮಿ ಇತರರಿದ್ದರು.

ಶರಣಬಸಪ್ಪ ಮಡ್ಡಿತೋಟ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಒಪ್ಪತ್ತೇಶ್ವರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ವರ್ಣ ಮಹೋತ್ಸವ ಅಂಗವಾಗಿ ಶೀಮಠದಲ್ಲಿ ನಾಗಲಿಂಗಯ್ಯ ಅವರಿಂದ ಐದು ದಿನ ಪ್ರವಚನ ನಡೆಯಿತು. ವೀರಯ್ಯಸ್ವಾಮಿ ಹಿತ್ತಲಶಿರೂರ ಸಂಗೀತ, ಸಿದ್ದಣ್ಣ ತಬಲಾ ಸಾಥ್​ ನೀಡಿದರು. ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವಪ್ಪತ್ತೇಶ್ವರ ಸ್ವಾಮಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಪ್ರತಿಯೊಬ್ಬರೂ ದೇವರ ಸ್ಮರಣೆ ಮಾಡಬೇಕು. ದೇವರಲ್ಲಿ ಭಕ್ತಿ ತೋರಿಸದೆ, ನಮ್ಮ ಸಂಸತಿ ಮರೆತು ಬಾಳುತ್ತಿದ್ದೇವೆ. ಅದಕ್ಕಾಗಿ ನಿಸರ್ಗದ ಕೋಪದಿಂದ ಮಳೆ ಬರುತ್ತಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಕೆಲಸವಾಗಲಿ. ಪ್ರಕೃತಿ ವಿಕೋಪದಿಂದ ನಮ್ಮೆಲ್ಲರನ್ನು ಧರ್ಮ ಗುರುಗಳು ಕಾಪಾಡುತ್ತಾರೆ.
> ಶ್ರೀ ರಾಜಶೇಖರ ಸ್ವಾಮೀಜಿ, ನಂದಗಾಂವ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net