ರಾಜ್ಯವ್ಯಾಪಿ ಪ್ರತಿಭಟನೆ 9ರಂದು

ಡಾ.ಡಿ.ಜಿ.ಸಾಗರ
ಡಾ.ಡಿ.ಜಿ.ಸಾಗರ
Published on

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ತಡೆಯಾಜ್ಞೆ ತೆರವುಗೊಳಿಸಲು ಸಾಗರ ಆಗ್ರಹ
  • ಕೇಂದ್ರ ಸರ್ಕಾರದ ಯುಜಿಸಿ ನಿಯಮ
ಕಲಬುರಗಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಂದಿರುವ ನಿಯಮಗಳಿಗೆ ಸುಪ್ರೀಂಕೋರ್ಟ್​ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಫೆಬ್ರವರಿ 9ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ತಂದಿರುವ ನಿಯಮ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊರಡಿಸಬೇಕು. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಮೇಲೆ ವಿವಿಗಳಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ತಡೆಯಲು ವಿವಿ ಧನಸಹಾಯ ಆಯೋಗ ತಂದಿರುವ ನಿಯಮ ಸ್ವಾಗತಾರ್ಹ ಎಂದರು.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮ&2026, ಈ ನಿಯಮ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಧರ್ಮ, ಜನಾಂಗ, ಲಿಂಗ, ಹುಟ್ಟಿದ ಸ್ಥಳ, ಜಾತಿ ಅಥವಾ ಅಂಗವೈಕಲ್ಯದ ಆಧಾರದ ಮೇಲೆ ನಡೆಯುವ ತಾರತಮ್ಯ ತೊಡೆದುಹಾಕುವುದು, ವಿಶೇಷವಾಗಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತರಕ್ಷಣೆ ಮಾಡುವುದು ಮತ್ತು ಉನ್ನತ ಶಿಕ್ಷಣದಲ್ಲಿ ಸಮಾನತೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ತೆ ತಾರತಮ್ಯ ನಿಮೂರ್ಲನೆ ಮಾಡುವ ಮತ್ತು ಎಲ್ಲ ಪಾಲುದಾರರಲ್ಲಿ ಸಮಾನತೆ ಉತ್ತೇಜಿಸುವ ಕರ್ತವ್ಯ ಹೊಂದಿದೆ. ಯಾವುದೇ ರೀತಿಯ ತಾರತಮ್ಯವನ್ನು ಸಂಸ್ಥೆ ಸಹಿಸಬಾರದು. ಪ್ರತಿ ಸಂಸ್ಥೆಯು ಹಿಂದುಳಿದ ಗುಂಪುಗಳಾಗಿ ಕಾರ್ಯಕ್ರಮ ಜಾರಿಗೊಳಿಸಲು ಸಮಾನ ಅವಕಾಶ ಕೇಂದ್ರ ಸ್ಥಾಪಿಸಬೇಕು. ಪ್ರತಿ ಸಂಸ್ಥೆಯು ತಾರತಮ್ಯಕ್ಕೆ ಸಂಬಂಧಿಸಿದ ಟನೆ ಬಗ್ಗೆ ದೂರು ನೀಡಲು ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಹೊಂದಿರಬೇಕು ಎಂದು ವಿವರಿಸಿದರು.
ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ನಿರ್ಭಯವಾದ ಶೈಕ್ಷಣಿಕ ವಾತಾವರಣ ವಿವಿಗಳಲ್ಲಿ ನಿರ್ಮಿಸಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ರೋಹಿತ್​ ವೇಮುಲ್​ ಕಾಯ್ದೆ ಕಡ್ಡಾಯವಾಗಿ ಜಾರಿ ಮಾಡಬೇಕು. ಇಂದಿನ ವಿವಿಗಳು ಶೈಕ್ಷಣಿಕ ವಾತಾವರಣ ಕೋಮುವಾದಿಕರಣಕ್ಕೆ ಒಳಗಾಗಿವೆ. ಜಾತಿವಾದಿ ಅಹಂಕಾರ ನಾಶಮಾಡದ ಹೊರತು ಭಾರತದ ವಿವಿಗಳಿಗೆ ಮತ್ತು ದಲಿತ ಹಿಂದುಳಿದ, ಬುಡಕಟ್ಟು ಸಮುದಾಯಗಳಿಗೆ ಭವಿಷ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ಸುರೇಶ ಹಾದಿಮನಿ, ಉಮೇಶ ನರೋಣ, ಎಚ್​.ಶಂಕರ, ರಾಜ್ಯ ಖಜಾಂಚಿ ಬಿ.ಸಿ.ವಾಲಿ ಇತರರಿದ್ದರು.
"

ಉನ್ನತ ಶಿಕ್ಷಣ ಸಂಸ್ಥೆಗಳು ಯುಜಿಸಿ ನಿಯಮ ಪಾಲಿಸದಿದ್ದರೆ ಯೋಜನೆಗಳಿಂದ ವಂಚಿತಗೊಳಿಸುವುದು, ಪದವಿ ಕಾರ್ಯಕ್ರಮ ನಡೆಸದಂತೆ ತಡೆಯುವುದು, ಆನ್​ಲೈನ್​ ಅಥವಾ ದೂರ ಶಿಕ್ಷಣ ನೀಡದಂತೆ ರ್ನಿಬಂಧಿಸುವುದು ಯುಜಿಸಿ ನಿಯಮದಲ್ಲೇ ಅಡಗಿದೆ.

ಡಾ.ಡಿ.ಜಿ.ಸಾಗರ,

ರಾಜ್ಯ ಸಂಚಾಲಕ, ಡಿಎಸ್​ಎಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net