ದೈವಿಕ ಚಿಂತನೆಗಳಿಂದ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯ

ತೇಗಲತಿಪ್ಪಿಯಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ  ಮಾತನಾಡಿದರು. ನಾಗನಾಥ ಪಾಟೀಲ್​, ಹನುಮಂತರಾವ ಪೊಲೀಸ್​ ಪಾಟೀಲ್​, ಗಣಪತಿರಾವ್​ ಮಾಲಿಪಾಟೀಲ್​, ಮಹೇಶ ಪೊಲೀಸ್​ ಪಾಟೀಲ್​ ಇತರರಿದ್ದರು.
ತೇಗಲತಿಪ್ಪಿಯಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಮಾತನಾಡಿದರು. ನಾಗನಾಥ ಪಾಟೀಲ್​, ಹನುಮಂತರಾವ ಪೊಲೀಸ್​ ಪಾಟೀಲ್​, ಗಣಪತಿರಾವ್​ ಮಾಲಿಪಾಟೀಲ್​, ಮಹೇಶ ಪೊಲೀಸ್​ ಪಾಟೀಲ್​ ಇತರರಿದ್ದರು.
Published on: 

ಚಿಂಚೋಳಿ: ಸನಾತನ ಧರ್ಮದಲ್ಲಿ ಭಕ್ತಿ, ಶ್ರದ್ಧೆ ಮತ್ತು ಸದಾಚಾರಗಳು ಮನುಷ್ಯನ ಜೀವನಕ್ಕೆ ಸನ್ಮಾರ್ಗ ತೋರಿಸುತ್ತವೆ. ಆಂಜನೇಯ ಸ್ವಾಮಿಯ ನಿಷ್ಠೆ ಹಾಗೂ ಸೇವಾಭಾವನೆ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳು ಹೇಳಿದರು. ತೇಗಲತಿಪ್ಪಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅದ್ದೂರಿ ಪಲ್ಲಕ್ಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದು, ದೈವಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ&ನೆಮ್ಮದಿ ನೆಲೆಸಲು ಸಾಧ್ಯ ಎಂದು ನುಡಿದರು. ಶಾಸಕ ಡಾ.ಅವಿನಾಶ ಜಾಧವ್​, ಪ್ರಮುಖರಾದ ನಾಗನಾಥ ಪಾಟೀಲ್​, ಹನುಮಂತರಾವ ಪೊಲೀಸ್​ ಪಾಟೀಲ್​, ಗಣಪತಿರಾವ್​ ಮಾಲಿಪಾಟೀಲ್​, ಮಹೇಶ ಪೊಲೀಸ್​ ಪಾಟೀಲ್​, ಅರುಣಕುಮಾರ ಪಾಟೀಲ್​, ಗಾಳಪ್ಪ ಬಿಟ್ಟಿ, ಬಸವರಾಜ ವಟರ, ಶಾಮರಾವ ಮೋತಕಪಲ್ಲಿ, ರೇವಣಸಿದ್ದಪ್ಪ ಮೋತಕಪಲ್ಲಿ, ಸಿದ್ರಾಮ ತೇಗಲತಿಪ್ಪಿ, ಶಿವುಕುಮಾರ ತೇಗಲತಿಪ್ಪಿ, ಮಲ್ಲಿಕಾರ್ಜುನ ಜಂತಪಲ್ಲಿ ಇತರರಿದ್ದರು. ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಾದಸ್ವರ, ಜಾನಪದ ಕಲಾತಂಡಗಳ ಮೇಳ ಹಾಗೂ ಭಕ್ತರ ಜೈೂಷಗಳ ನಡುವೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net