

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಮೊದಲ ಸುತ್ತಿನಲ್ಲಿ 1529 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದು, ಎರಡನೇ ಸುತ್ತಿನ ಮತ ಎಣಿಕೆಯ ಪ್ರಕ್ರಿಯೆಯಲ್ಲೂ 1553 ಮತಗಳ ಮುನ್ನಡೆ ಸಾಧಿಸಿದ್ದು, ಗೆಲುವಿನ ದಡದತ್ತ ಬಿಜೆಪಿ ಹೆಜ್ಜೆ ಇಟ್ಟಿದೆ.
ಒಟ್ಟು 34,784 ಮತದಾರರಿದ್ದು, 30,250 ಶಿಕ್ಷಕರು ಮತ ಚಲಾಯಿಸಿದ್ದರು.
ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯ ಮೊದಲನೇ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು, ಎರಡನೇ ಸುತ್ತು ಅರ್ಧ ಮುಗಿದಿದ್ದು ಅಲ್ಲೂ ಬಿ.ಜೆ.ಪಿ ಅಭ್ಯರ್ಥಿ ಶಶೀಲ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ 1553 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿ 1,529 ಮತಗಳ ಮುನ್ನಡೆ ಸಾಧಿಸಿದ್ದು, ಎರಡನೇ ಸುತ್ತಿನಲ್ಲೂ 7000 ಮತ ಎಣಿಕೆ ಆಗಿದ್ದು, BJP : 3892 ಮತ ಪಡೆದಿದ್ದು, Congress : 2339 ಮತ ಪಡೆದಿದೆ. ಇತರರು 769 ಮತ ಪಡೆದಿದ್ದಾರೆ. ಬಿಜೆಪಿಯೂ 1553 ಮತ ಮುನ್ನಡೆ ಸಾಧಿಸಿದ್ದಾರೆ.
ಪ್ರತಿ ಸುತ್ತಿಗೆ 14 ಸಾವಿರ ಮತ ಎಣಿಕೆ ಇದ್ದು, ಎರಡುವರೆ ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಸುತ್ತು ಕನಿಷ್ಠ ಎರಡುವರೆ ಮೂರು ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ರಾತ್ರಿ ಎಂಟುಗಂಟೆಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.
ಮೊದಲ ಸುತ್ತಿನಲ್ಲಿ ಯಾರು ಎಷ್ಟು ಪಡೆದರು:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ-5,714' ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ-7,243, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣಾ ಜಮಾದಾರ-18, ಜನತಾ ದಳ(ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ-21, ಪಕ್ಷೇತರ ಅಭ್ಯರ್ಥಿ ಕವಿರಾಜ ನಾಗಣ್ಣ ಮೋತಕಪಲ್ಲಿ- 34 , ಪಕ್ಷೇತರ ಅಭ್ಯರ್ಥಿ ಟಿ.ಕೆ. ದಾಸರ- 01, ಪಕ್ಷೇತರ ಅಭ್ಯರ್ಥಿ ಮಹಬೂಬ್ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ-03, ಪಕ್ಷೇತರ ಅಭ್ಯರ್ಥಿ ರಾಜಕುಮಾರ ಕೆ. ಕಲಬುರಗಿ-75, ಪಕ್ಷೇತರ ಅಭ್ಯರ್ಥಿ ರಾಜು ದೇವಪ್ಪ ಸೊನ್ನ-55, ಪಕ್ಷೇತರ ಅಭ್ಯರ್ಥಿ ಶರಣು ಪಿ. ಸುಗೂರು-05, ಪಕ್ಷೇತರ ಅಭ್ಯರ್ಥಿ ಶಶಿಧರ ಬಸವರಾಜ-04, ಪಕ್ಷೇತರ ಅಭ್ಯರ್ಥಿ ಶಿವಶಂಕರ ಅಣ್ಣಪ್ಪ ತರನಳ್ಳಿ-05 ಹಾಗೂ ಪಕ್ಷೇತರ ಅಭ್ಯರ್ಥಿ ಡಾ.ಸುರೇಶ ದಾವೀದಪ್ಪ-05 ಮತಗಳು ಪಡೆದಿದ್ದಾರೆ.
14,001 ಮತ ಎಣಿಕೆ ನಡೆಸಿದ್ದು, ಸಿಂಧು ಮತಗಳು 13,183 ಆಗಿದ್ದು, 815 ಮತ ತಿರಸ್ಕೃತ ಆಗಿವೆ.