ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ

ಅಲ್ಲಮಪ್ರಭು ಪಾಟೀಲ್
ಅಲ್ಲಮಪ್ರಭು ಪಾಟೀಲ್
Published on
ಕಲಬುರಗಿ: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಜಂಗಮ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲಿ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಣ ಒದಗಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಆಗ್ರಹಿಸಿದರು.
ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದೆ¯್ಲÁ ಗ್ರಾಮಗಳಲ್ಲಿ ಜಂಗಮ ಸಮಾಜದವರು ನಿತ್ಯ ಬೆಳಗಿನ ಜಾವ ಎದ್ದು ಕೈಯಲ್ಲಿ ಕಂದೀಲು, ಚಿಮಣಿ ಹಿಡಿದು, ಜೋಳಿಗೆ ಹೆಗೆಲಿಗೆ ಹಾಕಿ ಮನೆ ಮನೆ ಕದ ತಟ್ಟುತ್ತ ಎಲ್ಲರನ್ನು ಎಬ್ಬಿಸಿ ಕಾಯಕಕ್ಕೆ ಹಚ್ಚುತ್ತಿದ್ದರು. ರೈತರಿಗಂತೂ ಈ ಜಂಗಮ ಸಮಾಜದವರೆಂದರೆ ಪಂಚಪ್ರಾಣ. ಈಗ ಬದಲಾದ ಕಾಲಘಟ್ಟದಲ್ಲಿ ಇಂತಹ ಯಾವ ಆಚರಣೆಗಳೂ ಇಲ್ಲ. ಹೀಗಾಗಿ ಜಂಗಮ ಸಮಾಜ ಇಂದು ಕಡು ಕಷ್ಟದಲ್ಲಿದೆ. ಈ ಸಮಾಜದವರು ಅಭಿವೃದ್ಧಿ ನಿಗಮದ ಬೇಡಿಕೆಯೊಂದಿಗೆ ಗಮನ ಸೆಳೆಯುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಭಾಗದಲ್ಲಿ ಜಂಗಮ ಸಮಾಜದವರು ಅಪಾರ ಸಂಖ್ಯೆಯಲ್ಲಿz್ದÁರೆ. ಈ ಸಮಾಜದ ಏಳಿಗೆಗೆ ಸರ್ಕಾರವೇ ಯೋಜನೆ ರೂಪಿಸಬೇಕು, ನಿಗಮ, ಮಂಡಳಿ ರಚಿಸಿ ಅವರ ಕೈ ಹಿಡಿಯಬೇಕೆಂದು ಆಗ್ರಹಿಸಿದರು.
ಕಲಬುರಗಿ ನಗರದ ರಾಮ ಮಂದಿರ ರಸ್ತೆಯಲ್ಲಿ ಬರುವ ಕೋಟನೂರ್ ಬಳಿಯ ಜಿಡಗಾ ಮಠದ ಪ್ರದೇಶದಲ್ಲಿ ಹೊಸ ಪೊಲೀಸ್ ಠಾಣೆ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಗೃಹ ಸಚಿವರ ಗಮನ ಸೆಳೆದಿದ್ದು ಮಂಜೂರು ಮಾಡುವುದಾಗಿ ಹೇಳಿz್ದÁರೆ. ೪೦ ಸಾವಿರ ಜನಸಂಖ್ಯೆ ಇಲ್ಲಿದ್ದರೂ ಠಾಣೆ ತುಂಬ ದೂರ. ಹೀಗಾಗಿ ಈ ಪ್ರದೇಶಕ್ಕೆ ಹೊಸ ಠಾಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪಾಟೀಲರಿಗೆ ಅಭಿನಂದನೆ
ಸದನದಲ್ಲಿ ಜಂಗಮ ಸಮಾಜದ ಸಂಕಷ್ಟಗಳನ್ನು ಹೇಳುತ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸುವ ಮೂಲಕ ಸರ್ಕಾರದ ಗಮನ ಸೆಳೆದಿರುವ ಶಾಸಕ ಅಲ್ಲಮಪ್ರಭು ಪಾಟೀಲರನ್ನು ಸರಡಗಿ ಚಿಕ್ಕವಿರೇಶ್ವರ ಮಠದ ರೇವಣಸಿದ್ದ ಶಿವಾಚಾರ್ಯರು ಅಭಿನಂದಿಸಿz್ದÁರೆ.
ಜAಗಮ ಸಮಾಜ ಇಂದು ಕಡು ಕಷ್ಟದಲ್ಲಿದೆ. ಪಾರಂಪರಿಕ ಕಾಯಕವಿಲ್ಲ. ಬದಲಾದ ಜಗದಲ್ಲಿ ಈ ಸಮಾಜ ಬದುಕಬೇಕು, ಸರ್ಕಾರದಿಂದ ಅಭಿವೃದ್ಧಿ ಮಂಡಳಿ ರಚಿಸಿ ಹಣ ನೀಡಬೇಕು ಎಂದು ಸಮಾಜದ ಪರವಾಗಿ ಶಾಸಕರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಶಾಸಕರು ನಮ್ಮ ನೋವು ಪ್ರಸ್ತಾಪಿಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಗಮನ ಸೆಳೆದಿz್ದÁರೆ ಎಂದಿದ್ದಾರೆ.
"

ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಟ್ಟಕ್ಕೆ ಅಭಿವೃದ್ಧಿ ಪಡಿಸುವ ಸಂಕಲ್ಪ ಸಚಿವ ಸಂಪುಟ ಸಭೆಯ¯್ಲÁಗಿತ್ತು. ಅದರಂತೆ ನಗರದ ರಸ್ತೆ ಸೇರಿ ಮೂಲ ಸೌಕರ್ಯಕ್ಕೆ ಹಣ ನೀಡಬೇಕು. ೭೦೦ ಕಿಮೀ ಉದ್ದದ ಚರಂಡಿಗೂ ಹಣ ಬಿಡುಗಡೆಯಾಗಬೇಕು. ನಗರದಲ್ಲಿ ನಾಲ್ಕೂ ದಿಕ್ಕಿನಲ್ಲಿ ಉಪ ನಗರ ಬಸ್ ನಿಲ್ದಾಣಗಳಿಗೆ ಶೀಘ್ರ ಯೋಜನೆ ರೂಪಿಸಿ ಹಣ ನೀಡಬೇಕು.

| ಅಲ್ಲಮಪ್ರಭು ಪಾಟೀಲ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net