ವೈದ್ಯ ವೃತ್ತಿಯಿಂದ ಆತ್ಮ ಸಂತೃಪ್ತಿ

ಮಳಖೇಡದಲ್ಲಿ ಆದರ್ಶ ವೈದ್ಯ ದಂಪತಿ ಪ್ರಶಸ್ತಿ ಪಡೆದ ಡಾ.ನಾಗಮ್ಮ, ಡಾ.ಜಗನ್ನಾಥ ಗಡ್ಡದ ದಂಪತಿಯನ್ನು ಗ್ರಾಮಸ್ಥರು ಸತ್ಕರಿಸಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯ, ರಾಜಶೇಖರ ಪುರಾಣಿಕ, ಶರಣು ಅವಂಟಿ, ವಿನೋದ ಕೊತಂಬರಿ, ಶ್ರೀಶೈಲ ಮರಗೋಳ ಇತರರಿದ್ದರು.
ಮಳಖೇಡದಲ್ಲಿ ಆದರ್ಶ ವೈದ್ಯ ದಂಪತಿ ಪ್ರಶಸ್ತಿ ಪಡೆದ ಡಾ.ನಾಗಮ್ಮ, ಡಾ.ಜಗನ್ನಾಥ ಗಡ್ಡದ ದಂಪತಿಯನ್ನು ಗ್ರಾಮಸ್ಥರು ಸತ್ಕರಿಸಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯ, ರಾಜಶೇಖರ ಪುರಾಣಿಕ, ಶರಣು ಅವಂಟಿ, ವಿನೋದ ಕೊತಂಬರಿ, ಶ್ರೀಶೈಲ ಮರಗೋಳ ಇತರರಿದ್ದರು.
Published on: 

ಮಳಖೇಡ: ಸೇವಾ ಮನೋಭಾವದ ವೈದ್ಯ ವೃತ್ತಿಯಿಂದ ಆತ್ಮ ಸಂತೃಪ್ತಿಯ ಭಾವ ಮೂಡಿದೆ ಎಂದು ಖ್ಯಾತ ವೈದ್ಯ ಡಾ.ಜಗನ್ನಾಥ ಗಡ್ಡದ ಹೇಳಿದರು. ಕಾರ್ತಿಕೇಶ್ವರ ಮಠದಲ್ಲಿ ಗುರುವಾರ ಆಯೋಜಿಸಿದ್ದ ಆದರ್ಶ ವೈದ್ಯ ದಂಪತಿಗೆ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದ ಸೇವೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಕಳೆದ ಇಪ್ಪತೈದು ವರ್ಷಗಳ ಸುಧೀರ್ ಸೇವೆಗೆ ಆದರ್ಶ ದಂಪತಿ ಪ್ರಶಸ್ತಿ ದೊರಕಿದ್ದು ಖುಷಿ ತಂದಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಮಾತನಾಡಿದರು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯ, ತಾಪಂ ಮಾಜಿ ಅಧ್ಯೆ ಸುರೇಖಾ ಪುರಾಣಿಕ, ಪ್ರಮುಖರಾದ ದಿನೇಶ ಸಣ್ಣೂರ, ಶರಣು ಅವಂಟಿ, ವಿನೋದ ಕೊತಂಬರಿ, ವೀರಣ್ಣ ಸಜ್ಜನಶೆಟ್ಟಿ, ಶರಣಯ್ಯ ಸ್ಥಾವರಮಠ, ದೇವಾನಂದ ದೇಸಾಯಿ, ಚನ್ನಯ್ಯ ಪುರಾಣಿಕ, ಶ್ರೀಶೈಲ ಮರಗೋಳ, ಚಂದ್ರಶೇಖರ ಸಂಪಾ, ದೇವಾನಂದ ಪುರಾಣಿಕ, ರಾಜಶೇಖರ ಮಠಪತಿ, ಶಿವು ಪಾಟೀಲ್​, ಶಾಂತಪ್ಪ ಮುಕರಂಬಿ, ಅಂಬರೀಷ ಗುಡಿ, ಉದಯ ತಳಕಿನ್​, ನಾಗರಾಜ ತೇಗಲತಿಪ್ಪಿ, ಫಯಾಜ್​ ಇನಾಮದಾರ, ಮಂಜು ಚಂದನಕೇರಿ, ಬಸವರಾಜ ರಾಯವಡೆ, ಸಿದ್ದು ಪಾಟೀಲ ಕೆಸರಟಗಿ, ಮಲಕಣ್ಣ ದಂಡೋತಿ, ತೌಸಿಫಖಾನ್​, ಮಲ್ಲಪ್ಪ ಆರಬೋಳ ಇತರರಿದ್ದರು. ಆದರ್ಶ ವೈದ್ಯ ದಂಪತಿ ಪ್ರಶಸ್ತಿ ಪುರಸತರಾದ ಡಾ.ನಾಗಮ್ಮ ಹಾಗೂ ಡಾ.ಜಗನ್ನಾಥ ಗಡ್ಡದ ಅವರಿಗೆ ಗ್ರಾಮಸ್ಥರಿಂದ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net