ಪ್ರತಿಭೆ, ಭವಿಷ್ಯ ನಿರ್ಮಾಣದ ಹೂಡಿಕೆ

ಕಲಬುರಗಿಯಲ್ಲಿ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಬಿ.ಎನ್.ಗಂಗಾಧರ, ಡಾ.ಅಣ್ಣಪ್ಪ ಪಾಂಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಪಿ.ಎಸ್.ಶಂಕರ್, ಡಾ.ಶರಣಪ್ಪ ಎಸ್.ಡಿ., ಪ್ರೊ.ವೈ.ಎಂ.ಜೈರಾಜ್, ಡಾ.ಎಚ್.ವೀರಭದ್ರಪ್ಪ, ಅಂಬಿಕಾ ಶಂಕರ್ ಇತರರಿದ್ದರು.
ಕಲಬುರಗಿಯಲ್ಲಿ ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಬಿ.ಎನ್.ಗಂಗಾಧರ, ಡಾ.ಅಣ್ಣಪ್ಪ ಪಾಂಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಪಿ.ಎಸ್.ಶಂಕರ್, ಡಾ.ಶರಣಪ್ಪ ಎಸ್.ಡಿ., ಪ್ರೊ.ವೈ.ಎಂ.ಜೈರಾಜ್, ಡಾ.ಎಚ್.ವೀರಭದ್ರಪ್ಪ, ಅಂಬಿಕಾ ಶಂಕರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಆಯುಕ್ತ ಡಾ.ಶರಣಪ್ಪ ಅಭಿಪ್ರಾಯ
  • ಡಾ.ಶಂಕರ ಪ್ರತಿಷ್ಠಾನದ ವೈದ್ಯಶ್ರೀ, _ವೈದ್ಯ ಸಾಹಿತ್ಯ, ವಿದ್ಯಾರ್ಥಿ ಪುರಸ್ಕಾರ
ಕಲಬುರಗಿ: ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನ ೨೬ ವರ್ಷಗಳಿಂದ ನೀಡುತ್ತಿರುವ ವಿದ್ಯಾರ್ಥಿ ಪುರಸ್ಕಾರ ಪ್ರತಿಭೆ ಮತ್ತು ಭವಿಷ್ಯದ ಹೂಡಿಕೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಸಭಾಂಗಣದಲ್ಲಿ ಪ್ರತಿಷ್ಠಾನ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ವಿe್ಞÁನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ವತಃ ವೈದ್ಯರಾಗಿದ್ದರೂ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್ ಎರಡೂವರೆ ದಶಕದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಬಣ್ಣಿಸಿದರು.
ವೈe್ಞÁನಿಕ ಮನೋಭಾವ ಪ್ರಸಾರ ಜತೆಗೆ ಯುವ ಮನಸ್ಸುಗಳಿಗೆ ವಿe್ಞÁನದ ಮಾಹಿತಿಯನ್ನು ಕ್ಯಾಲೆಂಡರ್ ಒದಗಿಸುತ್ತದೆ. ವಿದ್ಯಾರ್ಥಿಗಳ ಪಾಲಿಗೆ ವಿದ್ಯಾರ್ಥಿ ವೇತನ ಶಿP್ಷÀಣಕ್ಕೆ ಅತ್ಯಂತ ಶಕ್ತಿ ನೀಡುತ್ತದೆ. ನಾನೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿP್ಷÀಣ ಪಡೆದು ೬೦೦ ರೂ. ಮಾಸಿಕ ವಿದ್ಯಾರ್ಥಿ ವೇತನ ಪಡೆದಿರುವುದನ್ನು ಸ್ಮರಿಸಿ ಪ್ರತಿಷ್ಠಾನದ ಕಾರ್ಯ ರಾಷ್ಟç ನಿರ್ಮಾಣದ ಕೆಲಸ ಎಂದು ಶ್ಲಾಘಿಸಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಬಿಎಲï‌ಡಿಇ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವೈ.ಎಂ. ಜೈರಾಜ್ ಮಾತನಾಡಿ, ವೈದ್ಯಕೀಯ ಕ್ಷೇತ್ರ ಅಪಾರ ಬೆಳೆಯುತ್ತಿದೆ. ದೇಶದಲ್ಲಿ ೮೦೦ಕ್ಕೂ ಹೆಚ್ಚು ವೈದ್ಯಕೀಯ ವಿe್ಞÁನ ಸಂಸ್ಥೆಗಳಲ್ಲಿ ೧.೫೦ ಲP್ಷÀ ಸೀಟುಗಳಿವೆ. ೨೦೩೦ರಲ್ಲಿ ಈ ಸಂಖ್ಯೆ ಎರಡು ಲP್ಷÀಕ್ಕೇರಲಿದ್ದು, ಸ್ನಾತಕೋತ್ತರ ಪದವಿ ಸೀಟುಗಳು ಒಂದು ಲP್ಷÀಕ್ಕೆ ಹೆಚ್ಚಾಗುವ ಮೂಲಕ ಕ್ರಾಂತಿ ನಡೆಯಲಿದೆ ಎಂದು ಭವಿಷ್ಯ ನುಡಿದರು.
ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಎಸ್. ಶಂಕರ್, ಡಾ.ರಾಜಶ್ರೀ ವಿಶ್ವನಾಥರಡ್ಡಿ, ಡಾ.ವೀಣಾ ವಿಕ್ರಮ ಸಿದ್ದಾರಡ್ಡಿ, ನ್ಯಾಯವಾದಿ ಉದಯ ಹೊನಗುಂಟಿಕರ್, ಡಾ.ಶೈಲಜಾ ತಪಲಿ, ಎಚ್‌ಕೆಇ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಅಪ್ಪಾರಾವ ಅಕ್ಕೋಣಿ, ಶ್ರೀನಿವಾಸ ಸಿರನೂರಕರ್, ಮಣಿಲಾಲ್ ಶಹಾ, ಎಸ್.ಎಸ್. ಹಿರೇಮಠ, ಸದಾನಂದ ಮಹಾಗಾಂವಕರ್, ಡಾ.ಎಸ್.ಎ. ಮಾಲಿಪಾಟೀಲ್, ಡಾ.ಪಿ.ಎಂ. ಬಿರಾದಾರ್, ಮಹಾನಂದ ಮಹಾಗಾಂವಕರ್, ಶಿವಾನಂದ ಹೆಬ್ಬಂಡಿ ಇತರರಿದ್ದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಚ್. ವೀರಭದ್ರಪ್ಪ ಸ್ವಾಗತಿಸಿದರು. ರಾಜೇಶ್ವರಿ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರೊ.ನರೇಂದ್ರ ಬಡಶೇಷಿ ನಿರೂಪಣೆ ಮಾಡಿದರು. ಡಾ.ರಾಮಕೃಷ್ಣ ರಡ್ಡಿ ವಂದಿಸಿದರು. ಡಾ.ರಾಜೇಂದ್ರ ಕೊಂಡ, ಡಾ.ಸದಾನಂದ ಪೆರ್ಲ, ಡಾ.ಅನ್ನಪೂರ್ಣ ಬಿರಾದಾರ್, ಡಾ.ಅನ್ನಪೂರ್ಣ ಮಾಲಿಬಿರಾದಾರ್ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಬೆಂಗಳೂರು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ ಅವರಿಗೆ ಡಾ.ಪಿ.ಎಸ್. ಶಂಕರ್ ರಾಷ್ಟಿçÃಯ ವೈದ್ಯಶ್ರೀ ಪ್ರಶಸ್ತಿ ಹಾಗೂ ಬೆಳಗಾವಿ ಜಿಲ್ಲೆ ಅಥಣಿ ವೈದ್ಯ ಡಾ.ಅಣ್ಣಪ್ಪ ಪಾಂಗಿ ಅವರಿಗೆ ಡಾ.ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ವೈದ್ಯಕೀಯ ಕೋರ್ಸ್ ಮಾಡಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟಕ್ಕೆ ತಲುಪುವಂತಾಗಬೇಕು. ವೈದ್ಯ ವಿದ್ಯಾರ್ಥಿಗಳು ಪ್ರತಿಭೆ, ಛಲದೊಂದಿಗೆ ಸಾಧನೆ ಮಾಡಬೇಕು.

