ಶ್ರೀ ಹೇಮರಡ್ಡಿ ಮಲ್ಲಮ್ಮ ಪ್ರವಚನ ಇಂದಿನಿಂದ

ಸದಾಶಿವ ಸ್ವಾಮೀಜಿ
ಸದಾಶಿವ ಸ್ವಾಮೀಜಿ
Published on

ಸೇಡಂ: ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ 109ನೇ ಪುಣ್ಯಾರಾಧನೆ ನಿಮಿತ್ತ ಗುರುವಾರದಿಂದ ಅ.2ರವರೆಗೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಚರಿತಾಮೃತ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಶ್ರೀ ಹೇಮರಡ್ಡಿ ಮಲ್ಲಮ್ಮನವರ ಚರಿತಾಮೃತಕ್ಕೆ ಗುರುವಾರದಿಂದ ಸಂಜೆ ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಚಾಲನೆ ನೀಡುವರು. ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಮ್ಮುಖವಹಿಸಲಿದ್ದಾರೆ. ಗಡಿಹಿಂಗ್ಲಜನ್​ ಸುರಗೀಶ್ವರ ಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು ಪ್ರವಚನ ನಡೆಸಿಕೊಡಲಿದ್ದು, ಶಾಂತಾನಂದ ಗವಾಯಿ ಸಂಗೀತ, ಮಹೇಶ ಗುನ್ನಾಳ ತಬಲಾ ಸಾಥ್​ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ.1ರ ಪ್ರವಚನ ಮಾಲಿಕೆಯಲ್ಲಿ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯವಹಿಸುವರು. ಮಂಗಲಗಿಯ ಮಹಾಂತೇಶ್ವರ ಮಠದ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯ, ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಅಭಿನವ ಗವಿಸಿದ್ಧಲಿಂಗೇಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು. ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಉಪಸ್ಥಿತರಿರುವರು. ಇದೇ ವೇಳೆ ಮಾನವ ಬದುಕಿನ ಸೋಪಾನ ಸತ್ಸಂಗದಲ್ಲಿ ದಾಸೋಹ ಸೇವೆಗೈದ ಶರಣ ದಂಪತಿಯನ್ನು ಸತ್ಕರಿಸಲಾಗುವುದು ಎಂದರು.

ಅ.2ರಂದು ಬೆ.8.35ಕ್ಕೆ ಶ್ರೀಶೈಲ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಜರುಗುವುದು. ಸಂಜೆ 6.15ಕ್ಕೆ ಪ್ರವಚನದ ಸಮಾರೋಪ ಸಮಾರಂಭದಲ್ಲಿ ದಿಗ್ಗಾಂವ್​ದ ಶ್ರೀ ಸಿದ್ಧವಿರ ಶಿವಾಚಾರ್ಯ, ಶ್ರೀ ಶಂಭುಲಿಂಗ ಸ್ವಾಮೀಜಿ, ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶ್ರೀ ಪ್ರಭುಲಿಂಗ ದೇವರು, ಶ್ರೀ ಮಲ್ಲಿಕಾರ್ಜುನ ದೇವರು, ಶ್ರೀ ಕೇದಾರೇಶ್ವರ ದೇವರು, ಶ್ರೀ ಶ್ರೀನಿವಾಸ ಮಹಾರಾಜರು ಸಾನ್ನಿಧ್ಯ ವಹಿಸುವರು. ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಉಪಸ್ಥಿತರಿರುವರು. ಅ.3ರಂದು ಬೆ.6.05ಕ್ಕೆ ಜೀವಂತ ಸಮಾಧಿಸ್ತ ಶ್ರೀ ಸಪ್ಪಣ್ಣಾರ್ಯ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ. 8.35ಕ್ಕೆ ಇಷ್ಟಲಿಂಗ ಪೂಜೆ ಜರುಗುವದು. ಅಧಿಕ ಮಾಸದಲ್ಲಿ ಪೂಜಾ ಸೇವೆಗೈದ ಅರ್ಚಕರನ್ನು ಸತ್ಕರಿಸಲಾಗುವುದು ಎಂದು ಹೇಳಿದರು.

ಸಿದ್ದಪ್ಪ ತಳ್ಳಳ್ಳಿ, ನಾಗೇಂದ್ರಪ್ಪ ಡೊಳ್ಳಾ, ಸಿದ್ದಣ್ಣಗೌಡ ಶೆಟ್ಟಿ, ರಾಚಣ್ಣ ಬಳಗಾರ, ಬಸವರಾಜ ತಡಕಲ್​, ಸಂಗಮೇಶ ಹತ್ತಿ, ಸಂಗಮೇಶ ಇಂಜಳ್ಳಿ, ಶರಣಪ್ಪಗೌಡ ಯಡ್ಡಳ್ಳಿ, ವೆಂಕಟೇಶ ಸಕ್ರಿ, ಬಸವರಾಜ ಹಲಚೇರಿ ಇತರರಿದ್ದರು.

ಸಾಧಕರಿಗೆ ವೀರ ಬಸವ ಪ್ರಶಸ್ತಿ ಪ್ರಧಾನ

ವಿವಿಧ ಕ್ಷೇತ್ರದ ಸಾಧಕರಾದ ಶಂಭುರೆಡ್ಡಿ ಮದ್ನಿ, ಶ್ರೀನಿವಾಸ ವಿಶ್ವಕರ್ಮ, ಕಿಷ್ಟಪ್ಪ ಮುನ್ನೂರ, ಶಿವಕಾಂತಮ್ಮ ಮಲಕೂಡ, ನವೀನ ಕುಲಕರ್ಣಿ ಅವರಿಗೆ ವೀರ ಬಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜತೆಗೆ ತಾಲೂಕಿನಲ್ಲಿ ನಿರಂತರ ಪೂಜಾ ವಿಧಿಗಳನ್ನು ನಡೆಸುಕೊಂಡು ಧಾರ್ಮಿಕ ಕಾರ್ಯದಲ್ಲಿ ನಿರತರಾಗಿರುವ ವೀರಯ್ಯಸ್ವಾಮಿ ಮಠಪತಿ, ರೇವಣಸಿದ್ದಯ್ಯಸ್ವಾಮಿ ಬಟಗೇರಾ, ನೇತಾಜಿ ಪ್ರಚಂಡಿಮಠ ಕೋಡ್ಲಾ ಅವರನ್ನು ವಿಶೇಷವಾಗಿ ಸತ್ಕರಿಸಲಾಗುತ್ತಿದೆ ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net