ಜೀವವೈವಿಧ್ಯದ ತಾಣ ಕುಂಚಾವರಂ

ವನ್ಯಜಿವಿ ಸಪ್ತಾಹ ನಿಮಿತ್ತ ಕುಂಚಾವರಂ ಅರಣ್ಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮದಾನ ಮಾಡಿದರು. ಸುನೀಲಕುಮಾರ ಚವ್ಹಾಣ್​, ಸಂಜೀವಕುಮಾರ, ಜಗನ್ನಾಥ ಕೊರಳ್ಳಿ, ಪ್ರಭು ಜಾಧವ್​ ಇತರರಿದ್ದರು.
ವನ್ಯಜಿವಿ ಸಪ್ತಾಹ ನಿಮಿತ್ತ ಕುಂಚಾವರಂ ಅರಣ್ಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮದಾನ ಮಾಡಿದರು. ಸುನೀಲಕುಮಾರ ಚವ್ಹಾಣ್​, ಸಂಜೀವಕುಮಾರ, ಜಗನ್ನಾಥ ಕೊರಳ್ಳಿ, ಪ್ರಭು ಜಾಧವ್​ ಇತರರಿದ್ದರು.
Published on: 

ಚಿಂಚೋಳಿ: ಅರಣ್ಯ ಮತ್ತು ವನ್ಯಜಿವಿಗಳು ಪರಿಸರ ವ್ಯವಸ್ಥೆಯ ಜೀವನಾಡಿಯಾಗಿದ್ದು, ಇವುಗಳ ರಕ್ಷಣೆ ಅರಣ್ಯ ಇಲಾಖೆ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ್​ ಹೇಳಿದರು.

ಕುಂಚಾವರಂ ಅರಣ್ಯದಲ್ಲಿ ವನ್ಯಜಿವಿ ಸಪ್ತಾಹ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ವಿಶೇಷ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಂಚಾವರಂ ಅರಣ್ಯ ಜೀವವೈವಿಧ್ಯದಿಂದ ಕೂಡಿದೆ. ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಕಾಡ್ಗಿಚ್ಚು ತಡೆಯಲು ಪ್ಲಾಸ್ಟಿಕ್​ ಬಳಕೆ ಸಂಪೂರ್ಣ ನಿಷೇಧಿಸುವುದು ಹಾಗೂ ಶಿಕಾರಿ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸಿದರು.

ವಲಯ ಅರಣ್ಯಾಧಿಕಾರಿ ಸಂಜೀವಕುಮಾರ, ಪ್ರಾದೇಶಿಕ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ, ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಭು ಜಾಧವ್​, ಸಿದ್ದಾರೂಢ, ಸಂತೋಷ ಟೆಂಗಳಿ, ವೀರಭದ್ರ, ಮದರಸಾಬ್​, ಕುಂಚಾವರಂ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಕೊರಡಂಪಳ್ಳಿ, ಗಸ್ತು ಅರಣ್ಯ ಪಾಲಕರಾದ ವೀರನಗೌಡ, ಹಾಲೇಶ್​ ಕೋರವಾರ, ಗುಂಡಪ್ಪ, ಹನುಮಂತ ಕೊಚ್ಚಿ, ಮಾಳಪ್ಪ, ಸಂಗನಬಸವ ಡಿಗ್ಗಿ, ಅನೀಶ ಸಿಂಗೆ, ದೇವರಾಜ ಕಟ್ಟಿ, ಚೆನ್ನಬಸವರಾಜ, ದೇವಪ್ಪ ಇದ್ದರು. ನಂತರ ಶ್ರಮದಾನದ ಮೂಲಕ ಅರಣ್ಯ ಪರಿಸರದಲ್ಲಿನ ಪ್ಲಾಸ್ಟಿಕ್​ ಇತರ ತ್ಯಾಜ್ಯಗಳನ್ನು ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net