ಕ್ವಾಂಟಮ್​ ಸಿಟಿಗೆ ಹೆಚ್ಚುವರಿ ಜಾಗ ನೀಡಲು ಮನವಿ

ಬೆಂಗಳೂರಿನಲ್ಲಿ ಟೆಕ್​ ಸಮ್ಮಿಟ್​-2026 ಕ್ವಾಂಟಮ್​ ಸಿಟಿ ಯೋಜನೆ ಹಿನ್ನೆಲೆ ಗುರುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಸಚಿವ ಡಾ.ಅಜಯ್​ಸಿಂಗ್​ ಸಂವಾದ ನಡೆಸಿದರು. ಡಾ.ಕ್ರಿಸ್ಟೋಫ್​ ಡೋರ್ಷ್​ಫೆಲ್ಟ್​, ಆನೆಟ್​ ಬೇಸ್ಲರ್​, ಪ್ರೊ.ಮಾರ್ಕೊರೆ, ಪ್ರೊ.ನಾರಾಯಣ ಕೆ.ಎಸ್​, ಪ್ರೊ.ಎಸ್​.ಆರ್​.ಮಹದೇವ ಪ್ರಸನ್ನ, ಕೆ.ಡಿ.ನಾಯಕ್​, ರೀನಾ ದಯಾಳ್​, ಡಾ.ಸುಮೀರ್​, ಸುನಿಲ್​ ಗುಪ್ತಾ ಇದ್ದರು.
ಬೆಂಗಳೂರಿನಲ್ಲಿ ಟೆಕ್​ ಸಮ್ಮಿಟ್​-2026 ಕ್ವಾಂಟಮ್​ ಸಿಟಿ ಯೋಜನೆ ಹಿನ್ನೆಲೆ ಗುರುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಸಚಿವ ಡಾ.ಅಜಯ್​ಸಿಂಗ್​ ಸಂವಾದ ನಡೆಸಿದರು. ಡಾ.ಕ್ರಿಸ್ಟೋಫ್​ ಡೋರ್ಷ್​ಫೆಲ್ಟ್​, ಆನೆಟ್​ ಬೇಸ್ಲರ್​, ಪ್ರೊ.ಮಾರ್ಕೊರೆ, ಪ್ರೊ.ನಾರಾಯಣ ಕೆ.ಎಸ್​, ಪ್ರೊ.ಎಸ್​.ಆರ್​.ಮಹದೇವ ಪ್ರಸನ್ನ, ಕೆ.ಡಿ.ನಾಯಕ್​, ರೀನಾ ದಯಾಳ್​, ಡಾ.ಸುಮೀರ್​, ಸುನಿಲ್​ ಗುಪ್ತಾ ಇದ್ದರು.
Published on: 

ಕಲಬುರಗಿ: ಕರ್ನಾಟಕವನ್ನು ಭಾರತದ ಕ್ವಾಂಟಮ್​ ತಂತ್ರಾನ ರಾಜಧಾನಿಯನ್ನಾಗಿ ರೂಪಿಸುವ ಗುರಿಯೊಂದಿಗೆ ಪ್ರಸ್ತಾವಿತ ಕ್ವಾಂಟಮ್​ ಸಿಟಿಯನ್ನು ಇನ್ನಷ್ಟು ವಿಸತವಾಗಿ ಅಭಿವೃದ್ಧಿಪಡಿಸಲು ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಮನವಿ ಮಾಡಿರುವುದಾಗಿ ಸಣ್ಣ ನೀರಾವರಿ, ವಿಾನ ಮತ್ತು ತಂತ್ರಾನ ಸಚಿವ ಡಾ.ಅಜಯ್​ ಧರ್ಮಸಿಂಗ್​ ಹೇಳಿದ್ದಾರೆ.

ಬೆಂಗಳೂರು ಟೆಕ್​ ಸಮ್ಮಿಟ್​&2026 ಕ್ವಾಂಟಮ್​ ಸಿಟಿ ಯೋಜನೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿ, ಕ್ವಾಂಟಮ್​ ತಂತ್ರಾನ ಕಂಪನಿ, ಸಂಶೋಧನಾ ಸಂಸ್ಥೆ, ಕ್ವಾಂಟಮ್​ ಟಾಸ್ಕ್​ ಫೋರ್ಸ್​ನ ಸದಸ್ಯರು ಹಾಗೂ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಹೂಡಿಕೆ, ಸಂಶೋಧನೆ, ತಂತ್ರಾನ ಅಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವದ ಮೂಲಕ ಕ್ವಾಂಟಮ್​ ಸಿಟಿಯಲ್ಲಿ ಪಾಲುದಾರರಾಗುವಂತೆ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಆಹ್ವಾನ ನೀಡಿದರು.

