ರೈತರಿಗೆ ಪ್ರೋತ್ಸಾಹಧನ, ಕೃಷಿ ಪರಿಕರ ನೀಡಿ

ರೈತರಿಗೆ ಪ್ರೋತ್ಸಾಹಧನ ಹಾಗೂ ಕೃಷಿ ಪರಿಕರ ವಿತರಿಸುವಲ್ಲಿ ರ್ನಿಲಕ್ಷ ವಹಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಸೇನೆಯಿಂದ ಚಂದಾಪುರದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ರಾಜಕುಮಾರ ತಳವಾರ, ಮಲ್ಲು ಹೂಗಾರ, ಶ್ರೀಹರಿ ಬೈನೂರ, ಸಂತೋಷರೆಡ್ಡಿ, ಗೋಪಾಲ ಎಂ.ಪಿ. ಇತರರಿದ್ದರು.

Published on: 

ಚಿಂಚೋಳಿ: ರೈತರಿಗೆ ಕೃಷಿ ಪರಿಕರ ಹಾಗೂ ಪ್ರೋತ್ಸಾಹಧನ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೃಷಿ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ಅನ್ನದಾತರು ಮಂಗಳವಾರ ರಾಜ್ಯ ರೈತ ಸಂಘ, ರೈತ ಸೇನೆಯಿಂದ ಚಂದಾಪುರದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ರೈತರು ಸಕಾಲದಲ್ಲಿ ಹಣ ಪಾವತಿಸಿದರೂ ಇಲಾಖೆ ಅಧಿಕಾರಿಗಳು ನೆಪ ಹೇಳುತ್ತಾ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಿದೆ. ಕೃಷಿ ಇಲಾಖೆಗೆ ಹಣದ ಡಿಡಿ ನೀಡಿದರೂ ಪರಿಕರ ನೀಡುತ್ತಿಲ್ಲ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯವಹಿಸಿದರೆ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಪ್ರಮುಖರಾದ ಗೋಪಾಲ ಎಂ.ಪಿ., ರಾಜಕುಮಾರ ತಳವಾರ, ಮಲ್ಲು ಹೂಗಾರ, ಶ್ರೀಹರಿ ಬೈನೂರ, ಸಂತೋಷರೆಡ್ಡಿ, ಭೀಮಶೆಟ್ಟಿ ಮುರುಡಾ, ಕೆ.ಎಂ.ಬಾರಿ, ಶ್ರೀಕಾಂತ ಪಿತ್ತಲ್​, ಗುರುನಾಥ ತಳವಾರ, ಜಗನ್ನಾಥ ರೆಡ್ಡಿ, ಶರಣು ಮಡಿವಾಳ, ವಿಠಲ ಪೂಜಾರಿ, ಸುಭಾಷ ಗಡಿನಿಂಗದಳ್ಳಿ, ಪವನ ಬೈನೂರ, ಸಂಗಮೇಶ ಸೋಮಲಿಂಗದಳ್ಳಿ, ಕಲ್ಲಪ್ಪ ರಾಜಾಪುರ, ಬಸವರಾಜ ಪಾಟೀಲ್​, ಓಂಕಾರ ಬೈನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net