

ಅಫಜಲಪುರ: ಕುಲಾಲಿ ಗ್ರಾಮದಲ್ಲಿ ಶ್ರೀ ಗುರು ಚನ್ನಮಲ್ಲೆಶ್ವರರ ಜಾತ್ರೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಧರ್ಮ ಸಭೆಯಲ್ಲಿ ಶ್ರೀ ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳು ಆಶೀರ್ವಚನ ನೀಡಿ, ಭಗವಂತ ಕರುಣಿಸಿದ ಮಾನವ ಜನ್ಮವನ್ನು ಪರೋಪಕಾರಿ ಕಾರ್ಯಗಳ ಮೂಲಕ ಸಾರ್ಥಕಗೊಳಿಸಬೇಕು. ಆಧುನಿಕ ಯುಗದಲ್ಲಿ ಮಕ್ಕಳಿಗೆ ಶಿಣದ ಜತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದ್ದು, ಪಾಲಕರು ಹೆಚ್ಚಿನ ನಿಗಾವಹಿಸಬೇಕು. ಕುಲಾಲಿ ಗ್ರಾಮ ಚಿಕ್ಕದಾಗಿದ್ದರೂ, ಭಕ್ತಿಯಲ್ಲಿ ಶ್ರೇಷ್ಠವಾಗಿದೆ ಎಂದು ಬಣ್ಣಿಸಿದರು.
ಶ್ರೀ ಅಭಿನವ ಗುರುಬಸವ ಶಿವಾಚಾರ್ಯ, ಶ್ರೀ ಉಪಮನ್ಯು ಶಿವಾಚಾರ್ಯ, ಶರಣಯ್ಯ ಸ್ವಾಮಿ, ನಾಗು ಮುತ್ಯಾ, ಪ್ರಮುಖರಾದ ಶಿವಕುಮಾರ ಪಾಟೀಲ್, ಗುಂಡೇರಾವ ಪಾಟೀಲ್, ಪರಮೇಶ್ವರ ಶಿರೂರ, ಬಸವರಾಜ ಪಾಟೀಲ್, ಸಾತಲಿಂಗಪ್ಪ ಉಡಗಿ, ಬಲವಂತರಾವ ಪೊಲೀಸ್ ಪಾಟೀಲ್, ಎಸ್.ಎಸ್.ಪಾಟೀಲ್, ಬಸಣ್ಣ ಕುಮಸಗಿ, ಮಲ್ಲಿನಾಥ ಅತನೂರೆ, ಶ್ರೀಕಾಂತ ನಿಂಬಾಳ, ರಾಜಶೇಕರ ಜಮಾಣೆ, ಪ್ರಭಾಕರ ಅಡಕೆ, ಸುಭಾಷ ಪಾಟೀಲ್, ಬಸವರಾಜ ನಿಂಬಾಳ, ಸೈಫನಸಾಬ್ ಮುಜಾವರ, ಗೊಲ್ಲಾಳಪ್ಪ ಕುಕನೂರ, ಬಸುಗೌಡ ಪಾಟೀಲ್, ಅಪ್ಪಾರಾವ ಪಾಟೀಲ್, ಮಲ್ಲಯ್ಯ ಸ್ಥಾವರಮಠ, ಭೀಮರಾವ ನಿಂಬಾಳ, ದತ್ತು ಉಡಗಿ ಇತರರಿದ್ದರು.
ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಕುಂಕಮಾರ್ಚನೆ ಜರುಗಿತು. ನಂತರ ಶ್ರೀ ಡಾ.ಅಭಿನವ ಚನ್ನಮಲ್ಲೆಶ್ವರ ಶಿವಯೋಗಿಗಳ ಅಡ್ಡಪಲ್ಲಕ್ಕಿಯು ಶ್ರೀಮಠದಿಂದ ಪ್ರಾರಂಭವಾಗಿ ಸರ್ಕಾರಿ ಶಾಲೆ, ಹನುಮಾನ ಮಂದಿರ, ಲ್ಮ ದೇವಸ್ಥಾನದ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 4ಕ್ಕೆ ಶ್ರೀಮಠಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಮುತೆದೆಯರ ಆರತಿ, ಕುಂಭ ಕಳಸ ಹೊತ್ತು ಹೆಜ್ಜೆಹಾಕಿದರು. ಪುರವಂತರ ಕುಣಿತ, ಡೊಳ್ಳು ಕುಣಿತ, ಚಿಟ್ಟ ಹಲಗೆ, ಡೋಲಕ್, ಭಜನೆ ಮೇಳಗಳು ಮೆರಗು ನೀಡಿದವು.