ರೈತರಿಗೆ ತಕ್ಷಣ ಬರ ಪರಿಹಾರ ಕೊಡಿ

ಬರ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ, ಕುಡಿವ ನೀರಿನ ಸಮಸ್ಯೆ ಇತರ ವಿಷಯಗಳ ಕುರಿತು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಡಿಸಿ ಇಕ್ರಮ್​ ಶರೀಫ್​ ಜತೆ ಚರ್ಚಿಸಿದರು. ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್​, ಅಮರನಾಥ ಪಾಟೀಲ್​, ಅರುಣ ಶಹಾಪುರ ಇದ್ದರು.
ಬರ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ, ಕುಡಿವ ನೀರಿನ ಸಮಸ್ಯೆ ಇತರ ವಿಷಯಗಳ ಕುರಿತು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಡಿಸಿ ಇಕ್ರಮ್​ ಶರೀಫ್​ ಜತೆ ಚರ್ಚಿಸಿದರು. ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್​, ಅಮರನಾಥ ಪಾಟೀಲ್​, ಅರುಣ ಶಹಾಪುರ ಇದ್ದರು.
Published on: 

ಕಲಬುರಗಿ: ಬರ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ವಿತರಿಸುವುದರ ಜತೆ ಜನರು ಗುಳೆ ಹೋಗದಂತೆ ದುಡಿಯುವ ಕೈಗೆ ಕೆಲಸ ನೀಡಬೇಕು ಎಂದು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಒತ್ತಾಯಿಸಿದರು.

ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್​ ರೇವೂರ, ಅಮರನಾಥ ಪಾಟೀಲ್​ ಹಾಗೂ ಅರುಣ ಶಹಾಪುರ ಜತೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರನ್ನು ಭೇಟಿಯಾಗಿ ರೈತರು ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸುದೀರ್ ಚರ್ಚೆ ನಡೆಸಿದ ಅವರು, ಜಿಲ್ಲೆಯ ಎಲ್ಲ ತಾಲೂಕು, ನಗರದ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಕುರಿತು ಗಮನ ಸೆಳೆದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನೀರಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ತುರ್ತು ಹಾಗೂ ಶಾಶ್ವತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮುಂಗಾರು ಬೆಳೆ ಹಾನಿಯಾಗಿದ್ದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಿಂಗಾರು ಬೆಳೆಯೂ ಮಳೆ ಕೊರತೆಯಿಂದ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ರೈತರ ಸಂಕಷ್ಟ ಅರಿತು ಎಕರೆಗೆ 50,000 ರೂ. ಬರ ಪರಿಹಾರ ಘೋಷಿಸಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net