

ಕಲಬುರಗಿ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದ್ದರಿಂದ ಸರ್ಕಾರಿ ಮಹಾವಿದ್ಯಾಲಯ ಮೈದಾನದಲ್ಲಿ ಮೂನ್ ಕ್ರಿಕೆಟ್ ಕ್ಲಬ್ನಿಂದ ಆಯೋಜಿಸಿರುವ ಅಂಡರ್ 16 ಕಲಬುರಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಚಿಂಚೋಳಿ ವಾರಿಯರ್ಸ್ ಬರೋಬ್ಬರಿ 208 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಚಿಂಚೋಳಿ ವಾರಿಯರ್ಸ್ 47.5 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 305 ರನ್ಕಲೆಹಾಕಿತು. ನಾಯಕ ಕಾರ್ತಿಕ್ ರಾಠೋಡ್ (88 ರನ್, 75 ಎಸೆತ, 5 ಬೌಂಡರಿ, 1 ಸಿಕ್ಸ್), ಶಿವರಾಜ ಬಿ. (56 ರನ್, 56 ಎಸೆತ, 8 ಬೌಂಡರಿ) ಅರ್ಧಶತಕ ಆರ್ಭಟದ ಜತೆಗೆ ಯಶ್ ನಿಶಾದ್ (44 ರನ್, 47 ಎಸೆತ, 6 ಬೌಂಡರಿ), ಸಂದೀಪ ಪವಾರ್ (23 ರನ್, 13 ಎಸೆತ, 5 ಬೌಂಡರಿ) ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು. ಜೇವರ್ಗಿ ಸೂಪರ್ ಗ್ಲಾಂಟ್ಸ್ ಪರ ವಿಜಿತ್ 62ಕ್ಕೆ 3, ಮನೋಜ ಗಾಯಕವಾಡ 48ಕ್ಕೆ 2 ವಿಕೆಟ್ ಪಡೆದರು.
306 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಜೇವರ್ಗಿ ಸೂಪರ್ ಗ್ಲಾಂಟ್ಸ್ 22.1 ಓವರ್ನಲ್ಲಿ ಕೇವಲ 97 ರನ್ಗಳಿಸಿ ಸರ್ವಪತನ ಕಂಡು ಸೋಲನುಭವಿಸಿತು. ಸಯ್ಯದ್ ಮುಹಮ್ಮದ್ ಅಯ್ಯನುಲ್ಹಾ ಹುಸೇನಿ (23 ರನ್, 26 ಎಸೆತ, 3 ಬೌಂಡರಿ), ನಾಯಕ ವಿಜಿತ್ (23 ರನ್, 33 ಎಸೆತ, 4 ಬೌಂಡರಿ), ಮನೋಜ ಗಾಯಕವಾಡ (10 ರನ್, 6 ಎಸೆತ, 1 ಬೌಂಡರಿ, 1 ಸಿಕ್ಸ್) ಹೊರತುಪಡಿಸಿ ಇನ್ನುಳಿದವರು ರನ್ಗಳಿಸುವಲ್ಲಿ ವಿಫಲವಾದರು. ಚಿಂಚೋಳಿ ವಾರಿಯರ್ಸ್ ಪರ ನಾಯಕ ಕಾರ್ತಿಕ ರಾಠೋಡ್ 21ಕ್ಕೆ 3, ಯಶ್ ನಿಶಾದ್ 31ಕ್ಕೆ 3, ಪ್ರಜ್ವಲ್ ಕಿಟ್ಟದ್ 20ಕ್ಕೆ 2 ವಿಕೆಟ್ ಪಡೆದು ಗಮನಸೆಳೆದರು.
ಆಲ್ರೌಂಡ್ ಪ್ರದರ್ಶನ ನೀಡಿ ಕಾರ್ತಿಕ್ ರಾಠೋಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.