

ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಸೇವೆಯ ಭಾಗವಾಗಿರುವ ಫಿಜಿಯಾಥೆರಫಿಯಲ್ಲಿ ಉತ್ತಮ ಸೇವೆ ಹಾಗೂ ಉದ್ಯೋಗ ಅವಕಾಶಗಳಿವೆ ಎಂದು ಖ್ಯಾತ ನರರೋಗ ತಜ್ಷ ಡಾ. ಸಂತೋಷ ಮಂಗಶೆಟ್ಟಿ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮೋಹನರಾಜ್ ಗ್ರೂಫ ಆಫ್ ಇನ್ಸಿಟಿಟ್ಯೂಟ್ ನ ಪ್ರೇರಣಾ ಫಿಜಿಯಾಥೆರಫಿ (physಜಿಟಠಿhಛ್ಟಿapy) ಕಾಲೇಜ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ 10 ಸಾವಿರಕ್ಕೆ ಒಬ್ಬರು ಫಿಜಿಯಾಥೆರಫಿ ಅವಶ್ಯಕತೆವಿದ್ದು, ಆದರೆ ಈಗ 0.36 ಫಿಜಿಯಾಥೆರಫಿಸ್ಟ್ ಗಳು ಇದ್ದಾರೆ. ಅಣದರೆ ಸರಾಸರಿ ಸುಮಾರು 27,800 ಜನರಿಗೆ ಒಬ್ಬರು ಎನ್ನುವಂತಿದ್ದಾರೆ. ಹೀಗಾಗಿ ಇನ್ನೂ ದಶಕಗಳ ಫಿಜಿಯಾಥೆರಫಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅವಶ್ಯಕವಿದೆ ಎಂದು ಡಾ. ಮಂಗಶೆಟ್ಟಿ ವಿವರಣೆ ನೀಡಿದರು.
ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಫಿಜಿಯೋಥೆರಫಿ ಸೇವೆಯ ಅಗತ್ಯ ಹೆಚ್ಚಾಗುತ್ತಿದೆ. ವೃದ್ಧಾಪ್ಯ, ಅಪಘಾತಗಳು, ಸ್ಟ್ರೋಕ್, ಮೂಳೆ ಸಂಧಿ ಮುಂತಾದ ಸಮಸ್ಯೆಗಳು ಹಾಗೂ ಇತರ ಗಾಯಗಳು ಶಸ್ತ್ರಚಿಕಿತ್ಸೆ ನಂತರದ ಪುನರ್ವಸತಿ ಮುಂತಾದ ಕ್ಷೇತ್ರಗಳಲ್ಲಿ ಫಿಜಿಯೋಥೆರಪಿಸ್ಟ್ ಗಳ ಪಾತ್ರ ಹೆಚ್ಚಿದೆ ಎಂದು ಹೇಳಿದರು.
ಕಾಲೇಜ್ ನ ಉಪನ್ಯಾಸಕ ಡಾ. ಶ್ರೀಶೈಲ್ ಪಾಟೀಲ್ ಮಾತನಾಡಿ, ಪ್ರೇರಣಾ ಫಿಜಿಯೋಥೆರಫಿ ಕಾಲೇಜು ಪ್ರಾರಂಭವಾಗಿರುವ ವರ್ಷದಾರಂಭದಲ್ಲೇ ಎಲ್ಲ ಸೀಟುಗಳು ಭರ್ತಿಯಾಗಿರುವುದು ಕಾಲೇಜ್ ನ ಶೈಕ್ಷಣಿಕ ಗುಣಮಟ್ಟತೆಗೆ ಹಿಡಿದ ಕನ್ನಡಿಯಾಗಿದೆ. ಕಾಲೇಜ್ ನಲ್ಲಿ ಪ್ರಮುಖವಾಗಿ ಕಾಲೇಜ್ ನಲ್ಲಿ ಉತ್ತಮವಾದ ಬೋಧನಾ ವಾತಾವರಣವಿದೆ. ಮೌಲ್ಯದೊಂದಿಗೆ ಕಲಿಕೆ ಕಾಲೇಜ್ ನ ಧ್ಯೇಯ ಹೊಂದಿದೆ ಎಂದು ಹೇಳಿದರು.
ಕಾಲೇಜ್ ನ ಚೇರ್ಮನ್ ಡಾ. ದೇವಾನಂದ ಬಿರಾದಾರ ಮಾತನಾಡಿ, ಅಂಕಗಳ ಸಲುವಾಗಿ ಓದುವಿಕೆ ಅಲ್ಲ. ಜ್ಷಾನಕ್ಕಾಗಿ ಓದು ಆಗಬೇಕು ಎಂಬುದೇ ತಮ್ಮ ಧ್ಯೇಯವಾಗಿದೆ. ಪ್ರಮುಖವಾಗಿ ವೃತ್ತಿ ಕೌಶಲ್ಯಾಧರಿತದೊಂದಿಗೆ ಪದವಿ ಪಡೆಯಬೇಕು. ಫಿಜಿಯೋಥೆರಫಿಯಲ್ಲಿ ಉತ್ತಮ ಅವಕಾಶಗಳಿವೆ ಎಂದು ವಿವರಣೆ ನೀಡಿದರು.
ಮೋಹನರಾಜ್ ಗ್ರೂಫ ಆಫ್ ಇನ್ಸಿಟಿಟ್ಯೂಟ್ ನ ಅಧ್ಯಕ್ಷ ರಾಜೇಂದ್ರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ಫಿಜಿಯಾಥೆರಫಿ (physiotherapy) ಕಾಲೇಜ್ ನ ಪ್ರಾಚಾರ್ಯರಾದ ಡಾ. ಶರಣಬಸವ ಹವಾಲ್ದಾರ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ನ ನಿರ್ದೇಶಕರಾದ ಡಾ. ಹೀರಾಚಂದ ಬಬಲಾದ, ಡಾ. ಅಮರೇಶ ಪತ್ತಾರ, ಡಾ. ಕಿರಣಕುಮಾರ ಹಿಬಾರೆ, ನಾಗರಾಜ ಪಾಟೀಲ್, ಡಾ. ನಿವೇದಿತಾ ಡಿ. ಬಿರಾದಾರ ಸೇರಿದಂತೆ ಮುಂತಾದವರಿದ್ದರು. ಡಾ. ಸಪ್ನಾ ನಿರೂಪಿಸಿದರು. ಡಾ. ಜೈನಾಬ್ ಬಾನು ಪರಿಚಯ ಮಾಡಿದರು.ಕಲಬುರಗಿ: ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮೋಹನರಾಜ್ ಗ್ರೂಫ ಆಫ್ ಇನ್ಸಿಟಿಟ್ಯೂಟ್ ನ ಪ್ರೇರಣಾ ಫಿಜಿಯಾಥೆರಫಿ (physiotherapy) ಕಾಲೇಜ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಖ್ಯಾತ ನರರೋಗ ತಜ್ಷ ಡಾ. ಸಂತೋಷ ಮಂಗಶೆಟ್ಟಿ ಉದ್ಘಾಟಿಸಿದರು.