ಶಿಕ್ಷಕರ ಸರ್ವತೋಮುಖ ಏಳಿಗೆಗೆ ಸರ್ಕಾರ ಬದ್ಧ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಜೇವರ್ಗಿಯಲ್ಲಿ ಸಚಿವ ಡಾ.ಅಜಯಸಿಂಗ್​ ಮತಯಾಚಿಸಿದರು. ಶರಣಪ್ಪ ಮಟ್ಟೂರ, ಅಲ್ಲಮಪ್ರಭು ಪಾಟೀಲ್​, ಚಂದ್ರಶೇಖರ ಪಾಟೀಲ್​, ಡಾ.ಕಿರಣ ದೇಶಮುಖ ಇತರರಿದ್ದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಜೇವರ್ಗಿಯಲ್ಲಿ ಸಚಿವ ಡಾ.ಅಜಯಸಿಂಗ್​ ಮತಯಾಚಿಸಿದರು. ಶರಣಪ್ಪ ಮಟ್ಟೂರ, ಅಲ್ಲಮಪ್ರಭು ಪಾಟೀಲ್​, ಚಂದ್ರಶೇಖರ ಪಾಟೀಲ್​, ಡಾ.ಕಿರಣ ದೇಶಮುಖ ಇತರರಿದ್ದರು.
Published on: 

ಜೇವರ್ಗಿ: ಶಿಕ್ಷಕರ ಹಕ್ಕುಗಳ ರಕ್ಷಣೆ, ವೃತ್ತಿಪರ ಗೌರವ ಹೆಚ್ಚಳ ಜತೆ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್​ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯಸಿಂಗ್​ ಹೇಳಿದರು.

ಪಟ್ಟಣದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಗುರುವಾರ ಕರೆದಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ಸಂಬಂಧಿತ ಸಮಸ್ಯೆ, ವೇತನ ಮತ್ತು ಸೇವಾ ಸೌಲಭ್ಯ, ವೃತ್ತಿಪರ ಅಭಿವೃದ್ಧಿ ಹಾಗೂ ಹಳೆಯ ಪಿಂಚಣಿ ಯೋಜನೆ (ಒಪಿಎಸ್​) ಮರುಸ್ಥಾಪನೆ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಶಿಕ್ಷಕರು ಕೇವಲ ಶಿಕ್ಷಣ ವ್ಯವಸ್ಥೆಯ ಭಾಗವಲ್ಲ, ಸಮಾಜದ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿ. ಅವರ ಹಕ್ಕು, ಗೌರವ ಮತ್ತು ವೃತ್ತಿಪರ ಭದ್ರತೆಗೆ ಆದ್ಯತೆ ನೀಡುವ ಮೂಲಕ ಸಮಸ್ಯೆ ಮತ್ತು ಆಶೋತ್ತರಗಳು ಮೇಲ್ಮನೆಯಲ್ಲಿ ಪರಿಣಾಮಕಾರಿಯಾಗಿ ಪ್ರತಿಧ್ವನಿಸಲು ಶರಣಪ್ಪ ಮಟ್ಟೂರ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಮಟ್ಟೂರ ಮಾತನಾಡಿ, ತಮಗೊಂದು ಅವಕಾಶ ನೀಡುವಂತೆ ಕೋರಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಡಾ.ಚಂದ್ರಶೇಖರ ಪಾಟೀಲ್​, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್​ ಹರವಾಳ, ಜಿಲ್ಲಾ ಕಾಂಗ್ರೆಸ್​ ಅಧ್ಯ ಡಾ.ಕಿರಣ ದೇಶಮುಖ, ಮಹಿಳಾ ಘಟಕ ಅಧ್ಯಕ್ಷೆ ರೇಣುಕಾ ಸಿಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net