ಮಕ್ಕಳಿಗೆ ನೈತಿಕ ಮೌಲ್ಯ ಬೋಧಿಸಿ

ಕಲಬುರಗಿಯಲ್ಲಿ ಕಸಾಪ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲ್ಯಾಣಕುಮಾರ ಶೀಲವಂತ, ಬಸವರಾಜ ಕೊನೇಕ್​, ಮುಡುಬಿ ಗುಂಡೇರಾವ, ಧರ್ಮರಾಜ ಜವಳಿ, ಬಸವರಾಜ ಚಿನಿವಾರ,ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶಿವಲೀಲಾ ಕಲಗುರ್ಕಿ,  ಇತರರಿದ್ದರು.
ಕಲಬುರಗಿಯಲ್ಲಿ ಕಸಾಪ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲ್ಯಾಣಕುಮಾರ ಶೀಲವಂತ, ಬಸವರಾಜ ಕೊನೇಕ್​, ಮುಡುಬಿ ಗುಂಡೇರಾವ, ಧರ್ಮರಾಜ ಜವಳಿ, ಬಸವರಾಜ ಚಿನಿವಾರ,ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶಿವಲೀಲಾ ಕಲಗುರ್ಕಿ, ಇತರರಿದ್ದರು.
Published on: 

ಕಲಬುರಗಿ: ಸಮಾಜದ ಆಗು-ಹೋಗುಗಳ ಜತೆ ಮಕ್ಕಳಲ್ಲಿ ನೈತಿಕ ಮೌಲ್ಯ ಬೋಧಿಸುವಂತೆ ಶೈಕ್ಷಣಿಕ ಚಿಂತಕ ಕಲ್ಯಾಣಕುಮಾರ ಶೀಲವಂತ ಹೇಳಿದರು.

ಶಿಕ್ಷಕರ ದಿನಾಚರಣೆ ನಿಮಿತ್ತ ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಸೋಮವಾರ ಏರ್ಪಡಿಸಿದ್ದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜತೆ ಶಿಕ್ಷಕರು ಮಾಹಿತಿ ಸಂಗ್ರಹಿಸುವ ಕಾರ್ಯದ ಒತ್ತಡದಲ್ಲಿದ್ದಾರೆ. ಹೀಗಾಗಿ ಕಲಿಕಾ ಗುಣಮಟ್ಟ ಕುಂಠಿತಗೊಳ್ಳುತ್ತಿದೆ. ಶಿಕ್ಷಕರಿಗೆ ಮುಕ್ತ ಅವಕಾಶ ಕಲ್ಪಿಸಿ ಅನ್ಯ ಕಾರ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಜಿಲ್ಲೆಯ ಕಲಾವಿದರು, ಬರಹಗಾರರನ್ನು ಒಂದುಗೂಡಿಸುವ ಕಾರ್ಯ ಪರಿಷತ್​ ಮಾಡುತ್ತಿದೆ. ಈಗಾಗಲೇ 5 ಕನ್ನಡ ಸಾಹಿತ್ಯ ಸಮ್ಮೇಳನ, 16 ವಿಶೇಷ ಸಮ್ಮೇಳನ ಆಯೋಜಿಸಿ ದಾಖಲೆ ಮಾಡಲಾಗಿದೆ. ಅ.27 ಮತ್ತು 28ರಂದು ನಗರದಲ್ಲಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪತ್ರಕರ್ತ ಬಸವರಾಜ ಚಿನಿವಾರ, ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ್​, ಸಾಹಿತಿ ಮುಡುಬಿ ಗುಂಡೇರಾವ, ಧರ್ಮರಾಜ ಜವಳಿ ಮಾತನಾಡಿದರು. ಕಸಾಪ ತಾಲೂಕು ಅಧ್ಯೆ ಶಿವಲೀಲಾ ಕಲಗುರ್ಕಿ ಆಶಯ ನುಡಿಗಳನ್ನಾಡಿದರು.

ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಸೈಯದ್​ ನಜಿರುದ್ದೀನ್​ ಮುತ್ತವಲ್ಲಿ, ವಿಶಾಲಾ ಮಾಯಣ್ಣವರ್​, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕುಪೇಂದ್ರ ಬರಗಾಲಿ, ಕವಿತಾ ಕಾವಳೆ, ಭಾಗ್ಯಶ್ರೀ ಮರಗೋಳ, ಸುನಿತಾ ಮಾಳಗಿ, ಈರಣ್ಣ ಸೋನಾರ, ಶರಣು ಹಾಗರಗುಂಡಗಿ ಇತರರಿದ್ದರು. 15 ಬೋಧಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net