ಗಡಿ ರಕ್ಷಣೆ ಮಾಡುವವರ ತಯಾರು ಮಾಡಿ

ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಚಿಂತನ ಗೋಷ್ಠಿಯನ್ನು ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಮಾಜಿ ಸೈನಿಕರ ಸಂದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ವಿನೋದಕುಮಾರ ಭಗವಂತರಾವ, ಬಸವರಾಜ ಬಿರಾದಾರ, ಮಲ್ಲಪ್ಪ ಭಾಗ್ಯವಾಡಿ, ಚನ್ನಬಸವಣ್ಣ ಬಳತೆ ಇತರರಿದ್ದರು.
ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಚಿಂತನ ಗೋಷ್ಠಿಯನ್ನು ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಮಾಜಿ ಸೈನಿಕರ ಸಂದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ವಿನೋದಕುಮಾರ ಭಗವಂತರಾವ, ಬಸವರಾಜ ಬಿರಾದಾರ, ಮಲ್ಲಪ್ಪ ಭಾಗ್ಯವಾಡಿ, ಚನ್ನಬಸವಣ್ಣ ಬಳತೆ ಇತರರಿದ್ದರು.
Published on: 

ಬಸವಕಲ್ಯಾಣ: ದೇಶದ ನಾಯಕತ್ವ ಎಷ್ಟು ಗಟ್ಟಿಯಾಗಿರುತ್ತದೆಯೋ ಅಷ್ಟೇ ಗಟ್ಟಿಯಾಗಿ ಸೈನಿಕರು ಕಾರ್ಯನಿರ್ವಹಿಸುತ್ತಾರೆ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕರಾದ ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ಸೋಮವಾರ ಮಾಚಿದೇವ ಮಲ್ಲಿಬೊಮ್ಮ ವೀರ ಸೈನಿಕರ ವೇದಿಕೆಯಲ್ಲಿ ಏರ್ಪಡಿಸಿದ್ದ ಶರಣ ದರ್ಶನ ರಾಷ್ಟ್ರೀಯತ್ವದ ಮೂಲ ಚಿಂತನ ಗೋಷ್ಠಿ ಉದ್ಘಾಟಿಸಿದ ಅವರು, ಆತ್ಮವಿಶ್ವಾಸದಿಂದ ಕೂಡಿದ ದೇಶದ ಗಡಿ ರಕ್ಷಣೆ ಮಾಡುವಂಥವರನ್ನು ತಯಾರು ಮಾಡಲು ನಾವು ಸಿದ್ಧರಿರಬೇಕು ಎಂದರು.

ಸಶಕ್ತ ಸಮಾಜ ಇರಬೇಕು. ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದಾಗಿರಬೇಕು. ಅಂದು ದೇಶದಲ್ಲಿ ಲಾಲ್​ ಬಹಾದ್ದೂರ್​ ಶಾಸ್ತ್ರಿ ಚೀನಾ ವಿರುದ್ಧ ಯುದ್ಧ ಗೆದ್ದರು. ಇಂದಿರಾ ಗಾಂಧೀಜಿ ಪಾಕಿಸ್ತಾನ ಒಡೆದು ಎರಡು ಭಾಗ ಮಾಡಿದರು. ಅಟಲ್​ ಬಿಹಾರಿ ವಾಜಪೇಯಿ ಕಾರ್ಗಿಲ್​ ಯುದ್ಧ ಗೆದ್ದರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಮಡಿವಾಳ ಮಾಚಿದೇವ ಮಲ್ಲಿಬೊಮ್ಮನವರು ವಚನ ಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ್ದಾರೆ. ಸೈನಿಕರು ನಮ್ಮ ದೇಶದ ಹೆಮ್ಮೆಯ ಪ್ರತಿಕ. ಅವರು ತಮ್ಮ ಜೀವದ ಅಮೂಲ್ಯ ವರ್ಷಗಳನ್ನು ದೇಶದ ರಕ್ಷಣೆಗೆ ಸಮರ್ಪಿಸಿದ್ದಾರೆ. ಅವರ ಅನುಭವ ಯುವ ಜನತೆಗೆ ಸ್ಫೂರ್ತಿಯಾಗಬೇಕು ಎಂದರು.

ಸೇವಾ ಅವಧಿಯಲ್ಲಿನ ರೋಮಾಂಚನಕಾರಿ ಅನುಭವಗಳನ್ನು ಹಂಚಿಕೊಂಡ ಹೈದರಾಬಾದ್​ನ ನಿವೃತ್ತ ಎಸಿಪಿ ಕಮಾಂಡೋ ವಿನೋದಕುಮಾರ ಭಗವಂತರಾವ ಅವರು, ಸೈನಿಕರು ಕುಟುಂಬದಿಂದ ದೂರವಿದ್ದು ದೇಶಕ್ಕಾಗಿ ಸೇವೆ ಸಲ್ಲಿಸುವುದು ಅವರ ಜೀವನದ ಭಾಗವಾಗಿದೆ. ಕೆಟ್ಟದ್ದಕ್ಕೆ ಯಾರೂ ಪ್ರೋತ್ಸಾಹಿಸಬಾರದು. ಆಂತರಿಕ ವಿರೋಧಿಗಳಿಂದ ಜಾಗೃತರಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರ ಸಂದ ಬೀದರ್​ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ಕಲಬುರಗಿ ಅಧ್ಯಕ್ಷ ಬಸವರಾಜ ಬಿರಾದಾರ, ಮಾಜಿ ಸೈನಿಕ ರವೀಂದ್ರಕುಮಾರ ಗುತ್ತೇದಾರ್​ ಮಾತನಾಡಿದರು.

ಉದ್ಯಮಿ ಚನ್ನಬಸವಣ್ಣ ಬಳತೆ, ಪ್ರಮುಖರಾದ ಸೂರ್ಯಕಾಂತ, ಮಲ್ಲಪ್ಪ ಭಾಗ್ಯವಾಡಿ, ವೆಂಕಟರಾವ ತೆಲಂಗ, ಅಮೃತರಾವ ರಾಜೇಶ್ವರ, ಶಿವಲಿಂಗಯ್ಯ ಸ್ವಾಮಿ, ಜಗನ್ನಾಥ ಡಿಗ್ಗಿ, ಅನಿಲಕುಮಾರ ರಾಜಕಾರಣೆ, ಸುರೇಶ ಮಾಶೆಟ್ಟಿ, ಸಿದ್ದಣ್ಣ ಮರಪಳ್ಳೆ, ಲಿಂಗರಾಜ ಶಾಶೆಟ್ಟಿ, ಸುಜಾತಾ ರಾಯವಾಡೆ ಇದ್ದರು. ಮುಕ್ತಾಯಕ್ಕ ಮಹಾಶಕ್ತಿ ಕೂಟದವರು ಗುರುಪೂಜೆ ನೆರವೇರಿಸಿದರು. ಸಂತೋಷ ಮಡಿವಾಳ ಸ್ವಾಗತಿಸಿದರು. ಸಂಗಮೇಶ ತೋಗರಖೇಡೆ ನಿರೂಪಣೆ ಮಾಡಿದರು. ರಾಧಾ ಯವಳೆ ಹಾಗೂ ವಿವೇಕ ವಸ್ತ್ರದ ದೇಶಭಕ್ತಿ ಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net