ನಾಟಕ ಕಲೆ ಯುವ ಪೀಳಿಗೆಗೂ ವಿಸ್ತರಿಸಲಿ

ಸೇಡಂನಲ್ಲಿ ಹಮ್ಮಿಕೊಂಡಿದ್ದ ನೃಪತುಂಗ ಹವ್ಯಾಸಿ ನಾಟ್ಯ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಉದ್ಘಾಟಿಸಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪ್ರಕಾಶ ತಾತಾ, ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​, ಕವಿತಾ ಮಿಶ್ರಾ ಇತರರಿದ್ದರು.
ಸೇಡಂನಲ್ಲಿ ಹಮ್ಮಿಕೊಂಡಿದ್ದ ನೃಪತುಂಗ ಹವ್ಯಾಸಿ ನಾಟ್ಯ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಉದ್ಘಾಟಿಸಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪ್ರಕಾಶ ತಾತಾ, ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​, ಕವಿತಾ ಮಿಶ್ರಾ ಇತರರಿದ್ದರು.
Published on: 

ಸೇಡಂ: ಇಂದು ನಾಟಕ ಕಲೆ ಕೇವಲ ಹಿರಿಯ ತಲೆಮಾರುಗಳಿಗೆ ಸೀಮಿತ ಎನ್ನುವಂತಾಗಿದ್ದು, ಅದನ್ನು ಯುವ ಪೀಳಿಗೆಗೂ ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ಅಗತ್ಯವಾಗಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಅಭಿಪ್ರಾಯಪಟ್ಟರು.

ಸುವರ್ಣ ಕರ್ನಾಟಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘದ 5ನೇ ವಾರ್ಷಿಕೋತ್ಸವ ಮತ್ತು ಯೋಧರು, ರೈತರಿಗೆ ಗೌರವ ಸನ್ಮಾನ, ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ದ್ವೇಶ ಅಳಿಸಬೇಕು, ದೇಶ ಉಳಿಸಬೇಕು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಕಾಲ ಕ್ರಮೇಣ ಪಾರಂಪರಿಕ ಕಲೆ ನಶಿಸಿ ಹೋಗುತಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ಹಿರಿಯ ಕಲಾವಿದರ ಮೇಲಿದೆ. ಆ ನಿಟ್ಟಿನಲ್ಲಿ ಅಗತ್ಯ ಪೋತ್ಸಾಹ ನಮ್ಮಿಂದ ಯಾವತ್ತಿಗೂ ಸಿಗಲಿದೆ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯೆಕ್ಷ ಸಂತೋಷಿರಾಣಿ ಪಾಟೀಲ್​ ತೆಲ್ಕೂರ ಮಾತನಾಡಿ, ರಂಗ ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕೆಲಸ ನೃಪತುಂಗ ನಾಟ್ಯ ಸಂಘ ಮಾಡುತ್ತಿದೆ. ದಿನ ಕಳೆದಂತೆ ಸಮಾಜದಲ್ಲಿ ದ್ವೇಷ, ಅಸೂಯೆ ಭಾವನೆಗಳು ಹೆಚ್ಚಳಗೊಳುತ್ತಿವೆ. ಇದನ್ನು ಹೊಡೆದೊಡಿಸಿ ದೇಶ ಉಳಿಸುವ ಕೆಲಸ ಸರ್ವರಿಂದ ಆಗಬೇಕಾಗಿದೆ ಎಂದು ತಿಳಿಸಿದರು.

ಸಾಧಕ ಪ್ರಗತಿಪರ ರೈತ ಮಹಿಳೆ ಕವಿತಾ ಮ್ರಿಶಾ ಮಾತನಾಡಿ, ನಾವು ಮಾಡುವ ಕೆಲಸಗಳಲ್ಲಿ ತಾರತಮ್ಯ ಇರುವದಿಲ್ಲ. ಭೂಮಿ ತಾಯಿ ನಂಬಿದವರನ್ನು ಯಾವತ್ತಿಗೂ ಕೈ ಬಿಡುವುದಿಲ್ಲ. ಕೃಷಿಕನ ಕೈ ಕೆಸರಿನಲ್ಲಿ ಇರಬಹುದು, ಮನಸ್ಸು ಮಲ್ಲಿಗೆಯಂತೆ ಇರುತ್ತದೆ. ಹೆಣ್ಣಾಗಿ ಹುಟ್ಟುವದು ದೊಡ್ಡ ಸಾಧನೆ ಆದರೆ ಒಳ್ಳೆಯ ಮಗಳು, ಹೆಂಡತಿ, ಸೊಸೆಯಾಗಿ ಬಾಳುವುದೇ ಹೆಣ್ಣಿನ ಬದುಕಿನ ಸಾರ್ಥಕತೆಯಾಗಿದೆ ಎಂದರು.

