ರಾಷ್ಟ್ರೀಯ ಹೆದ್ದಾರಿಯಲ್ಲೇ ಅಕ್ರಮ ಚೆಕ್​ಪೋಸ್ಟ್​: ಹಗಲು ದರೋಡೆಗೆ ಬೆಚ್ಚಿದ ಲೋಕಾಯುಕ್ತ

ಹುಮನಾಬಾದ್​ನಲ್ಲಿ ನಿರ್ಮಿಸಿರುವ ಅಕ್ರಮ ಚೆಕ್​ಪೋಸ್ಟ್​
ಹುಮನಾಬಾದ್​ನಲ್ಲಿ ನಿರ್ಮಿಸಿರುವ ಅಕ್ರಮ ಚೆಕ್​ಪೋಸ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಲೋಕಾ ಪರಿಶೀಲನೆ ವೇಳೆ ಬಹಿರಂಗ
  • ಹಗಲು ದರೋಡೆ ಎಂದ ಲೋಕಾಯುಕ್ತರು
ಕಲಬುರಗಿ: ಬೀದರ್​ ಜಿಲ್ಲೆ ಹುಮನಾಬಾದ್​ನ ರಾಷ್ಟ್ರೀಯ ಹೆದ್ದಾರಿ ಮೇಲೆ ಅನಧಿಕೃತವಾಗಿ ಚೆಕ್​ ಪೋಸ್ಟ್​ ನಿರ್ಮಿಸಿ, ಗಂಟೆಗೆ 8ರಿಂದ 10 ಸಾವಿರ ರೂ. ಸಂಗ್ರಹಿಸುವ ಹಗಲು ದರೋಡೆ ದಂಧೆಯೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಬಹಿರಂಗವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ ಸೂಚಿಸಿದರು.
4 ಜಿಲ್ಲೆಗಳಲ್ಲಿ ಲೋಕಾಯುಕ್ತ ತಂಡ ನಿರಂತರ ಪರಿಶೀಲನೆ ನಡೆಸುತ್ತಿದ್ದು, ಸೋಮವಾರದ ತಪಾಸಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಮೇಲೆ ಸರ್ಕಾರಿ ಅಲ್ಲದ, ವಾಹನವನ್ನು ನಿಲ್ಲಿಸಿ, ಅನಧಿಕೃತವಾಗಿ ಹಣ ಸಂಗ್ರಹಿಸುವುದು ಪತ್ತೆಯಾಗಿದೆ. ದೂರದಲ್ಲಿ ಆರ್​ಟಿಒ, ಎಆರ್​ಟಿಒ ಬರೆದಿರುವ ವಾಹನ ನಿಲ್ಲಿಸಿ, ಎಜೆಂಟ್​ ಮೂಲಕ ಬಾಕ್ಸ್​ನಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಎರಡ್ಮೂರು ಗಂಟೆಗೊಮ್ಮೆ ಸರತಿಯಲ್ಲಿ ಬಾಕ್ಸ್​ ಬದಲಾಯಿಸಿ, ಸರತಿಯಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಯಾದರು.
ಅಧಿಕೃತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ರಾಬರಿ ನಡೆಸುತ್ತಿದ್ದು, ಪ್ರಕರಣ ದಾಖಲಿಸಲಾಗಿದೆ. ಗಮನಕ್ಕೆ ಬಂದ ತಕ್ಷಣ ಚೆಕ್​ ಪೋಸ್ಟ್​ ತೆರವು ಮಾಡಿದ್ದಾರೆ. ಆರ್​ಟಿಒಗೆ ಕೇಳಿದರೆ ನಮ್ಮ ವ್ಯಾಪ್ತಿಗೆ ಬರಲ್ಲ ಎನ್ನುತ್ತಾರೆ. ಜಂಟಿ ಕಮೀಷನರ್​ ಕರೆಸಿ, ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದರು. ಅದೇ ರೀತಿ ಆಳಂದ ಬಳಿಯ ಚೆಕ್​ ಪೋಸ್ಟ್​ನಲ್ಲಿ ಅಕ್ರಮ ನಡೆಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ದಿಢೀರ್​ ಭೇಟಿ ನೀಡಿದ ಲೋಕಾಯುಕ್ತ, ಅಧಿಕಾರಿಗಳು ಪರಿಶೀಲನೆ ನಡೆಸಿ, ಈ ವೇಳೆ 55 ಸೈನಿಕರಿಗೆ ಭೂಮಿ ಮಂಜೂರು ವಿಳಂಬ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಮಂಜೂರಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net