ಕಲಬುರಗಿ ವಿಟಿಯು ಪ್ರಾದೇಶಿಕ ಕೇಂದ್ರ ಟಾಪ್​

ಕಲಬುರಗಿ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಸ್ಥಾಪಿಸಿರುವ 5ಜಿ ಲ್ಯಾಬ್​ ಕುರಿತು ನಿರ್ದೇಶಕಿ ಪ್ರೊ.ಶುಭಾಂಗಿ ಡಿಸಿ, ಪ್ರಾಧ್ಯಾಪಕ ಪ್ರೊ.ಬಸವರಾಜ ಗಾದಗೆ ಮಾಧ್ಯಮ ಮಿತ್ರರಿಗೆ ಗುರುವಾರ ಮಾಹಿತಿ ನೀಡಿದರು. ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.
ಕಲಬುರಗಿ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಸ್ಥಾಪಿಸಿರುವ 5ಜಿ ಲ್ಯಾಬ್​ ಕುರಿತು ನಿರ್ದೇಶಕಿ ಪ್ರೊ.ಶುಭಾಂಗಿ ಡಿಸಿ, ಪ್ರಾಧ್ಯಾಪಕ ಪ್ರೊ.ಬಸವರಾಜ ಗಾದಗೆ ಮಾಧ್ಯಮ ಮಿತ್ರರಿಗೆ ಗುರುವಾರ ಮಾಹಿತಿ ನೀಡಿದರು. ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.
Published on: 

ಕಲಬುರಗಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು)ಲ್ಲಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ 5ಜಿ ಲ್ಯಾಬ್​ (ಪ್ರಯೋಗಾಲಯ) ಸ್ಥಾಪಿಸಿ ಅತ್ಯುತ್ತಮ ಸಾಧನೆ ತೋರಿ ರಾಜ್ಯದಲ್ಲೆ ಪ್ರಥಮ ಹಾಗೂ ದೇಶದಲ್ಲೆ ಉತ್ತಮ ಎಂಬ ಶ್ರೇಯಸ್ಸಿಗೆ ಪಾತ್ರವಾಗಿದೆ.

ಮೂರು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರ ಸೇರಿ ದೇಶದ 100 ಪ್ರಮುಖ ಸಂಸ್ಥೆಗಳಲ್ಲಿ 5ಜಿ ಪ್ರಯೋಗಾಲಯ ಸ್ಥಾಪಿಸಿದ್ದಾರೆ. ಆದರೆ ಕಲಬುರಗಿ ಪ್ರಯೋಗಾಲಯ ತನ್ನ ಕಾರ್ಯಮೆತೆಯಿಂದ ರಾಜ್ಯದಲ್ಲಿ ಸ್ಥಾಪನೆ ಆಗಿರುವ 8 ಪ್ರತಿಷ್ಠಿತ ಸಂಸ್ಥೆಗಳಲ್ಲಿನ 5ಜಿ ಪ್ರಯೋಗಗಳಲ್ಲಿ ಮೊದಲ ಸ್ಥಾನ ಪಡೆದಿದ್ದು ವಿಟಿಯುಗೆ ಹೆಮ್ಮೆಯ ಸಂಗತಿ ಎಂದು ಕೇಂದ್ರದ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ ಹಾಗೂ ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಶನ್​ ಇಂಜಿನಿಯರಿಂಗ್​ ವಿಭಾಗದ ಪ್ರಾಧ್ಯಾಪಕ ಪ್ರೊ.ಬಸವರಾಜ ಗಾದಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಐಐಎಸ್​ಸಿ (ಭಾರತೀಯ ವಿಜ್ಞಾನ ಸಂಸ್ಥೆ) ಬೆಂಗಳೂರು. ಎನ್​ಐಟಿಕೆ ಸುರತ್ಕಲ್​, ಐಐಐಟಿ ಧಾರವಾಡ, ಎಸ್​ಐಟಿ ತುಮಕೂರು, ಬಿಎಂಎಸ್​ ಇಂಜಿನಿಯರಿಂಗ್​ ಕಾಲೇಜು, ಎಂ.ಎಸ್​. ರಾಮಯ್ಯ ತಂತ್ರಾನ ಸಂಸ್ಥೆ ಮತ್ತು ಎಂಐಟಿ ಮಣಿಪಾಲ ಸಂಸ್ಥೆಯಲ್ಲಿ 5ಜಿ ಲ್ಯಾಬ್​ಗಳಿವೆ. ಆದರೆ ವಿಟಿಯು ಕಲಬುರಗಿ ಕೇಂದ್ರದ ಪ್ರಯೋಗಾಲಯ ಟಾಪ್​ ಪರ್ಫಾರ್ಮಿಂಗ್​ ಲ್ಯಾಬ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತು ದೂರಸಂಪರ್ಕ ಇಲಾಖೆ ಕರ್ನಾಟಕ ವೃತ್ತದ ಉಪ ಮಹಾನಿರ್ದೇಶಕ ಶ್ರೀನಿವಾಸ ಗಲಗಲಿ ಅವರು ವಿಟಿಯು ಕುಲಪತಿ ಪ್ರೊ.ಎಸ್​. ವಿದ್ಯಾಶಂಕರ್​ಗೆ ಪತ್ರ ಬರೆದು ತಿಳಿಸಿದ್ದಾರೆ. ಒಟ್ಟಾರೆ ಕಲಬುರಗಿಗೆ ಪ್ರಯೋಗಾಲಯ ಸ್ಥಾಪನೆಯಾಗಲು ಹಾಗೂ ಕಾರ್ಯಮತೆ ತೋರಲು ಕುಲಪತಿ ಪ್ರೊ.ವಿದ್ಯಾಶಂಕರ್​ ಅವರ ಪ್ರಯತ್ನ ಮತ್ತು ಮಾರ್ಗದರ್ಶನ ಕಾರಣ ಎಂದು ಹೇಳಿದರು.