ನಂತರ ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರ ಸಂಕಲ್ಪದ ಸಾಹಿತ್ಯ ದ್ವೇಷ ಅಳಿಯಬೇಕು, ದೇಶ ಉಳಿಸಬೇಕು ನಾಟಕ ಪ್ರದರ್ಶನಗೊಂಡಿತು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪಕಾಶ ತಾತಾ, ಶ್ರೀ ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ, ನಾಟಕ ಬರಹಗಾರರ ಸಂದ ಕಾರ್ಯಾಧ್ಯಕ್ಷ ಗುರಪ್ಪ ಪಾಟೀಲ್​ ನಂದೂರ, ಬಂಧು ಪ್ರಿಂಟರ್ಸ್​ನ ರಮೇಶ ತಿಪ್ಪೇನೂರ ಅಧ್ಯಕ್ಷತೆವಹಿಸಿದ್ದರು.

ಪ್ರಮುಖರಾದ ಶಿವಲಿಂಗರೆಡ್ಡಿ ಪಾಟೀಲ್​ ಬೆನಕನಹಳ್ಳಿ, ಸಂದೇಶ ಶ್ಯಾಂಡಿ, ಶಾಮರಾವ ಕೊರವಿ, ನರಸಮ್ಮ ಅವಂಟಿ, ರಾಜಶೇಖರ ನೀಲಂಗಿ, ವಿಜಯಕುಮಾರ ಆಡಕಿ, ವೈಜನಾಥ ಝಳಕಿ, ಚಂದ್ರಶೇಖರ ಲಗಶೆಟ್ಟಿ, ಓಂಪ್ರಕಾಶ ಪಾಟೀಲ್​, ಸಿದ್ದು ಬಾನರ್​, ಶಿವಾನಂದ ಸ್ವಾಮಿ, ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ನಾಗಪ್ಪ ಕೊಳ್ಳಿ, ಸೂರ್ಯಕಾಂತ ಮಾಸ್ತರ್​ ಹಂಗನಹಳ್ಳಿ, ಬನ್ನಪ್ಪ ಕುಂಬಾರ, ಜ್ಯೋತಿ ಮಾರ್ಲಾ, ಸುನೀತಾ ತಳವಾರ ಇತರರಿದ್ದರು.

ಯೋಧರು, ರೈತರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಸಂಗಣ್ಣ ಅಲ್ದಿ ಸ್ವಾಗತಿಸಿದರು. ವೀರೇಶ ಹೂಗಾರ ನಿರೂಪಣೆ ಮಾಡಿದರು. ಶಿವಯ್ಯಸ್ವಾಮಿ ಬಿಬ್ಬಳ್ಳಿ ಪ್ರಾಸ್ತವಿಕ ಮಾತನಾಡಿದರು.

ರಂಗ ನೃಪತುಂಗ ಪ್ರಶಸ್ತಿ ಪ್ರದಾನ

ವಿವಿಧ ಕ್ಷೆತ್ರದ ಸಾಧಕರಾದ ಪ್ರಭಾಕರ ಜೋಶಿ, ರಮೇಶ ಬಡಿಗೇರ, ಮೋಹನ್​ ಬಳ್ಳಾರಿ, ಮಂಜುನಾಥ ಹಿರೇಮಠ, ರಾಜಮಹ್ಮದ್​ ಮುಲ್ಲಾ, ಎಚ್​.ವೈ.ವಡ್ಡರ್​, ಆಯಿಲ್​ರೆಡ್ಡಿ ಪಾಟೀಲ್​, ವಿಶ್ವನಾಥ ಪಾಟೀಲ್​, ಶರಣು ಮಹಾಗಾಂವ್​, ಶೇಖರ ನಾಟೀಕಾರ, ರೇವಣಸಿದ್ದಪ್ಪ ಚೊಂಚ್​, ವೆಂಕಟೇಶ ಕುಲಕರ್ಣಿ, ಮೋಹನರೆಡ್ಡಿ, ಭೀಮರಾವ ಮಾಲಿಪಾಟೀಲ್​, ಈಶಪ್ಪ ಜಮಾದಾರ, ಅಮಶೆಟ್ಟಿ ಪಾಟೀಲ್​, ಮಲ್ಲಿಕಾರ್ಜುನ ಹದಗಲಕರ್​, ಭೀಮರಾಯ ಈರಣ್ಣ, ಶಿವಪುತ್ರಪ್ಪ ಸಲಗಾರ, ವಾಸುದೇವ ಸಸಲಾಟ, ಮಹೇಶ ಪೈಲ್ವಾನ, ಸೋಮಶೇಖರ ನೀಲಿ, ಹನುಮಂತರಾವ ಬಿರಾದಾರ, ಲಲಿತಾ ಕೊಕಟ್​, ಮಲ್ಲು ಮಾಸ್ತರ ಭಜಂತ್ರಿ ಅವರಿಗೆ ರಂಗ ನೃಪತುಂಗ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.