ಡಾ.ಖರ್ಗೆ ಭಾಷಣ ಮಾಡಿದ್ದ ವೇದಿಕೆ ಸ್ವಚ್ಛತೆಗೆ ಕಿಡಿ

ಮಲ್ಲಿಕಾರ್ಜುನ ಮಾಡಬೂಳಕರ್​
ಮಲ್ಲಿಕಾರ್ಜುನ ಮಾಡಬೂಳಕರ್​
Published on
ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ದೇಶದ ಹಿರಿಯ ರಾಜಕಾರಣಿ ಮತ್ತು ಶತಮಾನದ ಇತಿಹಾಸ ಇರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇದಿಕೆ ಸ್ಥಳವನ್ನು ಗಂಗಾಜಲ ಮೂಲಕ ಶ್ರೀರಾಮಸೇನೆ ಕಾರ್ಯಕರ್ತರು ಮತ್ತು ಇತರರು ಶುದ್ಧೀಕರಿಸಿರುವುದು ನೊಡಿದರೆ ಸಂಘ ಪರಿವಾರ ಮತ್ತು ಬಿಜೆಪಿ ಅಜೆಂಡಾ ಮತ್ತೊಮ್ಮೆ ಬಯಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮುಡಬೂಳಕರ್ ಆರೊಪಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ ಸಿಕ್ಕು ಎಂಬತ್ತು ವರ್ಷ ಕಳೆದಿದೆ. ಆದರೂ ಅವರು ಇನ್ನು ಮನಸ್ಮೃತಿ ಮತ್ತು ಜಾತಿಯತೆಯಿಂದ ಹೊರಬರದಿರುವದು ಈ ಪ್ರಕರಣದ ಮೂಲಕ ಗೊತ್ತಾಗುತ್ತಿದೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ದಲಿತರು ಎನ್ನುವ ಕಾರಣಕ್ಕೆ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಜನಸಾಮಾನ್ಯರಿಗೆ ದೇಶದಲ್ಲಿ ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.
ಈ ಘಟನೆ ನಡೆದು ಎಂಟು ದಿನಗಳು ಕಳೆದರೂ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಸಂಘ ಪರಿವಾರದ ಪ್ರಮುಖರು, ಬಿಜೆಪಿ ಮುಖಂಡರು ತಪ್ಪು ಮಾಡಿದವರ ಕುರಿತು ಒಂದೇ ಒಂದು ಹೇಳಿಕೆ ನೀಡಿ ಕ್ರಮ ಕೈಗೊಳ್ಳುವ ಮಾತನಾಡದಿರುವುದು ನಾಚೀಕೆಗೇಡಿನ ವಿಷಯ. ಕೂಡಲೇ ಉತ್ತರಾಖಂಡದ ರಾಮಲೀಲ ಮೈದಾನದಲ್ಲಿ ಆಗಿರುವ ಘೋರ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net