ಮಹಿಳೆಯರ ಸಾಧನೆ ಶ್ಲಾಘನೀಯ

ಕಲಬುರಗಿ ದರಿಯಾಪುರ ಬಡಾವಣೆಯಲ್ಲಿರುವ ಚಂದ್ರಶೇಖರ್ ಪಾಟೀಲ್ ರೇವೂರ್ ಸ್ಮಾರಕ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಮಹಿಳಾ ಸಬಲೀಕರಣ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಡಾ.ಸುಧಾ ಹಾಲಕಾಯಿ, ಲಕ್ಷಿö್ಮà ದತ್ತಾತ್ರೇಯ ಪಾಟೀಲ್ ರೇವೂರ್ ಚಾಲನೆ ನೀಡಿದರು. ಉಪ ಮೇಯರ್ ತೃಪ್ತಿ ಎಸ್.ಲಾಖೆ, ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಡಾ.ಸ್ನೇಹಾ ಕೆ., ಕವಿತಾ ಚೌಹಾಣ್, ಡಾ.ಶ್ವೇತಾ ನಿಧಿ, ಅಮೂಲ್ಯ ಶೆಟ್ಟಿ, ಸ್ನೇಹಲ್ ಪಾಟೀಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ
ಕಲಬುರಗಿ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ವಕ್ತಾರೆ ಡಾ.ಸುಧಾ ಹಾಲಕಾಯಿ ಹೇಳಿದರು.
ನಗರದ ದರಿಯಾಪುರ ಬಡಾವಣೆಯಲ್ಲಿರುವ ಚಂದ್ರಶೇಖರ್ ಪಾಟೀಲ್ ರೇವೂರ್ ಸ್ಮಾರಕ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಮಹಿಳಾ ಸಬಲೀಕರಣ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಶಕ್ತಿ, ಪ್ರತಿಭೆ ಮತ್ತು ಸೇವೆ ಗುರುತಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹ. ಪುರುಷರಿಗಿಂತ ಮಹಿಳೆ ಯಾವ ಹಂತದಲ್ಲೂ ಕಡಿಮೆ ಇಲ್ಲ. ಕಲೆ, ಸಾಹಿತ್ಯ, ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ, ಕೌಶಲ ಪ್ರತಿಯೊಂದು ಕ್ಷೇತ್ರದಲ್ಲೂ ದಾಪುಗಲು ಇರಿಸಿದ್ದಾರೆ. ಜ್ಞಾನಾರ್ಜನೆ ಜತೆಗೆ ಸಾಧನೆ ಮಾಡಬೇಕು ಎಂದು ಹೇಳಿದರು.
ಸಮಾರಂಭದ ಉದ್ಘಾಟನೆಗೆ ಸಮಾಜ ಸೇವಕಿ ಲಕ್ಷಿö್ಮÃ ದತ್ತಾತ್ರೇಯ ಪಾಟೀಲ್ ರೇವೂರ್ ಕೈಜೋಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಸಂಪೂರ್ಣೇಶ್ವರಿ ಸ್ಫೂರ್ತಿದಾಯಕ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಸೇವೆ ಸೇರಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಾನಗರ ಪಾಲಿಕೆಯ ಉಪ ಮೇಯರ್ ತೃಪ್ತಿ ಎಸ್.ಲಾಖೆ, ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಡಾ.ಸ್ನೇಹಾ ಕೆ., ಕವಿತಾ ಚೌಹಾಣ್, ಡಾ.ಶ್ವೇತಾ ನಿಧಿ, ಅಮೂಲ್ಯ ಶೆಟ್ಟಿ, ಸ್ನೇಹಲ್ ಪಾಟೀಲ್ ಸೇರಿ ಅನೇಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net