ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಿ

ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಮಾತನಾಡಿದರು. ವಿಜಯಮಹಾಂತೇಶ ಹೂಗಾರ, ಅಮೃತ ಪಾಟೀಲ್​, ಗಿರಿರಾಜ ಸಜ್ಜನ್​, ಜಗನ್ನಾಥ ಚಟ್ನಳ್ಳಿ ಇತರರಿದ್ದರು.
ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಮಾತನಾಡಿದರು. ವಿಜಯಮಹಾಂತೇಶ ಹೂಗಾರ, ಅಮೃತ ಪಾಟೀಲ್​, ಗಿರಿರಾಜ ಸಜ್ಜನ್​, ಜಗನ್ನಾಥ ಚಟ್ನಳ್ಳಿ ಇತರರಿದ್ದರು.
Published on: 

ಚಿಂಚೋಳಿ : ಕರ್ನಾಟಕ ರಾಜ್ಯೋತ್ಸವದಂದು ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿ, ಅಂಗನವಾಡಿ ಕೇಂದ್ರ ಮತ್ತು ಮಹಾ ಪುರುಷರ ವೃತ್ತಗಳಿಗೆ ಕಡ್ಡಾಯವಾಗಿ ದೀಪಾಲಂಕಾರ ಮಾಡಿ ಸಿಂಗರಿಸಬೇಕು ಎಂದು ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಬ್ಬದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ರಾಜ್ಯೋತ್ಸವ ನಡೆಸಲು ಎಲ್ಲರೂ ಕೈಜೋಡಿಸಬೇಕು. ಅಂಗಡಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಬೇಕು. ನಿಯಮ ಉಲ್ಲಂಸುವ ವ್ಯಾಪಾರಿಗಳಿಗೆ ಸೂಕ್ತ ದಂಡ ವಿಧಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ರಾಜ್ಯೋತ್ಸವದಂದು ಅಂಬೇಡ್ಕರ್​ ವೃತ್ತದಿಂದ ಪ್ರಜಾಸೌಧದವರೆಗೆ ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಶಾಲಾ&ಕಾಲೇಜು ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯ ಪರಿಷತ್​ ಪದಾಧಿಕಾರಿಗಳು ಹಾಗೂ ಕನ್ನಡಪರ ಸಂಟನೆಗಳ ಮುಖಂಡರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಲೋಹಾರ ಮುಲ್ಲಾಮಾರಿ ಜಲಾಶಯ ಅಭಿಯಂತರ ಅಮೃತ ಪಾಟೀಲ್​, ಪ್ರಮುಖರಾದ ಗಿರಿರಾಜ ಸಜ್ಜನ್​, ಜಗನ್ನಾಥ ಚಟ್ನಳ್ಳಿ, ಜಯಪ್ಪ ಚಾಪಲ್​, ಸುರೇಶ ದೇಶಪಾಂಡೆ, ವಿಠಲ ಕುಸಾಳೆ, ಗೋಪಾಲ ಕೊಡಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net