ನದಿಗಳಿಗೆ ನೀರು ಹರಿಸಿ, ಕಬ್ಬು ನುರಿಸಲು ಅನುಮತಿ ನೀಡ

 ರೈತರ ಪಂಪ್​ಸೆಟ್​ಗಳಿಗೆ ವಿದ್ಯುತ್​ ಪೂರೈಸಬೇಕು, ಜಲಾಶಯಗಳಿಂದ ನದಿ ಹಾಗೂ ಕಾಲುವೆಗೆ ನೀರು ಹರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಿಂಚೋಳಿ ತಾಲೂಕಿನ ಚಿಮ್ಮಇದಲಾಯಿ ಕ್ರಾಸ್​ ಬಳಿ ದ್ರಾ ಮತ್ತು ಕಬ್ಬು ಬೆಳೆಗಾರರು ಹಾಗೂ ಪ್ರಗತಿಪರ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್​ ಕಚೇರಿ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಲಾಯಿತು. ಸಾಬು ಮಾಶಾಳ, ರವಿರಾಜ ಕೊರವಿ, ಗೋಪಾಲ ಎಂ.ಪಿ., ಬಸವರಾಜ ದೇಶಮುಖ, ಚಂದ್ರಶೇಖರ ಗುತ್ತೇದಾರ್​ ಇತರರಿದ್ದರು.

Published on: 

ಚಿಂಚೋಳಿ: ನೀರಿಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಜಲಾಶಯಗಳಿಂದ ನದಿ ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ದ್ರಾ, ಕಬ್ಬು ಬೆಳೆಗಾರರ ಸಂದ ತಾಲೂಕು ಅಧ್ಯಕ್ಷ ಸಾಬು ಮಾಶಾಳ ಒತ್ತಾಯಿಸಿದರು.

ರೈತರ ಪಂಪ್​ಸೆಟ್​ಗಳಿಗೆ ಸರಿಯಾಗಿ ವಿದ್ಯುತ್​ ಪೂರೈಕೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಮ್ಮಇದಲಾಯಿ ಕ್ರಾಸ್​ ಬಳಿ ದ್ರಾ ಮತ್ತು ಕಬ್ಬು ಬೆಳೆಗಾರರು ಹಾಗೂ ಪ್ರಗತಿಪರ ರೈತ ಹೋರಾಟ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸ್ಥಳಿಯ ಸಿದ್ಧಸಿರಿ ಸಕ್ಕರೆ ಕಾರ್ಖಾನೆಗೆ ಕಬ್ಬು ನುರಿಸಲು ಆಡಳಿತ ಮಂಡಳಿ ಮತ್ತು ಸರ್ಕಾರ ತಕ್ಷಣವೇ ಅನುಮತಿ ನೀಡಬೇಕು. ಇಲ್ಲದಿದ್ದರೆ ರೈತರ ಬೆಳೆ ಹೊಲದಲ್ಲೆ ಒಣಗಿ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಭೋಗಾವತಿ ಹಾಗೂ ಸರಳ ನದಿಗಳಿಗೆ ನೀರು ಹರಿಸಬೇಕು. ಸಿದ್ಧಸಿರಿ ಕಂಪನಿಗೆ ರೈತರ ಕಬ್ಬು ನುರಿಸಲು ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಸಿಲ್​ ಕಚೇರಿ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರಮುಖರಾದ ರವಿರಾಜ ಕೊರವಿ, ಗೋಪಾಲ ಎಂ.ಪಿ., ಬಸವರಾಜ ದೇಶಮುಖ, ಚಂದ್ರಶೇಖರ ಗುತ್ತೇದಾರ್​, ವೀರೇಶ ಯಂಪಳ್ಳಿ, ಕಾಶಿರಾಮ ತಳವಾರ ದೇಗಲಮಡಿ, ಸುಭಾಷಚಂದ್ರ ಕೊಂಡ, ಶಿವಕುಮಾರ ಅಂಬಲಿಗಿ, ಸತೀಶ ಕನಕಪುರ, ಮಂಜುನಾಥ ಜಮಾದಾರ, ರೇವಣಸಿದ್ದಪ್ಪ ಮ್ಯಾಲಿನಕೇರಿ, ಮಲ್ಲಿಕಾರ್ಜುನ ರಾಯಗೊಂಡ, ತುಕಾರಾಮ ಪೂಜಾರಿ, ಮೋಹನ ಗುತ್ತೇದಾರ್​, ಶಂಕರ ಮುಸ್ತರಿ, ಸಂಗನಬಸಯ್ಯ ಮಠ, ವೀರಶೆಟ್ಟಿ ಮಗ್ಗಿ, ಚಂದ್ರಶೇಖರ ಜಮಾದಾರ, ಜಗ್ಗಯ್ಯ ಸ್ವಾಮಿ, ಕಾಶಿನಾಥ ಪಾಟೀಲ್​, ಜಗ್ಗಪ್ಪ ಹಡಪದ, ಹಣಮಂತ ಭೋವಿ, ಸುರೇಶ ದಂಡಿನ್​, ಮುಸ್ತಫ, ಸತೀಶ, ಮೌನೇಶ, ಆಕಾಶ, ಸತೀಶ, ಮಲ್ಲಪ್ಪ, ಸುರೇಶ ದಂಡಿನ್​, ವೀರೇಶ ಶೆಟ್ಟಿ ಪೂಜಾರಿ, ರಾಜಕುಮಾರ ತಳವಾರ ಇತರರಿದ್ದರು.