ಶಿಕ್ಷಣ, ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಲಿ

ಕಮಲಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾಧಕ ಶಿಕ್ಷಕರು, ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ರವಿ ಕಮಲಾಪುರಕರ್​, ಮಹಮ್ಮದ್​ ಮೋಹಸಿನ್​, ರಮೇಶ ಪಾಟೀಲ್​, ಸುರೇಶ ರಾಠೋಡ್​ ಇತರರಿದ್ದರು.
ಕಮಲಾಪುರ ತಹಸಿಲ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾಧಕ ಶಿಕ್ಷಕರು, ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ರವಿ ಕಮಲಾಪುರಕರ್​, ಮಹಮ್ಮದ್​ ಮೋಹಸಿನ್​, ರಮೇಶ ಪಾಟೀಲ್​, ಸುರೇಶ ರಾಠೋಡ್​ ಇತರರಿದ್ದರು.
Published on: 

ಕಮಲಾಪುರ: ಕರ್ನಾಟಕ ರಾಜ್ಯ ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದ್ದು, ಇಂಗ್ಲಿಷ್​ ಭಾಷೆ ಪ್ರಭಾವದಿಂದಾಗಿ ಕನ್ನಡಕ್ಕೆ ಕುತ್ತು ಬಂದಿದೆ. ಹೀಗಾಗಿ ಶಿಕ್ಷಣ, ಆಡಳಿತ ಮತ್ತು ಉದ್ಯೋಗದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು ಎಂದು ಬೆಂಗಳೂರಿನ ಡಿಐಜಿ ಕಚೇರಿ ಉಪ ನಿರ್ದೇಶಕ ರವಿ ಕಮಲಾಪುರಕರ್​ ಸಲಹೆ ನೀಡಿದರು.

ತಹಸಿಲ್​ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಕೃತಿ ಕವಿರಾಜಮಾರ್ಗ ನೀಡಿದ ಹೆಮ್ಮೆ ಕಲ್ಯಾಣ ಕರ್ನಾಟಕಕ್ಕೆ ಸಲ್ಲುತ್ತದೆ. ಅಲ್ಲದೆ ಸಾಮಾಜಿಕ ನ್ಯಾಯ ನೆಲೆಗಟ್ಟಿನ ಮೇಲೆ ರಚಿತವಾದ ವಚನ ಸಾಹಿತ್ಯವೂ ಇದೆ ನೆಲದಿಂದ ಹೊರಬಂದಿದೆ. ಎಲ್ಲರೂ ನಾಡು&ನುಡಿ ಬಗ್ಗೆ ಗೌರವ ಹೊಂದಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ಮಾತನಾಡಿ, ಎಲ್ಲರೂ ಸೇರಿ ಅದ್ದೂರಿಯಾಗಿ ಕನ್ನಡದ ಜಾತ್ರೆ ನಡೆಸಬೇಕು. ಸಂಭ್ರಮದ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಆಹ್ವಾನ ನೀಡಲಾಗಿದ್ದು, ಆದರೂ ಶಿಕ್ಷಕರು, ವಿವಿಧ ಅಧಿಕಾರಿಗಳು, ವಿದ್ಯಾರ್ಥಿಗಳು ಗೈರಾಗಿರುವುದು ಬೇಸರ ತರಿಸಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು.

ತಾಪಂ ಇಒ ರಮೇಶ ಪಾಟೀಲ್​, ಪ್ರಮುಖರಾದ ಸುರೇಶ ರಾಠೋಡ್​, ಸುನಿಲಕುಮಾರ ಕೊಳಗೇರಿ, ವೆಂಕಟೇಶ ದುಗ್ಗನ್​, ಸಂತೋಷಕುಮಾರ, ಸುನಿಲಕುಮಾರ, ಶರಣಬಸಪ್ಪ ಜಾಲಹಳ್ಳಿ, ಉಮೇಶ ಬದ್ರಿ, ಶರಣಬಸಪ್ಪ, ಅಮರ ಚಿಕ್ಕೆಗೌಡ, ವಿದ್ಯಾಧರ ಮಾಳಗೆ, ರಮೇಶ ಬೆಳಕೋಟಾ, ಅಶೋಕಕುಮಾರ ಗೌರೆ, ರವೀಂದ್ರ ಬಿಕೆ, ದೇವೇಂದ್ರಪ್ಪ, ಸಿದ್ದಲಿಂಗ, ಬಸವರಾಜ ಕಟ್ಟೋಳಿ, ಜಯಪ್ರಕಾಶ, ಪದ್ಮಾವತಿ ಪಾಟೀಲ್​, ಪ್ರಭಾವತಿ, ಅಶ್ವಿನಿ, ಗೀತಾ ಇತರರಿದ್ದರು. ರಮೇಶ ಪಾಟೀಲ್​ ಪ್ರಾಸ್ತಾವಿಕ ಮಾತನಾಡಿದರು. ಅಂದಪ್ಪ ಸ್ವಾಗತಿಸಿದರು. ಜಗದೀಶ ನಿರೂಪಣೆ ಮಾಡಿದರು. ಅಂಬಿಕಾ ಉಪ್ಪಿನ್​ ವಂದಿಸಿದರು. ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಶ್ರೀದೇವಿ ಒಡೆಯರ್​ ಸೇರಿ ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸತ್ಕರಿಸಲಾಯಿತು.