| ಡಾ.ವೈ.ಎಂ.ಜೈರಾಜ್ಸಮಕುಲಪತಿ, ಬಿಎಲ್‌ಡಿಇ ವಿವಿ ವಿಜಯಪುರ

ವಿದ್ಯಾರ್ಥಿ ವೇತನ ಪಡೆದವರು

೨೦೨೫-೩೦ರ ವೈದ್ಯ ಮತ್ತು ಇಂಜಿನಿಯರಿAಗ್ ಕೋರ್ಸ್ಗೆ ಪ್ರವೇಶ ಪಡೆದ ಅನೇಕ ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವೈದ್ಯಕೀಯದಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಹಾರನಹಳ್ಳಿಯ ಪಾಂಡುರAಗ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನಂದನ್ ಗಣೇಶ, ತುಮಕೂರು ಜಿಲ್ಲೆ ಹುಳಿಯಾರು ಗ್ರಾಮದ ಆದಿತ್ಯ ಎಚ್.ಎಸ್., ಚಿಕ್ಕಮಗಳೂರಿನ ಲಿಖಿತ್ ಸಿ.ಪಿ., ಗದಗ ಜಿಲ್ಲೆ ಬಿಂಕದಕಟ್ಟಿಯ ಅಮೋಘ ರೆಡ್ಡಿ, ಯಾದಗಿರಿ ಜಿಲ್ಲೆ ಬಳಬಟ್ಟಿಯ ಅಭಿಷೇಕ, ಕಲಬುರಗಿಯ ಪ್ರಜ್ವಲ್ ಸಮಗೊಂಡ, ಚಿತ್ತಾಪುರದ ಶಾಂಭವಿ ಅಂಬರ್, ಕೊಪ್ಪಳ ಜಿಲ್ಲೆ ಮೈಲಾಪುರದ ಕಿರಣಕುಮಾರ ಹಾಗೂ ಇಂಜಿನಿಯರಿAಗ್‌ನಲ್ಲಿ ಚಿತ್ರದುರ್ಗದ ನೇಹಾ, ಕಲಬುರಗಿಯ ಭಾಗ್ಯಶ್ರೀ, ಚೇತನ್ ವಿದ್ಯಾರ್ಥಿ ವೇತನ ಪಡೆದುಕೊಂಡರು. ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆ ಡಾ.ರಾಜಶ್ರೀ ವಿಶ್ವನಾಥರಡ್ಡಿ ಹಾಗೂ ಕಲಬುರಗಿ ಯುನೈಟೆಡ್ ಆಸ್ಪತ್ರೆಯ ಡಾ.ವಿಕ್ರಮ ಸಿದ್ದಾರೆಡ್ಡಿ ಅವರು ಡಾ.ಎಸ್.ಎಸ್. ಸಿದ್ದಾರಡ್ಡಿ ವೈದ್ಯ ವಿದ್ಯಾರ್ಥಿ ವೇತನ, ಉದಯ ಹೊನಗುಂಟಿಕರ್ ಅವರು ಉಮಾ ಹೊನಗುಂಟಿಕರ್ ಸ್ಮರಣಾರ್ಥ ವೈದ್ಯ ವಿದ್ಯಾರ್ಥಿ ವೇತನ, ಡಾ.ಇಂದಿರಾ ವೀರಭದ್ರಪ್ಪ ಆಶೀರ್ವಾದ ಆಸ್ಪತ್ರೆ ವೈದ್ಯ ವಿದ್ಯಾರ್ಥಿ ವೇತನ, ಲಕ್ಷಿö್ಮÃದೇವಿ ಡಾ.ಮಲ್ಲಿಕಾರ್ಜುನ ಕುರಾಳ ಅವರು ಕುರಾಳ ಆಸ್ಪತ್ರೆಯ ಸೋಮಮ್ಮ ಮತ್ತು ಭೀಮರಾಯಪ್ಪ ಸ್ಮರಣಾರ್ಥ ವೈದ್ಯ ವಿದ್ಯಾರ್ಥಿ ವೇತನ ಸೇರಿ ಅನೇಕ ದಾನಿಗಳು ಕೈಜೋಡಿಸಿದ್ದಾರೆ. ಇಂಜಿನಿಯರಿAಗ್‌ನಲ್ಲಿ ಡಾ.ಶೈಲಜಾ ತಪಲಿ, ಜಿ.ಎಸ್.ಪ್ರಕಾಶ ವಿದ್ಯಾರ್ಥಿ ವೇತನ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net