ಸಾಮಾಜಿಕ ಪರಿಹಾರಕ್ಕೆ ನಾವಿನ್ಯತೆ ದಾರಿ ಮಾಡಿಕೊಡಲಿ

ಕಲಬುರಗಿ ಸಿಯುಕೆನಲ್ಲಿ ಗುರುವಾರ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಟಿ.ವಿ.ವಿಜಯಕುಮಾರ್​, ಪ್ರೊ.ಆರ್​.ಎಸ್​.ಹೆಗಡಿ, ಪ್ರೊ.ಅಮರೇಂದ್ರ ಮತ್ಸಾ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಗುರುವಾರ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಟಿ.ವಿ.ವಿಜಯಕುಮಾರ್​, ಪ್ರೊ.ಆರ್​.ಎಸ್​.ಹೆಗಡಿ, ಪ್ರೊ.ಅಮರೇಂದ್ರ ಮತ್ಸಾ ಇತರರಿದ್ದರು.
Published on: 

ಕಲಬುರಗಿ: ನಾವಿನ್ಯತೆ ಮಹತ್ವ ಒತ್ತಿ ಹೇಳಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ಆಲೋಚನೆಗಳನ್ನು ಅರ್ಥಪೂರ್ಣ ಮತ್ತು ಸಾಮಾಜಿಕವಾಗಿ ಪ್ರಸ್ತುತ ಪರಿಹಾರಗಳಾಗಿ ರೂಪಿಸುವಂತೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಸಿಯುಕೆ ಕಂಪ್ಯೂಟರ್​ ವಿಜ್ಞಾನಗಳ ನಿಕಾಯ ಹಾಗೂ ಸಂಸ್ಥೆಯ ನಾವಿನ್ಯತಾ ಮಂಡಳಿಯಿಂದ ಕೃತಕ ಬುದ್ಧಿಮತ್ತೆ , ಡೇಟಾ ವಿಜ್ಞಾನ, ನಾವಿನ್ಯತೆ ಹಾಗೂ ಮಾನವ ಎಐ ಸಂಬಂಧ ಕುರಿತು ಏರ್ಪಡಿಸಿದ್ದ ಎರಡು ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಸೇವಾ ಪೋರ್ಟಲ್​ ನಾವಿನ್ಯತೆ ಮತ್ತು ಸಹಭಾಗಿತ್ವ ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ ಎಂದರು.

ನವದೆಹಲಿ ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದ ಕಂಪ್ಯೂಟರ್​ ಮತ್ತು ಸಿಸ್ಟಮ್ಸ್​ ಸೈನ್ಸಸ್​ ನಿಕಾಯದ ಪ್ರೊ.ಟಿ.ವಿ. ವಿಜಯ ಕುಮಾರ್​ ದತ್ತಾಂಶದಿಂದ ಜ್ಞಾನದವರೆಗೆ: ಎಐ ಮತ್ತು ಡೇಟಾ ವಿಜ್ಞಾನದ ಶಕ್ತಿ ಹಾಗೂ ಪ್ರಕೃತಿಯಿಂದ ಪ್ರೇರಿತ ಕಂಪ್ಯೂಟಿಂಗ್​ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಿಯುಕೆ ಕಂಪ್ಯೂಟರ್​ ವಿಜ್ಞಾನಗಳ ನಿಕಾಯ ಡೀನ್​ ಪ್ರೊ.ಆರ್​.ಎಸ್​. ಹೆಗಡಿ, ಐಕ್ಯೂಎಸಿ ನಿರ್ದೇಶಕ ಪ್ರೊ.ಅಮರೇಂದ್ರ ಮತ್ಸಾ, ಭೌತ ವಿಜ್ಞಾನಗಳ ನಿಕಾಯದ ಡೀನ್​ ಪ್ರೊ.ರಾಜೀವ್​ ಶೇಷ ಜೋಶಿ, ಸಾಮಾಜಿಕ ಮತ್ತು ವರ್ತನಾ ವಿಜ್ಞಾನಗಳ ನಿಕಾಯದ ಡೀನ್​ ಪ್ರೊ.ಪವಿತ್ರಾ ಆಲೂರು ಹಾಗೂ ಸಿಯುಕೆ ನಾವಿನ್ಯತಾ ಮಂಡಳಿ ನೋಡಲ್​ ಅಧಿಕಾರಿ ಡಾ.ರೋಹಿತ್​ ಕುಮಾರ್​ ಇತರರಿದ್ದರು. ಪ್ಯಾನಲ್​ ಸದಸ್ಯರು ಮಾನವ ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಎಐ ನಡುವಿನ ಸಂಬಂಧದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net