ತಾಲೂಕಿನ ಹಾಗರಗುಂಡಗಿ ಸರ್ಕಾರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ. ಉನ್ನತ ಹುದ್ದೆಗೇರಲು ಬಾಲ್ಯದಲ್ಲಿ ತಾವು ಅನೇಕ ಕಷ್ಟಗಳನ್ನು ಎದುರಿಸಿz್ದÉÃನೆ. ಒಂದು ರೂಪಾಯಿ ಕೂಡ ಮನೆಯಿಂದ ಪಡೆಯದೇ ಸ್ಕಾಲರಶಿಪ್ ಹಣದಿಂದ ಐಪಿಎಸ್ ಆದ ಘಟನೆ ಸ್ಮರಿಸಿಕೊಂಡರು. ಸೋಲು-ಗೆಲುವು ಜೀವನದ ಭಾಗಗಳು, ಆದರೆ ಪ್ರಯತ್ನ ಮತ್ತು ಆತ್ಮವಿಶ್ವಾಸವೇ ನಿಜವಾದ ಯಶಸ್ಸಿನ ಮಂತ್ರ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ, ಆ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.