ಚುನಾವಣೆಗಾಗಿ ಮೋದಿ ಬುಡಬುಡಕಿ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

Kharge in yadrami program
Kharge in yadrami program
Published on

ಪ್ರಮುಖ ಮುಖ್ಯಾಂಶಗಳು

  • ಮೋದಿ ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದ ಖರ್ಗೆ
  • ಮತಕ್ಕಾಗಿ ರಾಮಮಂದಿರ, ಇದೀಗ ಸೋಮನಾಥ ಮಂದಿರದ ಆಟ ಶುರು ಮಾಡಿದ್ದಾರೆ ಎಂದು ಆರೋಪ
ಕಲಬುರಗಿ: ಮೋದಿ ಅವರು ಬಡವರಿಗಾಗಿ ಯಾವುದೇ ಕಾರ್ಖಾನೆ ತಂದಿಲ್ಲ. ಒಂದು ಕಡೆ ಗಂಟಿ, ಬುಡುಬುಡಿಕೆ ಆಡಿಸುತ್ತಾರೆ ಮೋದಿ. ಇದಕ್ಕೆ ದೇವರು ಪ್ರಸನ್ನ ಆಗಲ್ಲ. ಕೆಲಸದಿಂದ ಪ್ರಸನ್ನ ಆಗುತ್ತಾನೆ ಭಗವಂತ. ಎಲ್ಲಿವರೆಗೆ ಒಟ್ಟಾಗಿ ಬುದ್ಧಿ ಕಲಿಸದಿದ್ದರೆ ಇದು ನಿಲ್ಲುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು, ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನ ಹೋದರೆ ನಿಮಗೆ ಮೋದಿ ಮಾತಾಡಲು ಬಿಡುವುದಿಲ್ಲ. ದೇವರ, ಧರ್ಮದ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಮಾನವ ಕಲ್ಯಾಣಕ್ಕೆ ದೇವರಿದ್ದು, ಮತಕ್ಕಾಗಿ ರಾಮಮಂದಿರ, ಇದೀಗ ಸೋಮನಾಥ ಮಂದಿರದ ಆಟ ಶುರು ಮಾಡಿದ್ದಾರೆ. ಹಿಂದೆ ಸೋಮನಾಥ ಮಂದಿರ ಏಕೆ ನೆನಪು ಬರಲಿಲ್ಲ.? ಮುಂಬರುವ ಆಸ್ಸಾಂ, ತಮಿಳುನಾಡು, ಪಾಂಡಿಚೇರಿ ಚುನಾವಣೆಗೆ ಇಂತಹ ಕೆಲಸ ಶುರು ಮಾಡಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಗುಜರಾತ್ ಮಾದರಿ ನಡೆಯಲ್ಲ. ಎಲ್ಲರಿಗೂ ಸಮನಾಗಿ ತೆಗೆದುಕೊಂಡು ಹೋಗುವ ಬಸವಣ್ಣನ ಊರು ಇದು. ಎಲ್ಲ ಕಡೆ ಹಿಂದೂ ಮುಸ್ಲಿಂ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net