ಪೊಲೀಸ್​ ಆಯುಕ್ತರ ಕಚೇರಿಗೆ ಐಎಸ್​ಒ

ಕಲಬುರಗಿ ನಗರ ಪೊಲೀಸ್​ ಆಯುಕ್ತರ ಕಚೇರಿಗೆ ಐಎಸ್​ಓ ಪ್ರಮಾಣ ಪತ್ರ
ಕಲಬುರಗಿ ನಗರ ಪೊಲೀಸ್​ ಆಯುಕ್ತರ ಕಚೇರಿಗೆ ಐಎಸ್​ಓ ಪ್ರಮಾಣ ಪತ್ರ
Published on
ಕಲಬುರಗಿ: -ಜನಸ್ನೇಹಿ ವ್ಯವಸ್ಥೆ, ತ್ವರಿತ ನಾಗರಿಕ ಸೇವೆ, ವೃತ್ತಿಪರತೆ ಹಾಗೂ ಆಡಳಿತದಲ್ಲಿ ಗುಣಮಟ್ಟದ ಸೇವೆ ಒದಗಿಸುತ್ತಿರುವ ನಗರ ಪೊಲೀಸ್​ ಆಯುಕ್ತಾಲಯಕ್ಕೆ ಅಂತಾರಾಷ್ಟ್ರೀಯ ಐಎಸ್​ಒ 9001: 2015 ಪ್ರಮಾಣ ಪತ್ರ ಲಭಿಸಿದೆ.
ಆಡಳಿತದಲ್ಲಿ ಸರಳೀಕರಣ, ಸಮಯಕ್ಕೆ ಸರಿಯಾಗಿ ಬಡ್ತಿ, ವರ್ಗಾವಣೆ, ಟಿಎ ಡಿಎ, ದಾಖಲೆಗಳ ನಿರ್ವಹಣೆ, ಸಾರ್ವಜನಿಕ ಹಿತ, ಪಾಸ್ಪೋರ್ಟ್​ ಪರಿಶೀಲನೆ ತ್ವರಿತಗತಿ ಸೇರಿ ವಿವಿಧ ವಿಷಯಗಳನ್ನು ಪರಿಗಣಿಸಿ, ಸುಮಾರು ನಾಲ್ಕು ತಿಂಗಳವರೆಗೆ ಪರಿಶೀಲನೆ ನಡೆಸಿ, ನಗರ ಆಯುಕ್ತಾಲಯಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಪ್ರಮಾಣಪತ್ರ ದೊರಕಿದೆ.
ಭಾನುವಾರ ನಗರ ಪೊಲೀಸ್​ ಆಯುಕ್ತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ನಗರ ಪೊಲೀಸ್​ ಆಯುಕ್ತರಿಗೆ ವಿತರಿಸಿದರು.
ನಂತರ ಮಾತನಾಡಿದ ಸಚಿವರು, ಆಯುಕ್ತಾಲಯಕ್ಕೆ ಪ್ರಮಾಣ ಪತ್ರ ದೊರಕಿದ್ದು, ಶ್ಲಾನೀಯ. ಆದರೆ ಜನರಿಂದ ಹೊಗಳಿಕೆಯ ಪ್ರಶಸ್ತಿಯೂ ಜನಸ್ನೇಹಿ ಆದಾಗ ಸಿಗಲಿದೆ. ಈ ನಿಟ್ಟಿನಲ್ಲಿ ಪೊಲೀಸರು ಶ್ರಮಿಸಬೇಕು ಎಂದರು.
ಸಕಾಲ, ಅಟಲ್​ ಜನಸ್ನೇಹಿ ಕೇಂದ್ರದಿಂದ ಸಾರ್ವಜನಿಕ ಸೇವೆ ವಿಲೇವಾರಿಯಲ್ಲಿ ರಾಜ್ಯಕ್ಕೆ ಕಲಬುರಗಿ ಮೊದಲ ಸ್ಥಾನ, ಜಿಪಂ ನಲ್ಲಿ ತೆರಿಗೆ ವಸೂಲಾತಿಯಲ್ಲಿ ಕಲಬುರಗಿ ಜಿಲ್ಲೆ 13 ನೇ ಸ್ಥಾನ ಪಡೆದಿದೆ. ಪೊಲೀಸ್​ ಕಮಿಷನರೇಟ್​ ಉತ್ತಮ ಸ್ಥಾನ ಪಡೆದಿದ್ದು, ಖುಷಿ ವಿಚಾರ ಎಂದರು.
ರಾಜ್ಯದ ವೈದ್ಯಕಿಯ ಶಿಕ್ಷಣ, ಕೌಲಶ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್​ ಆಯುಕ್ತಾಲಯ ಅಮೂಲಾಗ್ರ ಬದಲಾವಣೆ, ಸಾರ್ವಜನಿಕರ ಸೇವೆ ವಿಸ್ತರಣೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿದ್ದಕ್ಕೆ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆ ತಿಳಿಸಿದರು.
ನಗರ ಪೊಲೀಸ್​ ಆಯುಕ್ತ ಡಾ.ಎಸ್​.ಡಿ.ಶರಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್​, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್​, ಕೂಡಾ ಅಧ್ಯಕ್ಷ ಮಜಹರ್​ ಆಲಂ ಖಾನ್​, ಜೆಸ್ಕಾಂ ಅಧ್ಯಕ್ಷ ಪ್ರವಿಣ ಹರವಾಳ, ಡಿಸಿ ಬಿ.ಫೌಜಿಯಾ ತರನ್ನಮ್​, ಜಿಪಂ ಸಿಇಓ ಭಂವರ್​ಸಿಂಗ್​ ಮೀನಾ, ಎಸ್​ಪಿ ಅಡ್ಡೂರು ಶ್ರೀನಿವಾಸಲು ಇತರರಿದ್ದರು. ಬಸವೇಶ್ವರ ಹೀರಾ ನಿರೂಪಿಸಿದರು.
ಸಾರ್ವಜನಿಕರ ಸೇವೆಗಳಲ್ಲಿ ಸುಧಾರಣೆ, ಆಡಳಿತ ವ್ಯವಸ್ಥೆಯಲ್ಲಿ ಶ್ರೀ ಪ್ರಕ್ರಿಯೆ, ದಾಖಲೆಗಳ ವಿಲೇವಾರಿಗೆ ವೇಗ ಸೇರಿ ಇಡೀ ಪೊಲೀಸ್​ ವ್ಯವಸ್ಥೆಯಲ್ಲಿ ಗುಣಮಟ್ಟದ ಆಡಳಿತ ತಂದಿದ್ದು, ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಹಿತಿ, ತಂತ್ರಜ್ಞಾನ ವಿಭಾಗದಲ್ಲೂ ಸುಧಾರಣೆ ಮಾಡಿದ್ದರಿಂದ ಅಂತಾರಾಷ್ಟ್ರೀಯ ಐಎಸ್​ಒ 9001: 2015 ಪ್ರಮಾಣ ಪತ್ರ ದೊರಕಿದೆ. ಇದಕ್ಕೆ ಎಲ್ಲ ಅಧಿಕಾರಿ, ಸಿಬ್ಬಂದಿ ಶ್ರಮ ಶ್ಲಾನೀಯ.
> ಡಾ.ಶರಣಪ್ಪ ಎಸ್​.ಡಿ.
ನಗರ ಪೊಲೀಸ್​ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net