ರುದ್ರ ಅಧ್ಯಯನ ಸಮಾರೋಪ

ಕಲಬುರಗಿಯ ಗಂಗೋತ್ರಿ ವೇದಪಾಠ ಶಾಲೆಯಲ್ಲಿ ರುದ್ರ ಅಧ್ಯಯನದ ಮೊದಲ ವರ್ಗದ ಸಮಾರೋಪದಲ್ಲಿ ಮೋಹನ್​ಭಟ್​ ಜೋಶಿ, ಡಾ.ಯೋಗೇಶ ಭಟ್​ ಜೋಶಿ, ಲೋಕೇಶ ಭಟ್​ ಜೋಶಿ, ವಿದ್ಯಾರ್ಥಿಗಳು ಇದ್ದರು.
ಕಲಬುರಗಿಯ ಗಂಗೋತ್ರಿ ವೇದಪಾಠ ಶಾಲೆಯಲ್ಲಿ ರುದ್ರ ಅಧ್ಯಯನದ ಮೊದಲ ವರ್ಗದ ಸಮಾರೋಪದಲ್ಲಿ ಮೋಹನ್​ಭಟ್​ ಜೋಶಿ, ಡಾ.ಯೋಗೇಶ ಭಟ್​ ಜೋಶಿ, ಲೋಕೇಶ ಭಟ್​ ಜೋಶಿ, ವಿದ್ಯಾರ್ಥಿಗಳು ಇದ್ದರು.
Published on

ಕಲಬುರಗಿ: ನಗರದ ಗಂಗೋತ್ರಿ ವೇದ ಪಾಠ ಶಾಲೆಯಲ್ಲಿ ಭಾನುವಾರ ನಡೆದ ರುದ್ರ ಅಧ್ಯಯನದ ಮೊದಲ ವರ್ಗದ ಸಮಾರೋಪ ಸಮಾರಂಭದಲ್ಲಿ ಲುನ್ಯಾಸ ಪೂರ್ವಕ ಏಕಾದಶವರ್ತನ ರುದ್ರಾಭಿಷೇಕ ಜರುಗಿತು. ಕಲಿತ ಪಾಠವನ್ನು ಗುರುಗಳಿಗೆ ಸಮರ್ಪಿಸುವುದರ ಅಂಗವಾಗಿ ಈ ರುದ್ರಪಠಣ ವಿದ್ಯಾರ್ಥಿಗಳಿಂದ ಮಂತ್ರೋಚ್ಚಾರಣೆ ಮೂಲಕ ನಡೆಯಿತು. ಪಾಠಶಾಲೆಯ ಸಂಸ್ಥಾಪಕ ವೇ.ಮೂ. ಶ್ರೀಮೋಹನಭಟ್​ ಜೋಶಿ, ಡಾ.ಯೋಗೇಶ ಭಟ್​ ಜೋಶಿ ಮತ್ತು ಲೋಕೇಶ ಭಟ್​ ಜೋಶಿ ಇದ್ದರು. ಮೋಹನ ಭಟ್​ ಜೋಶಿ ಅವರು ಆಶೀರ್ವಚನದಲ್ಲಿ ರುದ್ರಪಠಣವನ್ನು ಎಲ್ಲರೂ ನಿತ್ಯ ಆಚರಣೆಯನ್ನಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಡಾ.ಯೋಗೇಶ ಭಟ್​ ಅವರು ರುದ್ರ ಮಹಿಮೆ ತಿಳಿಸಿ, ರುದ್ರ ಪಠಣವು ವೇದಾಧ್ಯಯನಕ್ಕೆ ಸಮಾನ. ಈ ರುದ್ರಪಾಠದ ವ್ಯವಸ್ಥೆ ಮುಂದುವರಿಸಲಾಗುವುದು. ಆಸಕ್ತರು ರುದ್ರಾಭ್ಯಾಸಕ್ಕಾಗಿ ಗಂಗೋತ್ರಿ ವೇದ ಪಾಠಶಾಲೆ ಸಂಪರ್ಕಿಸಬಹುದು ಎಂದು ಹೇಳಿದರು. ಲೋಕೇಶ ಭಟ್​ ಪೂಜಾ ಕೈಂಕರ್ಯ ನೆರವೇರಿಸಿದರು. ಮಹೇಶ ಚಿಲ್ಲಾಪೂರ ಕಾರ್ಯಕ್ರಮದ ವಿವರಣೆ ನೀಡಿದರು. ದೇವತಾ ಕಾರ್ಯದ ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net