

ಕರಜಗಿ: ಅಕ್ಕಲಕೋಟ ತಾಲೂಕಿನ ಜೇವೂರ ಗ್ರಾಮದಲ್ಲಿ ಕಾಶಿ ವಿಶ್ವೇಶ್ವರ ಮಹಾರಾಜರ ರಥೋತ್ಸವ ಭಕ್ತರ ಜಯಘೋಷಗಳ ಮಧ್ಯೆ ಶನಿವಾರ ಜರುಗಿತು. ಹೂವಿನ ಹಾರ ಹಾಗೂ ವಿದ್ಯುತ್ ದೀಪಾಲಂಕಾರ ಕಣ್ಮನಸೆಳೆಯಿತು. ದೀಪಾವಳಿ ಪಾಡ್ಯದಿಂದ ಪಾಂಡವ ಪಂಚಮಿವರೆಗೆ ಪ್ರತಿದಿನ ಆಧ್ಯಾತ್ಮಿಕ, ಸಾಮಾಜಿಕ, ಸಾಂಸತಿಕ ಕಾರ್ಯಕ್ರಮ ನಡೆದವು. ಸಂಜಯ ಪಾಟೀಲ್ ವಾರಕರಿ ತಂಡದಿಂದ ಅಧ್ಯಾತ್ಮಿಕ ಹಾಗೂ ವಿನೋದ ಅವರಿಂದ ಕೀರ್ತನೆ, ಮಹಾಲಿಂಗಯ್ಯ ಶಾಸ್ತ್ರಿಗಳಿಂದ ಜೀವನ ದರ್ಶನ, ಯೂಟ್ಯೂಬ್ ಸ್ಟಾರ್ ಹಣಮಂತ ಆಲಮಟ್ಟಿ, ಗಿಡ್ಡ ಶಂಕ್ರ್ಯಾ ತಂಡದಿಂದ ಹಾಸ್ಯ ಸಂಜೆ, ಬೆಂಗಳೂರು ಝೀ ಕನ್ನಡ ಸರಿಗಮಪದ ಜ್ಞಾನ ಗುರುರಾಜ, ಪ್ರಜ್ಞಾ ಮರಾಠೆ ಹಾಗೂ ಅನ್ವಿಥ ಕುಮಾರ ತಂಡದ ಸ್ವರ ಸಂಜೆ ಭಕ್ತರನ್ನು ರಂಜಿಸಿದವು. ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪ್ರಮುಖರಾದ ಸುಭಾಷ ಪಾಟೀಲ್, ಕಾಶಿರಾಯ ಪಾಟೀಲ್, ಕಾಶಿನಾಥ ಕಡಗಂಚಿ, ಶಿವರಾಜ ಬೋರಿಕರಜಗಿ, ಅಂಬಾರಾಯ ಕನೋಜಿ, ಈರಣ್ಣ ಕಣಮುಸೆ, ಶಂಕರ ಅಜಗೊಂಡೆ, ಲಕ್ಷಿ$್ಮಪುತ್ರ ಕಿರನಳ್ಳಿ, ಸೋಮಯ್ಯಾ ಸ್ವಾಮಿ ಇತರರಿದ್ದರು.