ನಾಲ್ಕು ಪೇಟೆಂಟ್​

5ಜಿ ಪ್ರಯೋಗಾಲಯ ನಾಲ್ಕು ಪೇಟೆಂಟ್​ ಪಡೆದಿದೆ. ಡ್ರೋನ್​ ಮೂಲಕ ಕೀಟನಾಶಕ ಸಿಂಪಡಣೆ ಸೇರಿದ್ದು, ಪ್ರಮುಖವಾಗಿ ಈ ಉನ್ನತ ಗುಣಮಟ್ಟದ ಕಾರ್ಯಮತೆ ಉಳಿಸಿಕೊಳ್ಳಲು ಮತ್ತು ಪೇಟೆಂಟ್​ ಉತ್ಪಾದನೆ, ತಂತ್ರಜ್ಞಾನ ವಾಣಿಜ್ಯೀಕರಣ ಮತ್ತು ರಾಷ್ಟ್ರಕ್ಕಾಗಿ ಸ್ಥಳಿಯ ಪರಿಹಾರಗಳ ಅಭಿವೃದ್ಧಿಯತ್ತ 5ಜಿ ಬಳಸಿಕೊಳ್ಳಲು ವಿಟಿಯು ಬದ್ಧತೆ ಹೊಂದಿದೆ. ಒಟ್ಟಾರೆ ವಿಟಿಯು ಪ್ರಾದೇಶಿಕ ಕೇಂದ್ರದ 5ಜಿ ಪ್ರಯೋಗಾಲಯ ದೇಶದ ಗಮನ ಸೆಳೆದಿದ್ದು, ಶೈಣಿಕ ಬಲವರ್ಧನೆಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದು ಪ್ರೊ.ಶುಭಾಂಗಿ ಹಾಗೂ ಪ್ರೊ.ಬಸವರಾಜ ಗಾದಗೆ ಸಂತಸಪಟ್ಟರು.

5ಜಿ ಪ್ರಯೋಗಾಲಯ ಅಂತಾರಾಷ್ಟ್ರೀಯ ಕೊಡುಗೆ, ಸಂಶೋಧನಾ ಪ್ರಮಾಣೀಕರಣ ಜತೆ ಬಳಕೆಯ ಪ್ರಕರಣ ಮತ್ತು ಉತ್ಪನ್ನ ಅಭಿವೃದ್ಧಿ, ಕ್ರಿಯಾತ್ಮಕ 5ಜಿ ಉತ್ಪನ್ನಗಳ ಅಭಿವೃದ್ಧಿ ಒಳಗೊಂಡಿದೆ. ಈ ಸಾಧನೆ ವಿಟಿಯು ದೂರದೃಷ್ಟಿ ನಾಯಕತ್ವ, ಅತ್ಯಾಧುನಿಕ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮ ಶೈಣಿಕ ಸಹಯೋಗದ ಬದ್ಧತೆಗೆ ಸಾಯಾಗಿದೆ.
> ಪ್ರೊ.ಶುಭಾಂಗಿ ಡಿ.ಸಿ. ನಿರ್ದೇಶಕಿ, ವಿಟಿಯು ಪ್ರಾದೇಶಿಕ ಕೇಂದ್ರ ಕಲಬುರಗಿ
ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿನ 5ಜಿ ಲ್ಯಾಬ್​ ಸಾಧನೆ ನಿಜಕ್ಕೂ ದೂರದೃಷ್ಟಿ ಹಾಗೂ ಸುಧಾರಿತ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮ ಶೈಕ್ಷಣಿಕ ಸಾಧನೆ ಸಹಯೋಗಕ್ಕೆ ಸಾಯಾಗಿರುವುದು ಹೆಮ್ಮೆಯ ವಿಚಾರ.
> ಪ್ರೊ.ಬಸವರಾಜ ಗಾದಗೆ ಪ್ರಾಧ್ಯಾಪಕ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರ