ಕಲಬೆರಕೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಕಲಬೆರಕೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
Published on: 

ಆಳಂದ: ಭೀಮನಗರ ಹತ್ತಿರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್​. ಅಂಬೇಡ್ಕರ್​ ಮೆಟ್ರಿಕ್​ ನಂತರ ಬಾಲಕರ ವಸತಿನಿಲಯದಲ್ಲಿ ಮಂಗಳವಾರ ಕೆಲಬೆರಕೆ ಆಹಾರ ಸೇವಿಸಿದ 10 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

ಬೆಳಗ್ಗೆ ರೊಟ್ಟಿ, ಬೆಳೆ, ಅನ್ನ-ಸಾರು ಸೇವಿಸಿದ ಬಳಿಕ ಲೋಹಿತ ಸಂಗೋಳಗಿ ಹೊಟ್ಟೆ ನೋವಿನಿಂದ ಬಳಲಿದ್ದಾನೆ. ನಂತರ ಇತರ ವಿದ್ಯಾರ್ಥಿಗಳಲ್ಲು ಹೊಟ್ಟೆ ನೋವು ಕಾಣಿಸಿದ್ದರಿಂದ ಹಾಸ್ಟೆಲ್​ ವಾರ್ಡನ್​ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಅಸ್ವಸ್ಥ ಲೋಹಿತ ರಕ್ತ ಪರೀಕ್ಷೆ ನಡೆಸಿದ್ದು, ವರದಿ ಬಂದ ಹೆಚ್ಚಿನ ಚಿಕಿತ್ಸೆ ನೀಡುವುದಾಗಿ ಆಡಳಿತ ವೈದ್ಯಾಧಿಕಾರಿ ಡಾ.ಉಮಾಕಾಂತ ರಾಜಗೀರಿ ತಿಳಿಸಿದ್ದಾರೆ.

ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಹೋಳಕರ್​, ವ್ಯವಸ್ಥಾಪಕ ಸಂತೋಷ ಶಿಂಧೆ, ವಾರ್ಡನ್​ ಸಿದ್ರಾಮ ಸ್ಥಳದಲ್ಲಿದ್ದು ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೋಡಿಸುತ್ತಿದ್ದಾರೆ.

ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲ. ಗುಣಮಟ್ಟದ ಆಹಾರ ಪದಾರ್ಥ ಬಳಸುತ್ತಿಲ್ಲ. ಆಹಾರ ಸರಿಯಾಗಿ ಬೇಯಿಸುವುದಿಲ್ಲ. ಎಂಟು ದಿನಕೊಮ್ಮೆ ತರಕಾರಿ ಖರೀದಿಸುತ್ತಾರೆ. ಸದ್ಯ ಬಿಸಿಲು ಹೆಚ್ಚಾಗಿದ್ದರಿಂದ ತರಕಾರಿ ಕಲುಷಿತಗೊಂಡಿದ್ದೇ ಇದಕ್ಕೆ ಕಾರಣ ಎಂದು ಕೆಲ ಸಂಘಟನೆ ಮುಖಂಡರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net