ಕಾಯಕ ನಿಷ್ಠೆಯ ಶ್ರೇಷ್ಠ ಶರಣ ಮಾಚಿದೇವ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವೀರ ಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಪುಷ್ಪ ಸಮರ್ಪಿಸಿದರು. ಡಾ.ಟಿ.ಡಿ.ರಾಜಣ್ಣ, ಮಲ್ಲಣ್ಣ ಮಡಿವಾಳ, ಪ್ರೊ.ದಶರಥ ನಾಯಕ್, ಕುಲಸಚಿವ ಪ್ರೊ.ರಮೇಶ್ ಲಂಡನಕರ್, ಡಾ.ಎನ್.ಜಿ.ಕಣ್ಣೂರು, ಜಯಾಂಬಿಕ, ಡಾ.ಹನುಮಂತ ಜಂಗೆ ಇದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವೀರ ಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಪುಷ್ಪ ಸಮರ್ಪಿಸಿದರು. ಡಾ.ಟಿ.ಡಿ.ರಾಜಣ್ಣ, ಮಲ್ಲಣ್ಣ ಮಡಿವಾಳ, ಪ್ರೊ.ದಶರಥ ನಾಯಕ್, ಕುಲಸಚಿವ ಪ್ರೊ.ರಮೇಶ್ ಲಂಡನಕರ್, ಡಾ.ಎನ್.ಜಿ.ಕಣ್ಣೂರು, ಜಯಾಂಬಿಕ, ಡಾ.ಹನುಮಂತ ಜಂಗೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿಕೆ
  • ಗುಲ್ಬರ್ಗ ವಿವಿಯಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ
ಕಲಬುರಗಿ: ಕಾಯಕ ನಿಷ್ಠೆ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಶ್ರೇಷ್ಠ ಹಿರಿಯ ಶರಣ. ಸಮಾಜದ ಆಚಾರ ವಿಚಾರ ಸುಧಾರಿಸಿ ಸೂಕ್ತ ಮಾರ್ಗ ತೋರಿಸಲು ಅವತರಿಸಿದ ಮಹಾಪುರುಷ. ಅವರ ಜೀವನ ಮೌಲ್ಯ ಮತ್ತು ಗುಣ ಅನುಸರಿಸಿ ಬದುಕುವುದನ್ನು ಕಲಿಯಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಹೇಳಿದರು.
ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವೀರ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ, ಶರಣರ ಕುರಿತ ಕಾರ್ಯಕ್ರಮಗಳಿಂದ ಅವರ ಜೀವನ, ಬೋಧನೆ ಮತ್ತು ವಚನಗಳಿಂದ ಸಮಾಜಕ್ಕೆ ಅಧಿಕೃತ ಮಾಹಿತಿ ಸಿಗುತ್ತಿವೆ. ಅವರ ತತ್ವಾದರ್ಶ ಗೌರವಿಸಿ ಅನುಸರಿಸಿದರೆ ಉತ್ತಮ ಜೀವನ ನಮ್ಮದಾಗಲಿದೆ. ಮಾಚಿದೇವ ಶರಣರನ್ನು ಪ್ರಕೃತಿ ಗೌರವಿಸಿದೆ. ಸಮಾಜದ ದುಖಃ ದುಮ್ಮಾನಗಳು ನಿವಾರಣೆಯಾಗಿವೆ. ದುರ್ಬಲರು ಮತ್ತು ನಿರ್ಗತಿಕರ ರಕ್ಷಣೆ ಮತ್ತು ಬದುಕಿನ ಸುಧಾರಣೆಗೆ ಮಾಚಿದೇವರ ನುಡಿಗಳು ಎಚ್ಚರಿಸಿವೆ ಎಂದರು.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ಡಿ.