ನೀರಿಗಾಗಿ ಕಡಗಂಚಿ ಗ್ರಾಪಂಗೆ ಬೀಗ

ಕುಡಿಯುವ ನೀರಿಗಾಗಿ ಮಹಿಳೆಯರು ಕಡಗಂಚಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.  ಅರುಣಕುಮಾರ ಇಟಗಿ, ಸಂಜುಕುಮಾರ ತ್ತರಗಿ, ಅಶೋಕ ಕಡಗಂಚಿ, ಮಲ್ಲಿಕಾರ್ಜುನ ಧುದನ, ಉಲ್ಲಾಸ ಸುತಾರ ಇತರರಿದ್ದರು.
ಕುಡಿಯುವ ನೀರಿಗಾಗಿ ಮಹಿಳೆಯರು ಕಡಗಂಚಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಅರುಣಕುಮಾರ ಇಟಗಿ, ಸಂಜುಕುಮಾರ ತ್ತರಗಿ, ಅಶೋಕ ಕಡಗಂಚಿ, ಮಲ್ಲಿಕಾರ್ಜುನ ಧುದನ, ಉಲ್ಲಾಸ ಸುತಾರ ಇತರರಿದ್ದರು.
Published on: 

ಆಳಂದ: ಕಡಗಂಚಿಯ ವಾರ್ಡ್​ 5 ಮತ್ತು 6ರಲ್ಲಿ 15 ದಿನಗಳಿಂದ ಕುಡಿಯುವ ನೀರು ಬಾರದ್ದರಿಂದ ಸಿಡಿದೆದ್ದ ಮಹಿಳೆಯರು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಕೊಡಗಳೊಂದಿಗೆ ಆಗಮಿಸಿದ ಹೆಣ್ಮಕ್ಕಳು ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಗಿದ್ದು, ಪಂಪ್​ ಆಪರೇಟರ್​ಗಳು ಸರಿಯಾಗಿ ನೀರು ಪೂರೈಸುತ್ತಿಲ್ಲ. ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ನೋಡಲ್​ ಅಧಿಕಾರಿ ಸುರೇಂದ್ರ ಪಾಟೀಲ್​ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪಿಡಿಒ ಉಷಾ ಪಾಟೀಲ್​, ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ ಬಳಿಕ ಪಂಚಾಯಿತಿ ಬೀಗ ತೆಗೆಯಲಾಯಿತು.

ಗ್ರಾಮಸ್ಥರಾದ ಅರುಣಕುಮಾರ ಇಟಗಿ, ಸಂಜುಕುಮಾರ ಘತ್ತರಗಿ, ಅಶೋಕ ಕಡಗಂಚಿ, ಮಲ್ಲಿಕಾರ್ಜುನ ಧುದನ, ಉಲ್ಲಾಸ ಸುತಾರ, ಶಿವಲೀಲಾ ಇಟಗಿ, ಲಕ್ಷಿ$್ಮ ಧೂಳೆ, ಲಕ್ಷ್ಮೀ ಇಟಗಿ, ಅಂಬಿಕಾ ಪಾಟೀಲ್​, ಶಿವಲೀಲಾ ಕುಡಕಿ, ಸಿದ್ದಮ್ಮ ಮಾದಗುಂಡ, ವಿಜಯಲಕ್ಷ್ಮೀ, ನಿಖಿಲ್​ ಕುಂಬಾರ, ಬಸವ್ವ ಜವಳಿ, ಕಾವೇರಿ ಕುಂಬಾರ, ಜಗದೇವಿ ಭೂಸನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net