ಕೋಲಿ ಎಸ್ಟಿ ಸೇರ್ಪಡೆ ಕೇಂದ್ರಕ್ಕೆ ಶಿಫಾರಸು

ಕಲಬುರಗಿ ಖಾಸಗಿ ಹೊಟೆಲ್‌ವೊಂದರಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಿವಲಿಂಗಪ್ಪ ಕಿನ್ನೂರ್ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ತಿಪ್ಪಣ್ಣಪ್ಪ ಕಮಕನೂರ್, ಮಹಾದೇವ ಜಾನಕರ್, ಬಾಳಕೃಷ್ಣ ಅಕ್ಕಿಸಾಗರ, ಡಾ.ಮಲ್ಲಿಕಾರ್ಜುನ ಮುಕ್ಕಾ, ಸಿದ್ಧಪ್ಪ ಅಕ್ಕಿಸಾಗರ, ನೀಲಕಂಠ ಜಮಾದಾರ್, ದೇವಿಂದ್ರ ಚಿಗರಳ್ಳಿ ಇತರರಿದ್ದರು.
ಕಲಬುರಗಿ ಖಾಸಗಿ ಹೊಟೆಲ್‌ವೊಂದರಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಿವಲಿಂಗಪ್ಪ ಕಿನ್ನೂರ್ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ತಿಪ್ಪಣ್ಣಪ್ಪ ಕಮಕನೂರ್, ಮಹಾದೇವ ಜಾನಕರ್, ಬಾಳಕೃಷ್ಣ ಅಕ್ಕಿಸಾಗರ, ಡಾ.ಮಲ್ಲಿಕಾರ್ಜುನ ಮುಕ್ಕಾ, ಸಿದ್ಧಪ್ಪ ಅಕ್ಕಿಸಾಗರ, ನೀಲಕಂಠ ಜಮಾದಾರ್, ದೇವಿಂದ್ರ ಚಿಗರಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಹೇಳಿಕೆ
  • ಶಿವಲಿಂಗಪ್ಪ ಕಿನ್ನೂರ್ ಅಭಿನಂದನಾ ಸಮಾರಂಭ
ಕಲಬುರಗಿ: ಹಿಂದುಳಿದ ಕೋಲಿ, ಕಬ್ಬಲಿಗ, ಬಾರ್ಕಿ, ಮೊಗವೀರ ಹಾಗೂ ಬೇಸ್ತ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟಿçÃಯ ಸಮಾಜ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ದೆಹಲಿಗೆ ನಿಯೋಗ ಕರೆದೊಯ್ಯುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಸಮಾಜ ನಿರ್ಮಾಣದಲ್ಲಿ ಶಿವಲಿಂಗಪ್ಪ ಕಿನ್ನೂರ ಮಹತ್ವದ ಶಕ್ತಿಯಾಗಿ ಹೊರಹೊಮ್ಮಿದ್ದು, ಮಹಾರಾಷ್ಟç ಮತ್ತು ಕರ್ನಾಟಕ ರಾಜ್ಯಗಳ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ರಾಷ್ಟಿçÃಯ ಸಮಾಜ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಜಾನಕರ್ ಮಾತನಾಡಿ, ಮಹಾರಾಷ್ಟçದಲ್ಲಿ ಪಕ್ಷಕ್ಕೆ ನಾಲ್ಕು ಜನ ಶಾಸಕರು, ೯೫ ಕಾರ್ಪೋರೇಟರ್‌ಗಳು ಹಾಗೂ ಗುಜರಾತ್‌ನಲ್ಲಿ ೨೮ ಕಾರ್ಪೋರೇಟರ್‌ಗಳ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಅಸ್ಸಾಂ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದವರಾಗಿದ್ದರೂ, ಸಮುದಾಯಕ್ಕೆ ಸಂವಿಧಾನಾತ್ಮಕ ನ್ಯಾಯ ಒದಗಿಸುವಲ್ಲಿ ಸವಾಲುಗಳಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ದೆಹಲಿ ಹೈಕಮಾಂಡ್ ಪ್ರಭಾವ ಹೆಚ್ಚಿದೆ. ಆದರೆ ನಮ್ಮ ಪಕ್ಷದಲ್ಲಿ ಆ ಸಂಸ್ಕೃತಿ ಇಲ್ಲ ಎಂದು ಹೇಳಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಳಕೃಷ್ಣ ಅಕ್ಕಿಸಾಗರ ಮಾತನಾಡಿದರು. ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ಅಧ್ಯಕ್ಷತೆ ವಹಿಸಿದ್ದರು.
ಆರ್‌ಎಸ್‌ಪಿ ಎಂಪ್ಲಾಯ್ಸ್ ಫೆಡರೇಷನ್ ಅಧ್ಯಕ್ಷ ಸಿದ್ಧಪ್ಪ ಅಕ್ಕಿಸಾಗರ ಇದ್ದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ನೀಲಕಂಠ ಜಮಾದಾರ್ ನಿರೂಪಿಸಿದರು. ದೇವಿಂದ್ರ ಚಿಗರಳ್ಳಿ ಸ್ವಾಗತಿಸಿದರು. ಯಲ್ಲಪ್ಪ ತಳವಾರ ಅತಿಥಿ ಪರಿಚಯ ಮಾಡಿದರು. ಶಂಕರ ಕಟ್ಟಿಸಂಗಾವಿ ಪ್ರಾಸ್ತಾವಿಕ ಮಾತನಾಡಿದರು. ಭೀಮಾಶಂಕರ ಡಾಂಗೆ ಪ್ರಾರ್ಥಿಸಿದರು.
ಶಿವಶರಣಪ್ಪ ಕೋಬಾಳ, ವಸಂತರಾವ ನರಿಬೋಳ, ಶಾಂತಪ್ಪ ಕೂಡಿ, ಸೂರ್ಯಕಾಂತ ಗುಡ್ಡೊಡಗಿ, ಸಾಬಣ್ಣ ವಡಗೇರಿ, ಚಂದ್ರಶೇಖರ ಭಂಕಲಗಿ, ಬಸವರಾಜ ಮೊರಟಗಿ, ಬಾಬುರಾವ ಬಾದನಹಳ್ಳಿ, ಶ್ಯಾಮಕುಮಾರ ಸಂಗಾವಿ, ಶರಣಪ್ಪ ದೊಡ್ಡಮನಿ, ಜಯಶ್ರೀ ಕಿರಣಗಿ, ರಾಜೇಂದ್ರ ರಾಜವಾಳ, ಶ್ರೀಮಂತ ಮಾವನೂರ್, ದಿಗಂಬರ ರಾಠೋಡ, ಬಾಬುರಾವ ಡೊಳ್ಳೆಗೌಡ್ರ, ದಿಗಂಬರ ಕಾಡಪ್ಪಗೋಳ ಇತರರಿದ್ದರು.
"

ಶೋಷಿತ ವರ್ಗಗಳ ಆಶೋತ್ತರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿದ್ದು, ಈ ಹೋರಾಟದಲ್ಲಿ ಓಬಿಸಿ ವರ್ಗಗಳು ಸಂಘಟಿತರಾಗುವ ಅಗತ್ಯವಿದೆ. ಆಗ ಮಾತ್ರ ಯಶಸ್ಸು ಸಾಧ್ಯ.

ತಿಪ್ಪಣ್ಣಪ್ಪ ಕಮಕನೂರ್,ವಿಧಾನ ಪರಿಷತ್ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net