ಸಾಹಿತ್ಯ ಓದುವ ಅಭಿರುಚಿ ಬೆಳೆಯಲಿ

ಸಮ್ಮೇಳನ ನಿಮಿತ್ತ ಅಲಂಕೃತ ಸಾರೋಟಿನಲ್ಲಿ ಸರ್ವಾಧ್ಯಕ್ಷ ಗಣಪತರಾವ ಸಿಂಗಶೆಟ್ಟಿ ಅವರನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಲಾ ತಂಡಗಳ ಪ್ರದರ್ಶನ ಗಮನಸೆಳೆಯಿತು.
ಸಮ್ಮೇಳನ ನಿಮಿತ್ತ ಅಲಂಕೃತ ಸಾರೋಟಿನಲ್ಲಿ ಸರ್ವಾಧ್ಯಕ್ಷ ಗಣಪತರಾವ ಸಿಂಗಶೆಟ್ಟಿ ಅವರನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಲಾ ತಂಡಗಳ ಪ್ರದರ್ಶನ ಗಮನಸೆಳೆಯಿತು.
Published on: 

ಕಾಳಗಿ: ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ಯುವ ಪೀಳಿಗೆ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಶಿವಯೋಗಿ ಸಲಹೆ ನೀಡಿದರು.

ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಮಂಗಳವಾರ ಆಯೋಜಿಸಿದ್ದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈಭವ ಹೊಂದಿದೆ. ನಾಡಿನ ಸುಂದರ ಸಂಸತಿ ಉಳಿವಿಗೆ ಸಮ್ಮೇಳನಗಳು ದಾರಿದೀಪವಾಗಿವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​, ಸುಗೂರಿನ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಗಣಪತರಾವ ಸಿಂಗಶೆಟ್ಟಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಸಾಲಿಯಾ ಬೇಗಂ, ಬಿಇಒ ಶಶಿಧರ ಬಿರಾದಾರ, ಪ್ರಮುಖರಾದ ಮಲ್ಲಿಕಾರ್ಜುನ ಗಾಜರೆ, ಮುಡುಬಿ ಗುಂಡೇರಾವ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ರಾಜಕುಮಾರ ರಾಜಾಪುರ, ಶಿವರಾಜ ಅಂಡಗಿ, ಶಿವಲೀಲಾ ಕಲಗುರ್ತಿ, ಸುರೇಶ ದೇಶಪಾಂಡೆ ಇತರರಿದ್ದರು.

ಶಿಕ್ಷಕಿ ಶ್ರೀದೇವಿ ಕಾಪ್ಸೆ ಪ್ರಾರ್ಥಿಸಿದರು. ವೃಷಭೇಂದ್ರ ಹಿರೇಮಠ ಸ್ವಾಗತಿಸಿದರು. ಶಿವಕುಮಾರ ಶಾಸ್ತ್ರಿ ನಿರೂಪಣೆ ಮಾಡಿದರು. ಸತೀಶ್ಚಂದ್ರ ಸುಲೆಪೇಟ ವಂದಿಸಿದರು. ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಬದಲಾವಣೆ ಹಾಗೂ ಸ್ಥಳಿಯ ಸಮಸ್ಯೆ ಕುರಿತು ಚಿಂತನ-ಮಂಥನ ನಡೆಯಿತು. ಕವಿಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ರಂಜಿಸಿದವು.

ಭವ್ಯ ಮೆರವಣಿಗೆ

ದ್ವೀತಿಯ ತಾಲೂಕು ಕನ್ನಡ ಸಮ್ಮೇಳನ ನಿಮಿತ್ತ ಸರ್ವಾಧ್ಯಕ್ಷ ಗಣಪತರಾವ ಸಿಂಗಶೆಟ್ಟಿ ಹಾಗೂ ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಡಾ.ಅಂಬೇಡ್ಕರ್​ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​ ಮೆರವಣಿಗೆಗೆ ಚಾಲನೆ ನೀಡಿದರು. ಅಲಂಕೃತ ಸಾರೋಟಿನಲ್ಲಿ ಆಸೀನರಾಗಿದ್ದ ಸರ್ವಾಧ್ಯಕ್ಷರನ್ನು ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ವೇದಿಕೆಗೆ ಕರೆ ತರಲಾಯಿತು.