ಪೋಲಕಪಳ್ಳಿ ಕಾರ್ಮಿಕರ ಪ್ರತಿಭಟನೆ

ಚಿಂಚೋಳಿ ತಾಲೂಕು ಪೋಲಕಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮ್ಯಾಟ್ರಿಕ್ಸ್ ಆಗ್ರೋ ಪ್ರೆÊವೇಟ್ ಲಿಮಿಟೆಡ್ ಕಂಪನಿ ಏಕಾಏಕಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಶನಿವಾರ ಮನವಿ ಸಲ್ಲಿಸಿ, ಸೂಕ್ತ ಸ್ಪಂದನೆಗೆ ಮನವಿ ಮಾಡಿದರು. ಮಾರುತಿ ಗಂಜಗಿರಿ, ಕಾರ್ಮಿಕ ಮುಖಂಡರಾದ ವೀರೇಶ ತಾಂಡೂರ, ಹಣಮಂತ ಗೌರಿ, ಸೈಯದ್ ಶಕೀಲ್, ಆನಂದ ಚಿಂಚೋಳಿಕರ್, ಪ್ರಲ್ಹಾದ ಭೋವಿ, ರಾಘವೇಂದ್ರ ಚಾಂಗಲೇರಾ, ಮಾಹಂತೇಶ್ ಇತರರಿದ್ದರು.
ಚಿಂಚೋಳಿ ತಾಲೂಕು ಪೋಲಕಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮ್ಯಾಟ್ರಿಕ್ಸ್ ಆಗ್ರೋ ಪ್ರೆÊವೇಟ್ ಲಿಮಿಟೆಡ್ ಕಂಪನಿ ಏಕಾಏಕಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಶನಿವಾರ ಮನವಿ ಸಲ್ಲಿಸಿ, ಸೂಕ್ತ ಸ್ಪಂದನೆಗೆ ಮನವಿ ಮಾಡಿದರು. ಮಾರುತಿ ಗಂಜಗಿರಿ, ಕಾರ್ಮಿಕ ಮುಖಂಡರಾದ ವೀರೇಶ ತಾಂಡೂರ, ಹಣಮಂತ ಗೌರಿ, ಸೈಯದ್ ಶಕೀಲ್, ಆನಂದ ಚಿಂಚೋಳಿಕರ್, ಪ್ರಲ್ಹಾದ ಭೋವಿ, ರಾಘವೇಂದ್ರ ಚಾಂಗಲೇರಾ, ಮಾಹಂತೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮ್ಯಾಟ್ರಿಕ್ಸ್ ಆಗ್ರೋ ಪ್ರೆÊವೇಟ್ ಲಿಮಿಟೆಡ್ ಕಂಪನಿ ಏಕಾಏಕಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಶನಿವಾರ ಮನವಿ ಸಲ್ಲಿಸಿ, ಸೂಕ್ತ ಸ್ಪಂದನೆಗೆ ಮನವಿ ಮಾಡಿದರು.
ಸುಮಾರು ೧೫-೨೦ ವರ್ಷಗಳಿಂದ ಈ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುವ ಮೂಲಕ ಉಪಜೀವನ ಸಾಗಿಸುತ್ತಿದ್ದರು. ಆದರೆ ಫೆಬ್ರವರಿ ೫ರಂದು ಮಧ್ಯರಾತ್ರಿ ಕಂಪನಿಯ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆ ನೀಡದೆ ಕಂಪನಿಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ದೂರಿದರು.
ಯಾವುದೇ ಕೈಗಾರಿಕೆ ಬಂದ್ ಮಾಡಬೇಕು ಎಂದಾದರೆ ಕನಿಷ್ಠ ೯೦ ದಿನಗಳ ಮುಂಚಿತವಾಗಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ಜತೆಗೆ ಕಾರ್ಮಿಕರ ಬಾಕಿ ಸಂಬಳ, ಬೋನಸ್ ಮತ್ತು ಇತರ ಭತ್ಯೆ ಪಾವತಿಸಿ ನಂತರವೇ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದು ಕಂಪನಿ ಬಂದ್ ಮಾಡಬೇಕು. ಆದರೆ ಕಂಪನಿ ಆಡಳಿತ ಮಂಡಳಿ ಈ ನಿಯಮ ಪಾಲಿಸದೆ ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೧೨೦ ಕಾರ್ಮಿಕರಿಗೆ ಕಳೆದ ೪-೫ ತಿಂಗಳ ಬಾಕಿ ಸಂಬಳ, ಬೋನಸ್ ಮತ್ತು ಇತರ ಭತ್ಯೆ ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕಂಪನಿ ಆರಂಭದ ದಿನದಿಂದಲೇ ನೀಡಿಲ್ಲ. ಆದ್ದರಿಂದ ಬಾಕಿ ಇರುವ ಕನಿಷ್ಠ ವೇತನ ಪಾವತಿಸಬೇಕು. ಪರಿಹಾರ, ಗ್ರಾÈಜುಚಿ, ವಿಆರ್‌ಎಸ್, ಓವರ್‌ಟೈಮ್ ಸಂಬಳ ಹಾಗೂ ಭವಿಷ್ಯನಿಧಿ ಸೇರಿ ಎಲ್ಲಾ ಕಾನೂನುಬದ್ಧ ಸೌಲಭ್ಯ ನೀಡಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾರುತಿ ಗಂಜಗಿರಿ, ಕಾರ್ಮಿಕ ಮುಖಂಡರಾದ ವೀರೇಶ ತಾಂಡೂರ, ಹಣಮಂತ ಗೌರಿ, ಸೈಯದ್ ಶಕೀಲ್, ಆನಂದ ಚಿಂಚೋಳಿಕರ್, ಪ್ರಲ್ಹಾದ ಭೋವಿ, ರಾಘವೇಂದ್ರ ಚಾಂಗಲೇರಾ, ಮಾಹಂತೇಶ್, ಪಿರೋಜ್ ಖಾನ್, ರೇವಣಸಿದ್ದಪ್ಪ, ಸಂತೋಷಕುಮಾರ, ಸೂರ್ಯಕಾಂತ, ಗಣೇಶ್, ಮಾಹದೇವ, ಶಂಕರ್, ಕೃಷ್ಣಕುಮಾರ್, ಅಮ್ಜದ್ ಅಲಿ, ಕರಿಯಪ್ಪ, ನಬಿ ಪಟೇಲ್, ದೌಲಪ್ಪ, ಅಖೀಲ್, ಚಂದ್ರಕಾAತ, ಪ್ರಶಾಂತ್, ಶೇಖರ, ಸಂತೋಷ, ಆನಂದ, ಪ್ರವೀಣ್, ನವೀನ್, ಯಲ್ಲಾಲಿಂಗ, ಅರುಣ, ಮೋಹನ, ಶರಣಪ್ಪ, ಶಿವಶರಣಪ್ಪ, ತಿಪ್ಪಣ್ಣಾ, ಪ್ರಭಾವತಿ, ಭೀಮಾಶಂಕರ, ದಿನೇಶ್, ಭೀಮರಾವ, ರಾಜಕುಮಾರ ಸ್ವಾಮಿ, ಮಹೆಬೂಬ್, ನಾಗೇಶ್, ಬ್ರಹ್ಮಾನಂದ, ಗುಡುಖಾನ್, ಸೋಮಶೇಖರಯ್ಯ, ರಾಜು, ಶ್ರೀಕಾಂತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net