

ಕಲಬುರಗಿ: ಸಂಗಮೇಶ್ವರ ಬಡಾವಣೆ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯೋಗೀಶ್ವರ ಯಾವಲಕ್ಷೀ ಭವನದಲ್ಲಿ ನಡೆಯುತ್ತಿರುವ ಕೋಟಿ ಸೂರ್ಯನಾರಾಯಣ ನಾಮಜಪದ ಪವಿತ್ರ ಗಳಿಗೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಭೇಟಿ ನೀಡಿ ಆಶೀರ್ವಾದ ನೀಡಿದರು.
ಬುಧವಾರ ಬೆಳಗ್ಗೆ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು, ಭಗವಾನ್ ಶ್ರೀ ಸೂರ್ಯನಾರಾಯಣ ದೇವರು ಹಾಗೂ ಮಹರ್ಷಿ ಶ್ರೀ ಯೋಗೀಶ್ವರ ಯಾವಲ್ಕ$್ಯರಿಗೆ ವಿಶೇಷ ಮಂಗಳಾರತಿ ಸಲ್ಲಿಸಿದರು. ಬಳಿಕ ಸೇವಾ ಸಮಿತಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ರಥಸಪ್ತಮಿಯ ಪವಿತ್ರ ಸಂದರ್ಭದಲ್ಲಿ ಸಮಿತಿಯು ಹಮ್ಮಿಕೊಂಡಿರುವ ಶ್ರೀ ಯೋಗೀಶ್ವರ ಯಾವಲ್ಕ$್ಯರ ಮೂರ್ತಿ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶ್ರೀಗಳು ಹಾರೈಸಿದರು.
ಶಾಮಾಚಾರ್ಯ ಬೈಚಬಾಳ, ರಾವೇಂದ್ರ ವಕೀಲ್, ಚಂದ್ರಕಾಂತ ಗದಾರ್, ವಿನೂತ ಜೋಶಿ, ಶಾಮರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ರಾವೇಂದ್ರ ನೀಲೂರು, ಸತ್ಯನಾರಾಯಣ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ದತ್ತಾತ್ರೇಯ ಸಬ್ನಮಿಸ್, ವಾಸುದೇವರಾವ ಕುಳಗೇರಿ, ಅಶೋಕ ಮಳ್ಳಿ, ಗೋಪಾಲರಾವ್ ದೇಶಪಾಂಡೆ, ಮನೋಹರರಾವ್, ಪ್ರತಿಭಾ ಕುಲಕರ್ಣಿ, ಲ್ಮ ಶಾಖಿ, ಛಾಯಾ ಎರಗೊಳ, ಸುನಿತಾ ದೇಶಪಾಂಡೆ, ಶೋಭಾ ಕುಲಕರ್ಣಿ, ಲೀಲಾವತಿ ಕುಲಕರ್ಣಿ, ಪದ್ಮಾವತಿ, ವಾಣಿ ಕುಲಕರ್ಣಿ, ಸೀತಾಬಾಯಿ ಬೈಚಬಾಳ ಇತರರಿದ್ದರು.
ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾವಲ್ಕ್ಯ ಭವನದಲ್ಲಿ ಕೋಟಿ ಸೂರ್ಯನಾರಾಯಣ ನಾಮಜಪ ಯ ಶುರುವಾಗಿದೆ. ಈ ಜಪಾನುಷ್ಠಾನವು 2027ರ ಫೆಬ್ರವರಿ 13ರವರೆಗೆ ನಡೆಯಲಿದ್ದು, ಪ್ರತಿ ಭಾನುವಾರ ನೂರಾರು ಭಕ್ತರು ಸೂರ್ಯ ನಾರಾಯಣ ದೇವರ ಜಪ ನಡೆಸಲಿದ್ದಾರೆ.