ಕಲಬುರಗಿ: ಜಿಲ್ಲೆಯ ವಿವಿಧೆಡೆ ಮೊಬೈಲ್ ಕಳೆದುಕೊಂಡವರ 173 ಮೊಬೈಲ್ಗಳನ್ನು ಸಿಇಐಆರ್ ಪೋರ್ಟ್ಲ್ ಮೂಲಕ ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು ಅವುಗಳ ವಾರಸುದಾರರಿಗೆ ಹಸ್ತಾಂತರಿಸಿ, ಮುಖದಲ್ಲಿ ಮಂದಹಾಸ ಮೂಡಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಕಳುವಾದ, ಮರೆ ಹೋದ, ಕಳೆದುಕೊಂಡ ಮೊಬೈಲ್ ೋನ್ಗಳನ್ನು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ಯುಪ್ಮೆಂಟ್ ಐಡೆಂಟಿಟಿ ರೆಜಿಸ್ಟರ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದು, ಪತ್ತೆ ಹಚ್ಚಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಕಳೆದುಹೋದ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ನಲ್ಲಿ ಮೊಬೈಲ್ ನಂಬರ್, ಐಎಎಂಆರ್ ಸಂಖ್ಯೆಯನ್ನು ಉಲ್ಲೇಖಿಸಿ, ದೂರು ನೀಡಿದರೆ ಅದನ್ನು ಟ್ರಾ$್ಯಕ್ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಡಿಎಸ್ಪಿಗಳು, ಸೈಬರ್ ಕೆಂ ವಿಭಾಗ ಹಾಗೂ ಜಿಲ್ಲೆಯ ವಿವಿಧ ಉಪವಿಭಾಗಗಳ ಪೊಲೀಸರು ಕಾರ್ಯಾಚರಣೆ, ನಿಗಾ ಇಟ್ಟು ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದು, ನಿರಂತರವಾಗಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಎರಡ್ಮೂರು ತಿಂಗಳಿಗೊಮ್ಮೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೂರು ದಾಖಲಿಸುವುದು ಹೇಗೆ?: ಮೊಬೈಲ್ ಕಳೆದ ತಕ್ಷಣ ಜನರು ಗಾಬರಿಯಾಗುವ ಬದಲು ಸಿಇಐಆರ್ ಪೋರ್ಟಲ್ಗೆ ಭೇಟಿ ನೀಡಿ ಐಎಂಇಐ ಸಂಖ್ಯೆಯೊಂದಿಗೆ ದೂರು ದಾಖಲಿಸಬೇಕು. ಇದರಿಂದ ಕಳ್ಳರು ಮೊಬೈಲ್ ಬಳಸದಂತೆ ಬ್ಲಾಕ್ ಮಾಡಬಹುದು. ಪೊಲೀಸರು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿ ಆಗಿದೆ ಎಂದರು.