ಯುನೆಸ್ಕೊ ಪಟ್ಟಿಗೆ ಸುರಪುರ ಅರ್ಹ

ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಸುರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವವನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ್​ ಮತ್ತು ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು. ಜಸ್ಟಿಸ್​ ಪಿ.ಎಸ್​.ದಿನೇಶ, ಭೀಮಸೇನ ಗುಡೂರ, ಚನ್ನಬಸವರಾಜ ನಿಷ್ಠಿ ದೇಶಮುಖ, ನಾಗರಾಜ ಸುರಪುರ, ಡಾ.ಎಲ್​.ಎಲ್​.ರಾಠಿ ಇತರರಿದ್ದರು.
ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಸುರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವವನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ್​ ಮತ್ತು ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು. ಜಸ್ಟಿಸ್​ ಪಿ.ಎಸ್​.ದಿನೇಶ, ಭೀಮಸೇನ ಗುಡೂರ, ಚನ್ನಬಸವರಾಜ ನಿಷ್ಠಿ ದೇಶಮುಖ, ನಾಗರಾಜ ಸುರಪುರ, ಡಾ.ಎಲ್​.ಎಲ್​.ರಾಠಿ ಇತರರಿದ್ದರು.
Published on: 

ಕಲಬುರಗಿ: ಅತ್ಯಂತ ಐತಿಹಾಸಿಕ ತಾಣಗಳನ್ನು ಹೊಂದಿರುವ ಸುರಪುರಕ್ಕೆ ಯುನೆಸ್ಕೊ ಪಾರಂಪರಿಕ ಪಟ್ಟಿಗೆ ಸೇರುವ ಎಲ್ಲ ಅರ್ಹತೆಗಳಿದ್ದು, ಈ ದಿಸೆಯಲ್ಲಿ ಎಲ್ಲ ಬಗೆಯ ನೆರವು ನೀಡುವುದಾಗಿ ಹೈಕೋರ್ಟ್​ ನ್ಯಾಯಮೂರ್ತಿ ಪಿ.ಎಸ್​. ದಿನೇಶ ಸುರಪುರ ಹೇಳಿದರು.

ನಗರದ ವೆಂಕಟಗಿರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೊಲ್​ ಬಾದ್​ಶಾ ಔರಂಗಜೇಬನ ಸೋಲಿಸಿದ ಸುರಪುರ ಅರಸರು ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಮಡಿದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಮತ್ತು ಸುರಪುರದ ನೂರಾರು ದೇವಸ್ಥಾನ, ಕೆರೆ, ಬಾವಿಗಳು ಸೇರಿಐತಿಹಾಸಿಕ ತಾಣಗಳ ಬಗ್ಗೆ ಮೆಲುಕು ಹಾಕಿದರು.

ಶಾಸಕ ಅಲ್ಲಮಪ್ರಭು ಪಾಟೀಲ್​ ಮಾತನಾಡಿ, ಸುರಪುರ ಕ್ಷೇಮಾಭಿವೃದ್ಧಿ ಸಂಘದವರು ಹತ್ತು ವರ್ಷಗಳಿಂದ ಉತ್ತಮ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವುದನ್ನು ಶ್ಲಾಘಸಿದರು.

ನಗರದ ಮುಖ್ಯ ರಸ್ತೆಯೊಂದಕ್ಕೆ ನಾಲ್ವಡಿ ರಾಜಾ ವೆಂಕಟಪ ್ಪನಾಯಕ ಹೆಸರು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸುರಪುರ ಅಧ್ಯಯನ ಪೀಠ ಸ್ಥಾಪಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘದವರೊಂದಿಗೆ ತಂದೆಯವರಾದ ದಿ.ಆರ್​ವಿಎನ್​ ಸದಾ ಇದ್ದರು. ಇದೀಗ ನಾನು ಸಹ ಸಂಘದ ಎಲ್ಲ ಕಾರ್ಯಚಟುವಟಿಕೆಗಳಿಗೆ ಅಗತ್ಯವಿರುವ ಬೆಂಬಲ ಮತ್ತು ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.

ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಡಾ.ಭೀಮಸೇನ ಗುಡೂರ, ಅಧ್ಯಕ್ಷತೆ ವಹಿಸಿದ್ದ ಸಂದ ಅಧ್ಯ ಚನ್ನಬಸವರಾಜ ನಿಷ್ಠಿ ದೇಶಮುಖ ಮಾತನಾಡಿದರು.

ಸಂಘದ ಕಾರ್ಯದರ್ಶಿ ನಾಗರಾಜ ಸುರಪುರ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಉಪಾಧ್ಯಕ್ಷ ಗಂಗಾಧರ ಎಚ್​.ಸುರಪುರ, ಪ್ರಧಾನ ಕಾರ್ಯದರ್ಶಿ ನಾಗರಾಜ ಎಸ್​.ಸುರಪುರ, ಬಾಲಕೃಷ್ಣ ವಿ.ಸಾಲವಾಡಗಿ, ಡಾ.ಎಲ್​.ಎಸ್​. ರಾಠಿ, ಪಿಡ್ಡಪ್ಪ ಜಾಲಗಾರ, ನಂದಕುಮಾರ ಮಾಲಿಪಾಟೀಲ್​, ವಿಠ್ಠಲ್​ ಜಾಧವ್​, ಬಿ.ಪಿ. ಹೂಗಾರ, ವಿಠ್ಠಲ್​ ಯಾದವ್​, ವೆಂಕಟೇಶ ನೇರಡಗಿ ಇತರರಿದ್ದರು. ಮಲ್ಲೆಶಪ್ಪ ಗುಡೂರ ಸ್ವಾಗತಿಸಿದರು. ಜಿ.ಜಿ. ವಣಿಕ್ಯಾಳ ನಿರೂಪಣೆ ಮಾಡಿ ವಂದಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸುರಪುರ ಸಂಸ್ಥಾನ ಅಧ್ಯಯನ ಕೇಂದ್ರ ಸ್ಥಾಪನೆ ಇತರ ಬೇಡಿಕೆಗಳ ಕುರಿತು ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸೇರಿ ಸಂಬಂಧಿಸಿದ ಸಚಿವರೊಂದಿಗೆ ಅಲ್ಲಮಪ್ರಭು ಜತೆಗೂಡಿ ಭೇಟಿ ಮಾಡಿ ಚರ್ಚಿಸುವೆ.
> ರಾಜಾ ವೇಣುಗೋಪಾಲ ನಾಯಕ ಸುರಪುರ ಶಾಸಕ