

ನಾಲವಾರ: ಕೊಲ್ಲೂರ ಗ್ರಾಮದಿಂದ ತರಕಸಪೇಟ್, ಶಾಂಪೂರ ಹಳ್ಳಿ, ಅಲಿಪುರ ತಾಂಡಾದ ಮೂಲಕ ರಾಷ್ಟ್ರೀಯ ಹೆದ್ದಾರಿ 150ಕ್ಕೆ ಸೇರುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಕೊಲ್ಲೂರ ಗ್ರಾಮದಿಂದ ತರಕಸಪೇಟ್ವರೆಗೆ ಜನೆವರಿಯಲ್ಲಿ ಘೈಪೀರ ವಲಿ ಹಾಗೂ ಶಾಪೀರ ವಲಿ ಜಾತ್ರೆ ಸಂದರ್ಭದಲ್ಲಿ ಮುರುಮ ಹಾಕಿ ರಸ್ತೆ ಸುಧಾರಣೆ ಮಾಡಲಾಗಿತ್ತು. ನಂತರ ಗುತ್ತಿಗೆದಾರರು ಮುರುಮ ಹಾಕಿದ ರಸ್ತೆಗೆ ಸಮರ್ಪಕ ನೀರು ಸಿಂಪಡಿಸಿ ರೋಲಿಂಗ್ ಮಾಡದೆ ಇದ್ದುದ್ದರಿಂದ ಮುರುಮ್ನಲ್ಲಿರುವ ದೊಡ್ಡ ಕಲ್ಲುಗಳು ಕಿತ್ತು ಹೊರ ಬಂದಿವೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಪ್ರಸಂಗಗಳು ನಡೆದಿವೆ. ಈ ಭಾಗದಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರು, ರೋಗಿಗಳು ಇದೇ ರಸ್ತೆಯಲ್ಲಿಯೇ ನಿತ್ಯ ಪ್ರಯಾಣಿಸಬೇಕಾಗಿದ್ದು, ಆಸ್ಪತ್ರೆ, ಹೆಚ್ಚುವರಿ ಶಿಕ್ಷಣಕ್ಕೆ ವಾಡಿ, ನಾಲವಾರ, ಯಾದಗಿರಿ ಮೇಲೆ ಅವಲಂಬಿತರಾಗಿದ್ದಾರೆ. ಮಳೆ ಬಾರದೆ ಇದ್ದಾಗ ಧೂಳುನಲ್ಲಿ ಹೋಗುವ ಸ್ಥಿತಿಯಿದೆ. ಮಳೆ ಬಂದರಂತು ರಸ್ತೆ ಕೆಸರಿನ ಗದ್ದೆಯಾಗಿ ಮಾರ್ಪಟಾಗುತ್ತದೆ ಎಂದು ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಪ್ರಿಯಂಕ್ ಖರ್ಗೆ ಪ್ರತಿನಿಧಿಸಿಸುವ ಕ್ಷೇತ್ರದ ರಸ್ತೆ ದುಸ್ಥಿತಿ ಸಚಿವರು ಕೂಡಲೇ ಗಮನಿಸಿ ಹರಿಸಬೇಕಾಗಿದೆ.