ಅದ್ದೂರಿ ಸಮಾರಂಭಕ್ಕೆ ಅನುದಾನವಿಲ್ಲ

ಆಳಂದನಲ್ಲಿ ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಅಧ್ಯತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ಜರುಗಿತು. ಹಣಮಂತ ಶೇರಿ, ಪ್ರವಿಣ ಮೊದಲೆ, ರಮೇಶ, ಮಹಾಂತೇಶ ಸಣ್ಣಮನಿ ಇತರರಿದ್ದರು.
ಆಳಂದನಲ್ಲಿ ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​ ಅಧ್ಯತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ಜರುಗಿತು. ಹಣಮಂತ ಶೇರಿ, ಪ್ರವಿಣ ಮೊದಲೆ, ರಮೇಶ, ಮಹಾಂತೇಶ ಸಣ್ಣಮನಿ ಇತರರಿದ್ದರು.
Published on: 

ಆಳಂದ: ಗ್ರಾಮೀಣ ಭಾಗದಲ್ಲಿ ವಿವಿಧ ಕ್ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಬರಹಗಾರರು, ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ಆಗಬೇಕಿದೆ ಎಂದು ಕನ್ನಡ ರಣಾ ವೇದಿಕೆ ತಾಲೂಕು ಅಧ್ಯ ಪ್ರವಿಣ್​ ಮೊದಲೆ ಅಭಿಪ್ರಾಯಪಟ್ಟರು. ತಾಲೂಕು ಆಡಳಿತ ಸೌಧದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಬೇಕು. ನಾವು ಮಹಾರಾಷ್ಟ್ರದ ಗಡಿಭಾಗದಲ್ಲಿದ್ದು ಕನ್ನಡ ಭಾಷೆ ಉಳಿಸಿ, ಬೆಳೆಸಲು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಆದರೆ ಪೂರ್ವಭಾವಿ ಸಭೆಗೆ ಕೇವಲ 2&3 ಇಲಾಖೆ ಅಧಿಕಾರಿಗಳು ಹಾಜರಾಗಿರುವುದು ಬೇಸರ ಮೂಡಿಸಿದೆ ಎಂದರು. ತಹಸೀಲ್ದಾರ್​ ಅಣ್ಣಾರಾಯ ಪಾಟೀಲ್​ ಅಧ್ಯತೆ ವಹಿಸಿ ಮಾತನಾಡಿ, ಅದ್ದೂರಿ ಕಾರ್ಯಕ್ರಮ ಅನುದಾನ ಬೇಕು. ಆದರೆ ಕಾರ್ಯಕ್ರಮಕ್ಕೆ ಯಾವುದೇ ಅನುದಾನವಿಲ್ಲ. ಜತೆಗೆ ಬರದ ಛಾಯೆ ಮೂಡಿದೆ. ಸಾಧಕರನ್ನು ಗುರುತಿಸಿ ಸನ್ಮಾನ ಮಾಡೋಣ, ಆಡಳಿತ ಸೌಧದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸೋಣ ಎಂದು ಹೇಳಿದರು. ಕಸಾಪ ತಾಲೂಕು ಅಧ್ಯ ಹಣಮಂತ ಶೇರಿ, ಕನ್ನಡ ಸೇನೆ ತಾಲೂಕು ಅಧ್ಯ ಮಹಾಂತೇಶ ಸಣ್ಣಮನಿ, ಪ್ರಮುಖರಾದ ರಮೇಶ ಜಗತಿ, ತಿಪ್ಪೇರುದ್ರ, ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net