

ಕಮಲಾಪುರ: ಮಹಾಗಾಂವ್ ಹೋಬಳಿ ವ್ಯಾಪ್ತಿಯ ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ನವ ಕರ್ನಾಟಕ ರೈತ ಸಂದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ್ ಆಗ್ರಹಿಸಿದರು. ಮಹಾಗಾಂವ್ ಕ್ರಾಸ್ನಲ್ಲಿರುವ ಜೆಸ್ಕಾಂ ಕಚೇರಿ ಎದುರು ನವ ಕರ್ನಾಟಕ ರೈತ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿ, ಮಳೆಯ ಕೊರೆತೆಯಿಂದ ಮುಂಗಾರು ಬೆಳೆ ಹಾಳಾಗಿದೆ. ಇದೀಗ ಅಳಿದುಳಿದ ಫಸಲು ಪಡೆಯಲು ರೈತಾಪಿ ವರ್ಗ ಶ್ರಮಿಸುತ್ತಿದ್ದು, ಇಂತಹ ಸಮಯದಲ್ಲಿ ಜೆಸ್ಕಾಂ ಅಧಿಕಾರಿಗಳು ಅಸಮರ್ಪಕ ವಿದ್ಯುತ್ ಪೂರೈಸುವ ಮೂಲಕ ಸಂಕಷ್ಟಕ್ಕಿಡು ಮಾಡುತ್ತಿದ್ದಾರೆ. ಸೂರ್ಯನ ಬೆಳಕಿನ ಅವಧಿಯಲ್ಲಿ ಒಟ್ಟು ಏಳು ಗಂಟೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಗಿರೀಶ ಮಾಲಿಪಾಟೀಲ್, ಮಲ್ಲಿಕಾರ್ಜುನ ಮರತೂರಕರ, ನರೇಶ ಹರಸೂರಕರ, ಶಿವರಾಜ ಪಾಟೀಲ್, ಮೇರಾಜ ಪಾಟೀಲ್, ಶರಣು ಸ್ವಾಮಿ, ಸಿದ್ದು ಪಾಟೀಲ್, ಉತ್ತಮ ಪಾಟೀಲ್, ಅರುಣ ಧಮ್ಮೂರ, ಶರಣಬಸ್ಸಪ್ಪ ಬಾಳಿ, ಸಂಗಮೇಶ ಹಳ್ಳಿ, ಸಂಜಯ ನಾಟಿಕಾರ, ರೇವಣಸಿದ್ದ ಕಿಣಗಿ ಇತರರಿದ್ದರು.