ರಾಜಣ್ಣ ಮಾತನಾಡಿ, ವೀರ ಶರಣ ಮಡಿವಾಳ ಮಾಚಿದೇವರು ೧೨ನೇ ಶತಮಾನದ ಶ್ರೇಷ್ಠ ಹಾಗೂ ಹಿರಿಯ ಶರಣರು. ಇವರ ಕಟ್ಟು ನಿಟ್ಟಿನ ಕಾಯಕ ನಿಷ್ಠೆ ಗುರುತಿಸಿ ಮಡಿವಾಳ ಮಾಚಿ ತಂದೆ ಎಂದು ಬಸವಣ್ಣ ಸಂಬೋಧಿಸಿದ್ದಾರೆ. ಕಾಯಕ ನಿಷ್ಠೆಯ ಶ್ರೇಷ್ಠತೆಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಶೌರ್ಯದಲ್ಲಿ ಪರಾಕ್ರಮಿ, ಕಾಯಕದಲ್ಲಿ ನಿಷ್ಠೆ, ಶ್ರದ್ಧಾ ಭಕ್ತಿ, ಪವಾಡ ಪುರುಷ, ಅತಿಮಾನುಷ ಶಕ್ತಿ ಅವರಿಗಿತ್ತು ಎಂದು ಅನೇಕ ಕಾವ್ಯ, ಪುರಾಣ, ಶಾಸನಗಳು, ಶಿಲ್ಪಗಳು ಮತ್ತು ಜನಪದರ ಹಾಡುಗಳಲ್ಲಿ ವ್ಯಕ್ತವಾಗಿವೆ. ಬಿಜ್ಜಳನ ಸೈನ್ಯ ಸೋಲಿಸಿದ. ಮಡಿ ಬಟ್ಟೆ ಕೆಡಿಸುವ ದುಷ್ಟರನ್ನು ಆಕ್ರಮಿಸಿದ. ಸಂಬAಧ, ಅಧಿಕಾರ ಮತ್ತು ಅಮಿಷಗಳಿಗೆ ಒಳಗಾಗದೆ ಸಮಾಜದ ಮಲೀನ ವ್ಯವಸ್ಥೆ ಮತ್ತು ಜನರ ಮನಸ್ಸು ಶುದ್ಧ ಮಾಡಿದ. ಸಮಾಜದ ಕೊಳಕು ತೊಳೆದು ವೇದ, ಶಾಸ್ತç, ಆಗಮ, ತರ್ಕ ಮತ್ತು ಪುರಾಣ ತಿರಸ್ಕರಿಸಿ ಸಮಾನತೆಗೆ ಶ್ರಮಿಸಿದ ಮಾಚಿದೇವರು ಅತಿಯಾಸೆಗೆ ಒಳಗಾಗದೆ ಸ್ವ ಇಚ್ಚೆಯಿಂದ ಒಳಿತಿನ ಕಡೆಗೆ ಸಾಗಬೇಕು ಎಂಬ ಸಂದೇಶದೊAದಿಗೆ ಮಾಚಿದೇವರ ಜೀವನ ವೃತ್ತಾಂತ, ವಚನ ಸಂದೇಶಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ ಎಂದು ವಿವರಿಸಿದರು.
ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿ, ವೀರ ಶರಣ ಮಡಿವಾಳ ಮಾಚಿದೇವರು ೧೧೨೦ ರಿಂದ ೧೧೩೦ರ ಅವಧಿಯಲ್ಲಿ ಜನ್ಮ ತಾಳಿದರೆಂಬ ಇತಿಹಾಸವಿದೆ. ದೇವರ ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬಂದು ಸಮಾಜ ತಿದ್ದುವ ಕೈಂಕರ್ಯ ಮಾಡಿದ. ಜಗತ್ತಿನ ಅನೇಕ ಕಡೆಗಳಿಂದ ಬಂದ ಶರಣರು ಅನುಭವ ಮಂಟಪ ಸೇರಿ ಅಸ್ಪಶ್ಯತೆ, ಜಾತೀಯತೆ, ಆಡಂಬರ, ಕಂದಾಚಾರ ನಿರ್ಮೂಲನೆ ಮಾಡಿ ಮಾನವೀಯತೆ ಮೆರೆದರು ಎಂದರು.
ಕಾರ್ಯಕ್ರಮ ಸಂಚಾಲಕ ಡಾ.ಹನುಮಂತ ಜಂಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ದಶರಥ ನಾಯಕ ಇದ್ದರು. ಡಾ.ಎಂ.ಬಿ. ಕಟ್ಟಿ ನಿರೂಪಿಸಿದರು.
"

೧೨ನೇ ಶತಮಾನದ ಶರಣರ ಜೀವನ, ವಚನ ಚಳುವಳಿ, ಶರಣರ ಸಾಧನೆ, ವಚನ ಕೃತಿ ಮತ್ತು ವಿಚಾರಗಳ ಕುರಿತು ಕಿರು ಸಂಶೋಧನೆ ಆಗಬೇಕು. ಶರಣರ ಬಗ್ಗೆ ಮತ್ತಷ್ಟು ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶರಣರು, ದಾರ್ಶನಿಕರ ಸತ್ಯ ಸಂದೇಶಗಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹಿಸಬೇಕು. ಕಿರು ಸಂಶೋಧನೆಯಿAದ ಶರಣರ ಬದುಕು ಪರಿಚಯ, ಜೀವನ ಮೌಲ್ಯ, ಮಾನವೀಯತೆ ಗುಣ ವಿದ್ಯಾರ್ಥಿಗಳು ಅನುಸರಿಸುವಂತಾಗಲಿ.

ಪ್ರೊ.ಶಶಿಕಾAತ್ ಉಡಿಕೇರಿ,ಕುಲಪತಿ, ಗುಲಬರ್ಗಾ ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net