ಬೆಂಗಳೂರು ಈಗಾಗಲೇ ದೇಶದ ಪ್ರಮುಖ ಕ್ವಾಂಟಮ್​ ತಂತ್ರಾನ ಕ್ಲಸ್ಟರ್​ಗಳಲ್ಲೊಂದಾಗಿ ಹೊರಹೊಮ್ಮಿದೆ. ಐಐಎಸ್​ಸಿ ಸೇರಿ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು, ಪರಿಣಿತ ಮಾನವ ಸಂಪನ್ಮೂಲ, ತಂತ್ರಾನ ಕಂಪನಿಗಳು ಮತ್ತು ಸ್ಟಾರ್ಟಪ್​ ಪರಿಸರ ವ್ಯವಸ್ಥೆ ಕರ್ನಾಟಕದ ದೊಡ್ಡ ಶಕ್ತಿಯಾಗಿದೆ. ಈ ಸಾಮರ್ಥ್ಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕರ್ನಾಟಕವನ್ನು ಭಾರತದ ಕ್ವಾಂಟಮ್​ ರಾಜಧಾನಿಯನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಹೇಳಿದರು.

ಜರ್ಮನಿಯ ಕಾನ್ಸುಲ್​ ಜನರಲ್​ ಡಾ.ಕ್ರಿಸ್ಟೋಫ್​ ಡೋರ್ಷ್​ಫೆಲ್ಟ್​, ಜರ್ಮನಿಯ ಡೆಪ್ಯುಟಿ ಕಾನ್ಸುಲ್​ ಜನರಲ್​ ಆನೆಟ್​ ಬೇಸ್ಲರ್​, ಇಟಲಿ ಕಾನ್ಸುಲೇಟ್​ ಜನರಲ್​ನ ಪ್ರೊ.ಮಾರ್ಕೊರೆ, ಪ್ರೊ.ನಾರಾಯಣ ಕೆ.ಎಸ್​, ಐಐಐಟಿ ಧಾರವಾಡ ನಿರ್ದೇಶಕ ಪ್ರೊ.ಎಸ್​.ಆರ್​. ಮಹದೇವ ಪ್ರಸನ್ನ, ಮಾಜಿ ನಿರ್ದೇಶಕ ಕೆ.ಡಿ.ನಾಯಕ್​, ರೀನಾ ದಯಾಳ್​, ಡಾ.ಸುಮೀರ್​, ಸುನಿಲ್​ ಗುಪ್ತಾ, ಕ್ವಾಂಟಮ್​ ಟಾಸ್ಕ್​ ಫೋರ್ಸ್​ನ ಸದಸ್ಯರು, ವಿವಿಧ ಸಂಶೋಧನಾ, ಕೈಗಾರಿಕಾ ಮತ್ತು ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಹೆಚ್ಚುವರಿ ಜಾಗಕ್ಕೆ ಸಿಎಂಗೆ ಮನವಿ

ರಾಜ್ಯ ಸರ್ಕಾರ ಈಗಾಗಲೇ ಹೆಸರಟ್ಟದಲ್ಲಿ 6.14 ಎಕರೆ ಜಾಗವನ್ನು ಕ್ವಾಂಟಮ್​ ಸಿಟಿಗಾಗಿ ಮಂಜೂರು ಮಾಡಿದ್ದು, ಈ ತಂತ್ರಾನ ೇತ್ರದ ಅಭಿವೃದ್ಧಿಗೆ 1000 ಕೋಟಿ ರೂ.ಹೂಡಿಕೆ ಬದ್ಧತೆ ೂಷಿಸಿದೆ. ಸಂಶೋಧನೆ, ಸ್ಟಾರ್ಟಪ್​ಗಳು, ಕೈಗಾರಿಕೆ, ಹೂಡಿಕೆ ಮತ್ತು ಜಾಗತಿಕ ಪಾಲುದಾರಿಕೆಗೆ ಅಗತ್ಯವಿರುವ ಸಮಗ್ರ ಮೂಲಸೌಕರ್ಯವನ್ನು ಕ್ವಾಂಟಮ್​ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಹಲವಾರು ಪ್ರಮುಖ ಕಂಪನಿಗಳು ಹಾಗೂ ವಿದೇಶಿ ಸಂಶೋಧನೆ, ಶೈಣಿಕ ಸಂಸ್ಥೆಗಳು ಕ್ವಾಂಟಮ್​ ಸಿಟಿಯೊಂದಿಗೆ ಸಹಭಾಗಿತ್ವಕ್ಕೆ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಲು ಹೆಚ್ಚುವರಿ ಜಾಗದ ಅವಶ್ಯಕತೆ ಇದೆ ಎಂದು ಸಚಿವ ಡಾ.ಅಜಯಸಿಂಗ್​ ಹೇಳಿದರು.

ಕ್ವಾಂಟಮ್​ ಸಿಟಿಗೆ ಇನ್ನಷ್ಟು ವಿಸತ ಮೂಲಸೌಕರ್ಯ ನಿರ್ಮಿಸಲು ಹೆಚ್ಚುವರಿ ಜಾಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಾಗತಿಕ ಮಟ್ಟದ ಕ್ವಾಂಟಮ್​ ಪರಿಸರ ವ್ಯವಸ್ಥೆ ನಿರ್ಮಿಸಲು ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ.
> ಡಾ.ಅಜಯ್​ ಧರ್ಮಸಿಂಗ್​, ಸಚಿವ