ರೈತರ ಪ್ರಗತಿಗೆ ಸಹಕಾರ ಸಂಘಗಳ ಶ್ರಮ

ದೇವಲಗಾಣಗಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ನವೀಕಣ ಕಟ್ಟಡ ಹಾಗೂ ಸುವರ್ಣ ಮಹೋತ್ಸವವನ್ನು ಶಾಸಕ ಎಂ.ವೈ.ಪಾಟೀಲ್​ ಉದ್ಘಾಟಿಸಿದರು. ಪ್ರಿಯಾಂಕ್​ ಪೂಜಾರಿ, ಪ್ರಕಾಶ ಜಮಾದಾರ, ಶಿವಕುಮಾರ ನಾಟಿಕಾರ ಅರವಿಂದ ಗುತ್ತೇದಾರ್​ ಇದ್ದರು.
ದೇವಲಗಾಣಗಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ನವೀಕಣ ಕಟ್ಟಡ ಹಾಗೂ ಸುವರ್ಣ ಮಹೋತ್ಸವವನ್ನು ಶಾಸಕ ಎಂ.ವೈ.ಪಾಟೀಲ್​ ಉದ್ಘಾಟಿಸಿದರು. ಪ್ರಿಯಾಂಕ್​ ಪೂಜಾರಿ, ಪ್ರಕಾಶ ಜಮಾದಾರ, ಶಿವಕುಮಾರ ನಾಟಿಕಾರ ಅರವಿಂದ ಗುತ್ತೇದಾರ್​ ಇದ್ದರು.
Published on: 

ಅಫಜಲಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಪ್ರಗತಿ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕ ಸಹಾಯ ಒದಗಿಸಲು ಶ್ರಮಿಸುತ್ತಿವೆ ಎಂದು ಶಾಸಕ ಎಂ.ವೈ.ಪಾಟೀಲ್​ ಹೇಳಿದರು.

ದೇವಲಗಾಣಗಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕಣಗೊಂಡ ಕಟ್ಟಡ ಹಾಗೂ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂವು ಐದು ದಶಕಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಸಂಘದ ಸದಸ್ಯರ ಅಶೋತ್ತರ ಈಡೇರಿಸಿದರೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಇಂದಿನ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸದಸ್ಯರಿಗೆ ತ್ವರಿತ ಹಾಗೂ ಸುಲಭ ಸೇವೆ ನೀಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಪ್ರಿಯಾಂಕ್​ ಪೂಜಾರಿ ಮಾತನಾಡಿ, ನಮ್ಮ ಸಂಘ ಸುಮಾರು 50 ವರ್ಷಗಳಿಂದ ಜನರಿಗೆ ಗುಣಮಟ್ಟದ ಸೇವೆ ನೀಡಿದ್ದು, ಮುಂದೆಯೂ ಮತ್ತಷ್ಟು ಬಲಪಡಿಸಿ, ತ್ವರಿತ ಸೇವೆಗೆ ಆದ್ಯತೆ ನೀಡಲಾಗುವುದು. ಸಂಘದ ವ್ಯಾಪ್ತಿಯ ಪ್ರತಿ ರೈತನಿಗೂ ಸಹಕಾರದ ಪ್ರಯೋಜನ ತಲುಪಬೇಕು ಎಂಬುದೇ ಧ್ಯೇಯವಾಗಿದೆ ಎಂದು ಹೇಳಿದರು.

ಪ್ರಮುಖರಾದ ಅರವಿಂದ ಗುತ್ತೇದಾರ್​, ಪ್ರಕಾಶ ಜಮಾದಾರ, ಶಿವಕುಮಾರ ನಾಟೀಕಾರ, ಅಜಿತ್​ ಪಾಟೀಲ್​, ಮಾರುತಿ ಮೂರನೆತ್ತಿ, ಗುಂಡಪ್ಪ ಹೊಸಮನಿ, ಮಹಾದೇವ ಗುತ್ತೇದಾರ್​, ಸಂಗಣ್ಣ ಬಳಗುಂಪ, ಅಮೃತ ಮಲಗೊಂಡ, ದತ್ತಾತ್ರೇಯ ಮುದಕಣ, ಜಿತೇಂದ್ರ ಬಂಡಗರ, ಶರಣಪ್ಪ ಹುಲ್ಲೂರ, ಯಲ್ಲಪ್ಪ ಮುದಕಣ, ರಫೀಕ್​ ಇಬ್ರಾಹಿಂ, ವೀರಭದ್ರಪ್ಪ ಪಾಟೀಲ್​, ಚಂದ್ರಕಾಂತ ವಗ್ಗೆ, ನಿರ್ಮಲಾ ಶರಣಬಸಪ್ಪ, ಶರಣಮ್ಮ ಜಮಾದಾರ, ಮಲ್ಲಿಕಾರ್ಜುನ ನಾಯ್ಕೋಡಿ ಇತರರಿದ್ದರು.

ಸ್ವಂತ ಖರ್ಚಿನಲ್ಲಿ ಕಟ್ಟಡ ನವೀಕರಣ

ದೇವಲಗಾಣಗಾಪುರದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಅಧ್ಯಕ್ಷ ಪ್ರಿಯಾಂಕ್​ ಪೂಜಾರಿ ಅವರು ವೈಯಕ್ತಿಕವಾಗಿ ಸುಮಾರು 10 ಲಕ್ಷ ರೂ. ವ್ಯಯಿಸಿ ಅವರ ತಾತನವರಾದ ಅಚ್ಯುತ್​ ಭಟ್​ ಪೂಜಾರಿ ಸ್ಮರಣಾರ್ಥ ನವೀಕರಣಗೊಳಿಸಿದ್ದಾರೆ. ಸಂಘದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಂಕ್ಕೆ ಕಟ್ಟಡ ನೀಡುವ ಮೂಲಕ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net