

ಜೇವರ್ಗಿ: ಶಖಾಪುರ (ಎಸ್ಎ) ಗ್ರಾಮದ ಸದ್ಗುರು ಶ್ರೀ ವಿಶ್ವಾರಾಧ್ಯ ತಪೋವನ ಮಠದಲ್ಲಿ ಶ್ರೀ ಸಿದ್ಧರಾಮ ಶಿವಯೋಗಿಗಳ 76ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆ ಅ.31ರಂದು ನಡೆಯಲಿದೆ ಎಂದು ಪೀಠಾಧಿಪತಿ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಹೇಳಿದರು.
ಪುಣ್ಯಾರಾಧನೆ ನಿಮಿತ್ತ ಶ್ರೀಮಠದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆ ಕಾರ್ಯಗಳನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು, ಪುಣ್ಯಾರಾಧನೆ ನಿಮಿತ್ತ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಪ್ರಸಾದಕ್ಕೆ 60 ಕ್ವಿಂಟಾಲ್ ಜೋಳ ಮತ್ತು ಸಜ್ಜಿ ರೊಟ್ಟಿ ತಯಾರಿಸಲಾಗುತ್ತಿದೆ. ಸುಮಾರು 25 ಕ್ವಿಂಟಾಲ್ ವಿವಿಧ ಧಾನ್ಯ ಹಾಗೂ ತರಕಾರಿಗಳಿಂದ ಭಜ್ಜಿ ಪಲ್ಯೆ ಸಿದ್ಧಪಡಿಸಲಾಗುತ್ತಿದೆ. ಸಹಸ್ರಾರು ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ಪ್ರಸಾದ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅ.31ರಂದು ಬೆಳಗ್ಗೆ ಬೆಳಗ್ಗೆ 6ಕ್ಕೆ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ಜರುಗಲಿದೆ. ಸಂಜೆ 5ಕ್ಕೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಧಾರ್ಮಿಕ ಸಭೆ ಜರುಗಲಿದೆ. ಪ್ರಗತಿಪರ ರೈತರಾದ ಶಾಂತಗೌಡ ಐನಾಪುರ ಹಾಲ್ಗಡ್ಲಾ, ಅಶೋಕ ಸಾಲಿಮಠ, ಯಶವಂತರಾಯಗೌಡ ಬಣಮಗಿ, ಸುರೇಶ ಮಲ್ಲಣ್ಣ ಮುತ್ತಕೋಡ, ದ್ಯಾವಪ್ಪ ಪೂಜಾರಿ ಹರನೂರ ಅವರಿಗೆ ತಪೋವನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಡಾ.ಪಿ.ಎಂ.ಮಠ, ಶಂಕರಗೌಡ ಹಾಲ್ಗಡ್ಲಾ, ಐ.ಎಸ್.ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಬಸವರಾಜ ಬಳಬಟ್ಟಿ, ಅಂಬರೇಶ ಶಖಾಪುರ, ಸಂಗನಬಸಯ್ಯ ಹಿರೇಮಠ, ವೀರೇಶ ಕಂದಗಲ್ಲ, ಬುಜಂಗಪ್ಪ ದೇಶೆಟ್ಟಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಗುಂಡಪ್ಪ ಹಾಲ್ಗಡ್ಲಾ, ಮಲ್ಲಣ್ಣಗೌಡ ಮಾಲಿ ಪಾಟೀಲ್, ರಾಜಶೇಖರಯ್ಯ ಹಿರೇಮಠ ಇತರರಿದ್ದರು.